ಕಳೆದ ವಾರದ ಸುದ್ದಿ ಚಿತ್ರಗಳ ಹಿನ್ನೋಟ

ಬೆಂಗಳೂರು, ಆ.4: ಜುಲೈ 28 ರಿಂದ ಆಗಸ್ಟ್ 4ರ ತನಕ ದೇಶ ಅನೇಕ ಘಟನಾವಳಿಗಳನ್ನು ಕಂಡಿದೆ. ಪ್ರಮುಖ ಸುದ್ದಿಗಳನ್ನು ಹೆಕ್ಕಿ ಒನ್ ಇಂಡಿಯಾ ನಿಮ್ಮ ಮುಂದೆ ಚಿತ್ರಗಳಲ್ಲಿ ಸುದ್ದಿಗಳ ಹಿನ್ನೋಟ ನೀಡುತ್ತಿದೆ.

ಕಳೆದ ವಾರದ ಸುದ್ದಿಗಳ ಕಥೆ ವ್ಯಥೆಗಳಲ್ಲಿ ಆಂಧ್ರಪ್ರದೇಶ ಭಾಗವಾಗಿ ಸೀಮಾಂಧ್ರ ಹಾಗೂ ತೆಲಂಗಾಣವಾಗಿದ್ದು ಪ್ರಮುಖ ಸುದ್ದಿಯಾಗಿದೆ. ಉಭಯ ರಾಜ್ಯಗಳಿಗೂ ಜಂಟಿ ರಾಜಧಾನಿಯಾಗಿ ಹೈದರಾಬಾದ್ 10 ವರ್ಷ ಕಾರ್ಯ ನಿರ್ವಹಿಸಲಿದೆ. ಆಂಧ್ರ ಒಡೆಯುವುದನ್ನು ವಿರೋಧಿಸಿ ಶಾಸಕರು, ಸಂಸದರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ತೆಲಂಗಾಣದಲ್ಲಿ ಸಂಭ್ರಮ, ಸೀಮಾಂಧ್ರ ಮುಖ್ಯವಾಗಿ ರಾಯಲಸೀಮಾದಲ್ಲಿ ಭುಗಿಲೆದ್ದ ಆಕ್ರೋಶದ ಚಿತ್ರಣ ಕಾಣಬಹುದು.

ಉಳಿದಂತೆ ಪ್ರತ್ಯೇಕ ರಾಜ್ಯಕ್ಕಾಗಿ ಇತರೆ ರಾಜ್ಯಗಳಿಂದ ಬೇಡಿಕೆ ಬಂದಿದೆ. ಪ್ರತಿಭಟನೆಗಳೇ ಕಳೆದ ವಾರದ ಹೈಲೇಟ್ ಆಗಿತ್ತು. ಐಎಎಸ್ ಅಧಿಕಾರಿ ದುರ್ಗಾಶಕ್ತಿ ಅಮಾನತು ಆದೇಶದ ವಿರುದ್ಧ ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶಕ್ಕೆ ಕೋರ್ಟ್ ನೋಟಿಸ್,ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ವಿಜಯ. ಬಾಟ್ಲಾ ಹೌಸ್ ಎನ್ ಕೌಂಟರ್ ಪ್ರಕರಣ, ಸ್ನೋಡೆನ್ ಸಿಕ್ಕ ಆಶ್ರಯ, ಮತ್ತೆ ಸಂಕಷ್ಟದಲ್ಲಿ ಶ್ರೀಶಾಂತ್, ಜಿಂಬಾಬ್ವೆ ತಂಡ ಜಿಂಬಾಬ್ವೆಯಲ್ಲಿ ಸರಣಿ ಜಯ ಇವೆ ಮುಂತಾದ ಚಿತ್ರಗಳು ಇಲ್ಲಿವೆ

ನೋಯ್ಡಾದಿಂದ ಬಂದ ಸುದ್ದಿ

ನೋಯ್ಡಾದಿಂದ ಬಂದ ಸುದ್ದಿ

ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದ ಮರಳು ಮಾಫಿಯಾ ವಿರುದ್ಧ ತಿರುಗಿಬಿದ್ದಿದ್ದ ದಕ್ಷ ಐಎಎಸ್ ಅಧಿಕಾರಿ ದುರ್ಗಾಶಕ್ತಿ ಅವರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಅಮಾನತುಗೊಳಿಸಿದ್ದರು. ಮುಸ್ಲಿಂ ಪ್ರಾರ್ಥನಾ ಕಟ್ಟಡ ಗೋಡೆ ಕೆಡವಿದ ಆರೋಪ ಹೊರೆಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟಿನ ಲಕ್ನೋ ಬೆಂಚ್ ಶುಕ್ರವಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಸೋನಿಯಾ ಗಾಂಧಿ ಅವರು ಪ್ರಧಾನಿಗೆ ಈ ಬಗ್ಗೆ ಪತ್ರ ಬರೆದಿದ್ದು ಪ್ರಕರಣ ಈಗ ರಾಜಕೀಯ ತಿರುವು ಪಡೆಯುತ್ತಿದೆ.

29ನೇ ರಾಜ್ಯವಾಗಿ ತೆಲಂಗಾಣ

29ನೇ ರಾಜ್ಯವಾಗಿ ತೆಲಂಗಾಣ

ಹಲವು ದಶಕಗಳ ಹೋರಾಟ, ತ್ಯಾಗ, ಬಲಿದಾನಗಳ ನಂತರ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯಿಸಿದೆ. ಹೋರಾಟ ಸಂಕ್ಷಿಪ್ತ ಇತಿಹಾಸ ಇಲ್ಲಿದೆ ಓದಿ. ಆದರೆ, ಅಖಂಡ ಆಂಧ್ರ ವಿಭಜನೆಗೆ ಭಾರಿ ಪ್ರತಿರೋಧ ಕಂಡು ಬಂದಿದ್ದು ಸೀಮಾಂಧ್ರದ ಎಲ್ಲೆಡೆ ಪ್ರತಿಭಟನೆ ನಡೆಸಲಾಗಿದೆ.

ರಾಯಲ ಸೀಮಾ ಪ್ರತಿಭಟನೆ

ರಾಯಲ ಸೀಮಾ ಪ್ರತಿಭಟನೆ

ಅನಂತಪುರ, ಕರ್ನೂಲು ಅಲ್ಲದೆ ನೆಲ್ಲೂರು ಮುಂತಾದ ಭಾಗಗಳಲ್ಲಿ ಅಖಂಡ ಆಂಧ್ರಕ್ಕಾಗಿ ಹೋರಾಟ ನಡೆದಿದೆ. ರಾಜೀವ್ ಗಾಂಧಿ ಸೇರಿದಂತೆ ಹಲವಾರು ಜನ ನಾಯಕ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಹೊರ ರಾಜ್ಯಗಳಿಗೆ ರಸ್ತೆ ಸಾರಿಗೆ ಸಂಪರ್ಕ ಇಲ್ಲದ್ದಂತಾಗಿದೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಗೊರ್ಖಾ ಲ್ಯಾಂಡ್ ಗೆ ಆಗ್ರಹ

ಗೊರ್ಖಾ ಲ್ಯಾಂಡ್ ಗೆ ಆಗ್ರಹ

ನವದೆಹಲಿಯಲ್ಲಿ ಪ್ರತ್ಯೇಕ ಗೋರ್ಖಾ ಲ್ಯಾಂಡ್ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪಶ್ಚಿಮ ಬಂಗಾಳ ವಿಭಜನೆ ಅಸಾಧ್ಯ ಎಂದು ಸಿಎಂ ಮಮತಾ ಬ್ಯಾನರ್ಜಿ ಸ್ಪಷ್ಟವಾಗಿ ಹೇಳಿದ್ದಾರೆ.

ರಾಜೀನಾಮೆ ಪರ್ವ

ರಾಜೀನಾಮೆ ಪರ್ವ

ತೆಲಂಗಾಣ ಸ್ಥಾಪನೆ ವಿರೋಧಿಸಿ ಆಂಧ್ರಪ್ರದೇಶ(ಸೀಮಾಂಧ್ರ)ದ ಶಾಸಕರು(ಎಂಎಲ್ ಎ ಹಾಗೂ ಎಂಎಲ್ ಸಿ), ಸಂಸದರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಬೋಡೋ ಲ್ಯಾಂಡ್

ಬೋಡೋ ಲ್ಯಾಂಡ್

ಕೊಕ್ರಾಝಾರ್ ರೈಲ್ವೆ ನಿಲ್ದಾಣದಲ್ಲಿ ಬೋಡೋ ವಿದ್ಯಾರ್ಥಿ ಒಕ್ಕೂಟ(ABSU) ಹಾಗೂ ಇತರೆ ಸಂಘಟನೆಗಳು 12 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಿದ್ದರು. ಪ್ರತ್ಯೇಕ ಬೋಡೋಲ್ಯಾಂಡ್ ಗಾಗಿ ಆಗ್ರಹಿಸಿದರು.

ಸ್ನೋಡೆನ್ ಗೆ ಆಶ್ರಯ

ಸ್ನೋಡೆನ್ ಗೆ ಆಶ್ರಯ

ಯುಎಸ್ ಗುಪ್ತಚರ ಮಾಹಿತಿ ಸೋರಿಕೆ ಮಾಡಿರುವ ಎಡ್ವರ್ಡ್ ಸ್ನೋಡೆನ್ ಅವರಿಗೆ ರಷ್ಯಾದಲ್ಲಿ ಒಂದು ವರ್ಷಗಳ ತಾತ್ಕಾಲಿಕ ನೆಲೆ ಸಿಕ್ಕಿದೆ.

ಬಾಟ್ಲಾ ಹೌಸ್ ಪ್ರಕರಣ

ಬಾಟ್ಲಾ ಹೌಸ್ ಪ್ರಕರಣ

ಬಾಟ್ಲಾ ಹೌಸ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹೀದ್ದಿನ್ ಉಗ್ರ ಶಹಜಾದ್ ಅಹ್ಮದ್ ಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಸ್ಪೇನಿನಿಂದ ಸುದ್ದಿ

ಸ್ಪೇನಿನಿಂದ ಸುದ್ದಿ

ಜು.24 ರಂದು ಸ್ಯಾಂಟಿಯಾಗೋ ಡಿ ಕೊಪೊಸ್ಟೆಲಾದಲ್ಲಿ ಹಳಿ ತಪ್ಪಿದ ರೈಲು, ಈ ದುರ್ಘಟನೆಯಲ್ಲಿ ಸುಮಾರು 12 ಜನ ಸಾವನ್ನಪ್ಪಿದ್ದರು.

ಸ್ಪಾಟ್ ಫಿಕ್ಸಿಂಗ್ ಪ್ರಕರಣ

ಸ್ಪಾಟ್ ಫಿಕ್ಸಿಂಗ್ ಪ್ರಕರಣ

ಇಂಡಿಯನ್ ಪ್ರಿಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಶಾಂತ್ ಹಾಗೂ ದಾವೂದ್ ಇಬ್ರಾಹಿಂ ಅವರ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ರಾಹುಲ್ ದ್ರಾವಿಡ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಗುವಾಹಟಿ ಸ್ಫೋಟ

ಗುವಾಹಟಿ ಸ್ಫೋಟ

ಗುವಾಹಟಿಯ ಪಾಲ್ತಾನ್ ಬಜಾರ್ ನಲ್ಲಿ ಗ್ರೇನೇಡ್ ಸ್ಫೋಟದಿಂದ ಗಾಯಗೊಂಡ ವ್ಯಕ್ತಿ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ವಿಜಯೋತ್ಸವ ಸಂಭ್ರಮ ಇಲ್ಲಿದೆ

ತಿಹಾರ್ ಜೈಲ್

ತಿಹಾರ್ ಜೈಲ್

ತಿಹಾರ್ ಜೈಲಿನಲ್ಲಿ ಹೊಸದಾಗಿ ಎಫ್ ಎಂ ರೇಡಿಯೋ ವಾಹಿನಿ ಆರಂಭಿಸಲಾಗಿದೆ.

ಕಠ್ಮಂಡುವಿನಿಂದ ಸುದ್ದಿ

ಕಠ್ಮಂಡುವಿನಿಂದ ಸುದ್ದಿ

ನೇಪಾಳದ ಕಠ್ಮಂಡುವಿನ ದಶರಥ್ ಸ್ಟೇಡಿಯಂನಲ್ಲಿ ನಡೆದ SAFF ಕಪ್ ನ ಅಂತಿಮ ಹಣಾಹಣಿಯಲ್ಲಿ ನೇಪಾಳವನ್ನು 1 ಗೋಲು ಅಂತರದಿಂದ ಸೋಲಿಸಿ ಕಪ್ ಎತ್ತಿದ ಭಾರತದ 16 ವರ್ಷ ವಯೋಮಿತಿಯೊಳಗಿನ ಫುಟ್ಬಾಲ್ ತಂಡ

ಉತ್ತರಾಖಂಡ್

ಉತ್ತರಾಖಂಡ್

ಪ್ರವಾಹದಿಂದ ಹಾಳಾಗಿರುವ ಉತ್ತರಾಖಂಡ್ ಪುನರ್ ನಿರ್ಮಾಣಕ್ಕೆ 13 ಸಾವಿರ ಕೋಟಿ ನೆರವು ಬೇಡಲಾಗಿದೆ. ಈ ನಡುವೆ ಕೇದಾರನಾಥ ದೇಗುಲದ ಪೂಜೆ ಸಮಸ್ಯೆ ಬಹುತೇಕ ಅಂತ್ಯಗೊಂಡಿದ್ದು, ಸೆ.11ರಿಂದ ಪೂಜೆ ಪುನಃ ಆರಂಭಗೊಳ್ಳಲಿದೆ.

ಜಿಂಬಾಬ್ವೆಯಲ್ಲಿ ಕೊಹ್ಲಿ ಕಮಾಲ್

ಜಿಂಬಾಬ್ವೆಯಲ್ಲಿ ಕೊಹ್ಲಿ ಕಮಾಲ್

ಅತಿಥೇಯ ಜಿಂಬಾಬ್ವೆ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ತಂಡ 5-0 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದು ಬೀಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+