ಉಡುಪಿ: ಬೆಂಕಿಯಲ್ಲಿ ಬೆಂದು ಹೋದ ದಂಪತಿ

Udupi: Tragedy at Katapady - Couple charred to death in fire incident
ಕಾಪು, ಆ.7: ಕಟಪಾಡಿಯ ಮೂಡಬೆಟ್ಟು ಸಮೀಪದ ಮನೆಯ ಕೋಣೆ ಹೊತ್ತಿ ಉರಿದು ದಂಪತಿಗಳು ಸಜೀವವಾದ ದಾರುಣ ಘಟನೆ ನಡೆದಿದೆ. ಬೆಂಕಿ ಆಕಸ್ಮಿಕದಿಂದ ದಂಪತಿ ಸುಟ್ಟು ಕರಕಲಾಗಿದ್ದಾರೆ. ಕಂಬಳಕಟ್ಟ ಕಟಪಾಡಿ ಬೀಡು ಮನೆತನಕ್ಕೊಳಪಟ್ಟ ಮನೆಗೆ ತಾಗಿಕೊಂಡಿರುವ ಹಿಂಭಾಗದ ಕೋಣೆಯೊಂದರಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಪಾವೂರು ಗುತ್ತು ವಿಜಯ ಶೆಟ್ಟಿ(58) ಹಾಗೂ ಪತ್ನಿ ಚಂದ್ರಿಕಾ ಶೆಟ್ಟಿ(49) ಎಂದು ಗುರುತಿಸಲಾಗಿದೆ. ಇವರು ಬೆಂಕಿ ಆಕಸ್ಮಿಕದಿಂದ ಅಥವಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರಬಹುದು ಎಂದು ಕಟಪಾಡಿ ಗ್ರಾಪಂ ಅಧ್ಯಕ್ಷ ವಿನಯ ಬಲ್ಲಾಳ್ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯ್ ಶೆಟ್ಟಿ ಅವರು ನವದುರ್ಗ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದರು. ಐದು ವರ್ಷ ಹಿಂದೆ ಈ ಮನೆಗೆ ಬಂದು ನೆಲೆಸಿದ್ದರು. ತಾಯಿ ಸೋಮವತಿ ಹೆಗ್ಡೆ, ಪತ್ನಿ, ಮಗಳು ಜೋತ್ಸ್ನಾ(16) ಅವರೊಂದಿಗೆ ವಾಸವಾಗಿದ್ದರು.
ಪಾವೂರು ಗುತ್ತಿನ ವಿಜಯ ಶೆಟ್ಟಿ ಐದು ವರ್ಷಗಳ ಹಿಂದೆಯಷ್ಟೆ ಈ ಮನೆಗೆ ಬಂದು ತಾಯಿ ಸೋಮವತಿ ಹೆಗ್ಡೆ, ಪತ್ನಿ, ಮಗಳು ಜೋತ್ಸ್ನಾ(16) ಅವರೊಂದಿಗೆ ವಾಸವಾಗಿದ್ದರು.

ಕೆಲಸ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ವಿಜಯ ಶೆಟ್ಟಿ ಮಂಗಳವಾರ ಮುಂಜಾನೆ ಮನೆಗೆ ಮರಳಿದ್ದರು. ಇವರು ವಾಸವಾಗಿರುವ ಕೋಣೆಯ ಸಮೀಪದಲ್ಲೇ ಇರುವ ಇನ್ನೊಂದು ಕೋಣೆಗೆ ತೆರಳಿದ್ದ ಇವರಿಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ. ಕೋಣೆಗೆ ಬೆಂಕಿ ಯಾವ ರೀತಿ ಹತ್ತಿಕೊಂಡಿತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ದಂಪತಿ ನಡುವೆ ಜಗಳವಾಗಿದ್ದಾಗಲಿ, ಆರ್ಥಿಕ ಸಮಸ್ಯೆಯಾಗಲಿ ಈ ಕುಟುಂಬಕ್ಕೆ ಎದುರಾಗಿರಲಿಲ್ಲ. ದಂಪತಿ ಅತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಕಮ್ಮಿಯಿದ್ದು, ಇದು ಆಕಸ್ಮಿಕವಾಗಿ ಆದ ದುರಂತ ಎಂದು ಸ್ಥಳೀಯರು ಹೇಳಿದ್ದಾರೆ.

ಇಬ್ಬರ ದೇಹಗಳೂ ಸಂಪೂರ್ಣ ಬೆಂಕಿಯಿಂದ ಸುಟ್ಟು ಹೋಗಿವೆ. ಬೆಂಕಿಯಿಂದ ಇಬ್ಬರ ದೇಹಗಳೂ ಸಂಪೂರ್ಣ ಸುಟ್ಟು ಹೋಗಿದ್ದರೆ, ಇಡಿ ಕೋಣೆ, ಹಂಚು ಕುಸಿದು ಬಿದ್ದು ಸುಟ್ಟು ಹೋಗಿದೆ. ಉಡುಪಿ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೊಷ್ ಕುಮಾರ್, ಕಾಪು ವೃತ್ತ ನಿರೀಕ್ಷಕ ಶಿವಾನಂದ ವಾಲೀಕಾರ್, ಕಾಪು ಠಾಣಾಧಿಕಾರಿ ಅರ್ಚನಾ ಭೇಟಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+