ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಕೆ

By Mahesh
|
Google Oneindia Kannada News

ಪಾಟ್ನಾ, ಆ.8: ಕಳೆದ ಮೂರು ದಿನಗಳ ಹಿಂದೆ ಜಮ್ಮು-ಕಾಶ್ಮೀರ್ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರ ಗುಂಡಿಗೆ ಬಲಿಯಾದ ಭಾರತೀಯ ಯೋಧರ ಪಾರ್ಥೀವ ಶರೀರಗಳು ತವರು ರಾಜ್ಯಕ್ಕೆ (ಬಿಹಾರ) ತಲುಪಿದ್ದು ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಹುತಾತ್ಮರಾದ ಐವರು ಯೋಧರಲ್ಲಿ ನಾಲ್ವರು ಬಿಹಾರ ಹಾಗೂ ಒಬ್ಬರು ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದು, ರಾತ್ರಿ ಇಲ್ಲಿಗೆ ತಲುಪಿದ ನಾಲ್ವರು ಯೋಧರ ಪಾರ್ಥೀವ ಶರೀರಗಳನ್ನು ಅಪಾರ ಶೋಕ ಸಾಗರದ ನಡುವೆ ಬರಮಾಡಿಕೊಳ್ಳಲಾಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಮೃತ ಯೋಧರ ಕುಟುಂಬಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ ತಲಾ 10 ಲಕ್ಷ ರೂ. ಪರಿಹಾರವನ್ನು ನಿರಾಕರಿಸಿರುವ ಯೋಧರ ಕುಟುಂಬಗಳ ಸದಸ್ಯರು ನಮಗೆ ಪರಿಹಾರ ಬೇಡ ಪಾಕಿಸ್ತಾನದ ಈ ದುಷ್ಕೃತ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿವೆ.

ಸಿಪಾಯ್ ವಿಜಯ್ ಕುಮಾರ್ ರಾಯ್ (27) ಲ್ಯಾನ್ಸ್ ನಾಯರ್ ಶಂಭು ಶರಣ್ ಸಿಂಗ್ (29), ನಾಯಕ್ ಪ್ರೇಮ್ ‌ನಾಥ್ ಸಿಂಗ್ (35) ಹಾಗೂ ಸಿಪಾಯ್ ರಘುನಂದನ್ ಪ್ರಸಾದ್ (23), ಮೃತ ಯೋಧರು. ಇವರೆಲ್ಲ ಕ್ರಮವಾಗಿ ಬಿಹಾರದ ಪಾಟ್ನಾ, ಭೋಜ್ ಪುರಿ , ಹಾಛಾಪ್ರಾ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಚಕನ್-ದಾ-ಬಾಘ್ ಸಮೀಪದ ಗಡಿಯಲ್ಲಿ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದರು. ಯೋಧರಿಗೆ ಅಂತಿಮ ನಮನ ಸಲ್ಲಿಸಲು ಮುಂದಿನ ಚಿತ್ರ ಸರಣಿ ನೋಡಿ...

ಉಭಯ ಸದನಗಳಲ್ಲಿ ಸದ್ದು

ಉಭಯ ಸದನಗಳಲ್ಲಿ ಸದ್ದು

ಗಡಿ ನಿಯಮ ಉಲ್ಲಂಘಿಸಿ ಭಾರತದ ನೆಲಕ್ಕೆ ಕಾಲಿಟ್ಟು ಐವರು ಯೋಧರನ್ನು ಕೊಂದ ಪಾಕಿಸ್ತಾನ ದುಷ್ಕೃತ್ಯವನ್ನು ಎಲ್ಲೆಡೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ರಕ್ಷಣಾ ಸಚಿವ ಅಂಟನಿ ಹೇಳಿಕೆಗೆ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿತ್ತು.

ಹುತಾತ್ಮರ ಪಾರ್ಥೀವ ಶರೀರ

ಹುತಾತ್ಮರ ಪಾರ್ಥೀವ ಶರೀರ

"ಪೂಂಛ್ ಸೆಕ್ಟರ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಭಾರತೀಯರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದಾನೆ. ಶಸ್ತ್ರಾಸ್ತ್ರ ಹೊಂದಿದ್ದ ಸುಮಾರು 20 ಉಗ್ರರು ಪಾಕಿಸ್ತಾನ ಸೇನೆ ಸಮವಸ್ತ್ರ ಧರಿಸಿ ಬಂದು ಈ ಗುಂಡಿನ ದಾಳಿ ನಡೆಸಿದ್ದಾರೆ. ಕದನ ವಿರಾಮ ಉಲ್ಲಂಘನೆ ಶೆ 80ರಷ್ಟು ಅಧಿಕವಾಗಿದೆ" ಎಂದು ರಕ್ಷಣಾ ಸಚಿವ ಎ.ಕೆ ಆಂಟನಿ ಹೇಳಿಕೆ ನೀಡಿದ್ದರು.

ಕ್ಷಮೆಯಾಚಿಸಿದ ರಕ್ಷಣಾ ಸಚಿವ

ಕ್ಷಮೆಯಾಚಿಸಿದ ರಕ್ಷಣಾ ಸಚಿವ

ರಕ್ಷಣಾ ಸಚಿವ ಎಕೆ ಅಂಟನಿ ಅವರು ಭಾರತೀಯ ಯೋಧರನ್ನು ಕೊಂದವರು ಪಾಕಿಸ್ತಾನಿ ಸೈನಿಕರೇ ಎಂಬುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ. ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ರಕ್ಷಣಾ ಸಚಿವರ ಕ್ಷಮೆಯನ್ನು ಸ್ವಾಗತಿಸಿವೆ.

LOC ಬಳಿ

LOC ಬಳಿ

ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಗಡಿ ಕಾಯುತ್ತಿರುವ ದೃಶ್ಯ

ಯೋಧ ವಿಜಯ್ ಕುಮಾರ್ ಕುಟುಂಬ

ಯೋಧ ವಿಜಯ್ ಕುಮಾರ್ ಕುಟುಂಬ

ಬಿಹ್ತಾ: ಹುತಾತ್ಮ ಯೋಧ ವಿಜಯ್ ಕುಮಾರ್ ರೈ ಅವರ ಪತ್ನಿ ರೋದನ

ಬಿಹಾರದಲ್ಲಿ ಅಂತ್ಯಸಂಸ್ಕಾರ

ಬಿಹಾರದಲ್ಲಿ ಅಂತ್ಯಸಂಸ್ಕಾರ

ಪಾಟ್ನಾ: ಹುತಾತ್ಮ ನಾಲ್ವರು ಯೋಧರಿಗೆ ಬಿಹಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಹುತಾತ್ಮರ ಕುಟುಂಬದವರ ರೋದನ ಮುಗಿಲು ಮುಟ್ಟಿತು.

ಬಿಹಾರದಲ್ಲಿ ಅಂತ್ಯಸಂಸ್ಕಾರ

ಬಿಹಾರದಲ್ಲಿ ಅಂತ್ಯಸಂಸ್ಕಾರ

ಪಾಟ್ನಾ: ಹುತಾತ್ಮ ನಾಲ್ವರು ಯೋಧರಿಗೆ ಬಿಹಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಬಿಹಾರದಲ್ಲಿ ಅಂತ್ಯಸಂಸ್ಕಾರ

ಬಿಹಾರದಲ್ಲಿ ಅಂತ್ಯಸಂಸ್ಕಾರ

ಪಾಟ್ನಾ: ತೋಪುಗಳಿಂದ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.

ಮಹಾರಾಷ್ಟ್ರದ ಯೋಧ

ಮಹಾರಾಷ್ಟ್ರದ ಯೋಧ

ಮಹಾರಾಷ್ಟ್ರದ ಹುತಾತ್ಮ ಯೋಧನ ಪಾರ್ಥೀವ ಶರೀರದ ಅಂತಿಮ ಮೆರವಣಿಗೆ

ಮಹಾರಾಷ್ಟ್ರದ ಯೋಧ

ಮಹಾರಾಷ್ಟ್ರದ ಯೋಧ

ಮಹಾರಾಷ್ಟ್ರದ ಹುತಾತ್ಮ ಯೋಧನ ಪಾರ್ಥೀವ ಶರೀರದ ಅಂತಿಮ ಮೆರವಣಿಗೆ

ಮಹಾರಾಷ್ಟ್ರದ ಯೋಧ

ಮಹಾರಾಷ್ಟ್ರದ ಯೋಧ

ಮಹಾರಾಷ್ಟ್ರದ ಮರಾಠ ಇನ್ಫ್ರಾಂಟ್ರಿ ಆರ್ಮಿ ಯೋಧ ಕುಂಡಲೀಕ್ ಮಾನೆ ಅವರ ಅಂತಿಮ ಸಂಸ್ಕಾರವನ್ನು ಪಿಂಪಲ್ ಗಾಂವ್, ಕೊಲ್ಹಾಪುರದಲ್ಲಿ ನೆರವೇರಿಸಲಾಯಿತು

ಪಾಕಿಸ್ತಾನ ವಿರುದ್ಧ ಪ್ರತಿಭಟನೆ

ಪಾಕಿಸ್ತಾನ ವಿರುದ್ಧ ಪ್ರತಿಭಟನೆ

ಕದನ ವಿರಾಮ ಉಲ್ಲಂಘಿಸಿ ಗಡಿ ದಾಟಿ ಭಾರತೀಯ ಯೋಧರನ್ನು ಕೊಂದ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ.

ಪಾಕಿಸ್ತಾನ ವಿರುದ್ಧ ಪ್ರತಿಭಟನೆ

ಪಾಕಿಸ್ತಾನ ವಿರುದ್ಧ ಪ್ರತಿಭಟನೆ

ಕದನ ವಿರಾಮ ಉಲ್ಲಂಘಿಸಿ ಗಡಿ ದಾಟಿ ಭಾರತೀಯ ಯೋಧರನ್ನು ಕೊಂದ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ.

ಪಾಕಿಸ್ತಾನ ವಿರುದ್ಧ

ಪಾಕಿಸ್ತಾನ ವಿರುದ್ಧ

ಕದನ ವಿರಾಮ ಉಲ್ಲಂಘಿಸಿ ಗಡಿ ದಾಟಿ ಭಾರತೀಯ ಯೋಧರನ್ನು ಕೊಂದ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ಹೈದರಾಬಾದಿನ ಬಿಜೆಪಿ ಕಾರ್ಯಕರ್ತರು ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ.

English summary
The last rites of the four army jawans, who were killed by Pakistani troops, were on Thursday performed with full state honour in their respective native villages of Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X