ದಾವೂದ್ ಅಪಾರ ಆಸ್ತಿಯ ಸಮೀಕ್ಷೆಗೆ ಅಧಿಕಾರಿಗಳ ಕೊರತೆ
ಬೆಂಗಳೂರು,
ಆಗಸ್ಟ್ 3: ದಶಕದ ಹಿಂದಿನ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ದೋಷಿ ದಾವೂದ್ ಇಬ್ರಾಹಿಂ ಬೆಂಗಳೂರು, ಹೈದರಾಬಾದ್, ಕೇರಳ, ಗೋವಾ ಸೇರಿದಂತೆ ಭಾರತದಲ್ಲಿ ನಾನಾ ಕಡೆ 1000ಕ್ಕೂ ಹೆಚ್ಚು ಆಸ್ತಿಪಾಸ್ತಿ ಹೊಂದಿದ್ದಾನೆ. ಇದರ ಮಾರುಕಟ್ಟೆ ಮೌಲ್ಯ ಒಂದು ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ. id="toptextpromo"> id='are-slot-1' class='oiad oi-axt oiadv'>ದಾವೂದ್
ಆಸ್ತಿ ಬಗ್ಗೆ India Today ಪತ್ರಿಕೆ ವರದಿಯೊಂದನ್ನು ಇತ್ತೀಚೆಗೆ ಪ್ರಕಟಿಸಿದೆ. ಈ ಪತ್ರಿಕಾ ವರದಿಯ ಪ್ರಕಾರ ದಾವೂದ್ ದೇಶಭ್ರಷ್ಟನಾಗಿ ಭಾರತ ಬಿಟ್ಟು ಹೋಗಿದ್ದರೂ ಭಾರತದಲ್ಲಿ ಇನ್ನೂ ಅಪಾರ ಆಸ್ತಿ ಮೇಲೆ ಹಿಡಿತ ಸಾಧಿಸಿದ್ದಾನೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ದಾವೂದ್ ಒಂದಷ್ಟು ಆಸ್ತಿ ಹೊಂದಿದ್ದಾನೆ ಎಂದು ವರದಿ ಹೇಳಿದೆ. id='are-slot-2' class='oiad oi-axt oiadv'>ಇತ್ತೀಚೆಗೆ
ಮುಂಬೈನಲ್ಲಿ ದಾವೂದ್ ಗೆ ಸೇರಿದ, ಸರ್ಕಾರ ಈಗಾಗಲೇ ತನ್ನ ವಶಕ್ಕೆ ಪಡೆದಿರುವ ಕಟ್ಟಡವೊಂದರ ಬಾಗಿಲನ್ನು ಅವನ ಸೋದರ ಇಕ್ಬಾಲ್ ಕಾಸ್ಕರ್ ಅಕ್ರಮವಾಗಿ ಒಡೆದಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, 'ದಾವೂದ್ ಆಸ್ತಿ ಎಷ್ಟಿದೆ. ಸರ್ಕಾರಕ್ಕೆ ಗೊತ್ತಿರುವುದು ಎಷ್ಟು, ಗೊತ್ತಿಲ್ಲದೇ ಇರುವುದು ಎಷ್ಟು?' ಎಂಬುದರ ಪಟ್ಟಿ ಮಾಡಲು ಹೊರಟಿದೆ. ಜತೆಗೆ ದಾವೂದ್ ಆಸ್ತಿಯೆಂದು ಸರ್ಕಾರಕ್ಕೆ ಗೊತ್ತಿದ್ದು, ಅವುಗಳ ಹಾಲಿ ಸ್ಥಿತಿ ಏನು ಎಂಬುದನ್ನೂ ಪತ್ತೆ ಮಾಡಿ ಅವುಗಳನ್ನು ವಶಕ್ಕೆ ಪಡೆಯುವ ಗಟ್ಟಿ ನಿರ್ಧಾರ ಮಾಡಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಚಾರ್ಜ್ ಶೀಟ್ ಹಿನ್ನೆಲೆ
ಸಭ್ಯರ ಆಟ ಕ್ರಿಕೆಟಿನಲ್ಲಿ ಕೋಲಾಹಲ ಸೃಷ್ಟಿಸಿರುವ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕಿಲ್, ಕ್ರಿಕೆಟ್ ಆಟಗಾರ ಶ್ರೀಶಾಂತ್ ಸೇರಿದಂತೆ 30 ಮಂದಿ ಮೇಲೆ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾವೂದ್ ಆಸ್ತಿಗಳ ಸಮೀಕ್ಷೆಗೆ ಹೆಚ್ಚಿನ ಮಹತ್ವ ಬಂದಿದೆ.

India Today ಪತ್ರಿಕೆ ವರದಿ
ಈ ಹಿನ್ನೆಲೆಯಲ್ಲಿ 'ಇಂಡಿಯಾ ಟುಡೆ' ಪತ್ರಿಕೆ ಭೂಗತ ಲೋಕದ ನಂಟು ಹೊಂದಿರುವ ಕೆಲವರಿಂದ ದಾವೂದ್ ಆಸ್ತಿ ಕುರಿತು ಮಾಹಿತಿ ಸಂಗ್ರಹ ಮಾಡುವ ಕೆಲಸ ಮಾಡಿದೆ. ಈ ವೇಳೆ ಭೂಗತ ಪಾತಕಿಯು ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ, ಗೋವಾ, ಕೇರಳ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಹೊಂದಿದ್ದಾನೆ.

ದಕ್ಷಿಣ ಮುಂಬೈನಲ್ಲಿಯೇ ದಾವೂದ್ 100ಕ್ಕೂ ಹೆಚ್ಚು ಆಸ್ತಿ
ಈ ಪೈಕಿ ಕೇವಲ ದಕ್ಷಿಣ ಮುಂಬೈನಲ್ಲಿಯೇ ದಾವೂದ್ 100 ಕ್ಕೂ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಪಾತಕಿಗಳ ನಂಟು ಹೊಂದಿರುವವರು ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ದಕ್ಷಿಣ ಮುಂಬೈನ Pakmodia Streetದಲ್ಲಿ Hotel Zaika ಚಿತ್ರ ಇಲ್ಲಿದೆ. ಪಾತಕಿಯ ಸೋದರ ಇಕ್ಬಾಲ್ ಕಾಸ್ಕರ್ 1 ಲಕ್ಷ ರೂ. ಠೆವಣಿಯೊಂದಿಗೆ ಮಾಸಿಕ 17,500 ರೂ.ಗೆ ಬಾಡಿಗೆಗೆ ನೀಡಿದ್ದಾನೆ.

ದಾವೂದ್ ಆಸ್ತಿಗಳು
ಇನ್ನೂ ಅಭಿವೃದ್ಧಿಯಾಗದ ಭೂಮಿ, ಅಭಿವೃದ್ಧಿಯಾಗಿರುವ ಭೂಮಿ, ಪಂಚತಾರಾ ಹೋಟೆಲ್, ಬಂಗಲೆಗಳು, ವಸತಿ ಕಟ್ಟಡ, ವಾಣಿಜ್ಯ ಕಟ್ಟಡ, ಮಾಲ್ ಹೀಗೆ ಹೆಚ್ಚು ಆದಾಯ ತರುವ ಎಲ್ಲಾ ಕಡೆಯಲ್ಲಿಯೂ ಬೇನಾಮಿ ಹೆಸರಲ್ಲಿ ದಾವೂದ್ ಹೂಡಿಕೆ ಮಾಡಿದ್ದಾನೆ. ಭಾರತದಲ್ಲಿರುವ ಅವನ ಬಂಟರು ಈ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ದಾವೂದ್ ಆಸ್ತಿ: SAFEMA ಸಮೀಕ್ಷಕರ ಕೊರತೆ
ಕಳ್ಳ ಸಾಗಣೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆ ಕಾಯಿದೆ - Smuggling and Foreign Exchange Manipulators Act of 1976 (SAFEMA) ಅನುಸಾರ ದಾವೂದ್ ಆಸ್ತಿಯು 2001ರಿಂದ ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟಿದೆ. ಆದರೆ ಭೂ ಸಮೀಕ್ಷೆ ಮಾಡಿ, ಸರ್ವೆ ಮಾಡುವುದಕ್ಕೆ ಸಮೀಕ್ಷಕರ (ಬಾಂದನುವರು) ಕೊರತೆ ಎದುರಾಗಿದೆ ಎನ್ನುತ್ತಾರೆ SAFEMA ಅಧಿಕಾರಿಗಳು. ದೇಶದಲ್ಲಿರುವ ಎಲ್ಲ SAFEMA ಕಚೇರಿಗಳಲ್ಲಿ ಅಧಿಕಾರಿಗಳ ಕೊರತೆಯಿದೆ. ಆದರೂ ಸರ್ವೆ ಮಾಡುವುದು ಅಸಾಧ್ಯವೇನೂ ಅಲ್ಲ. ಭೂಗತ ಪಾತಕಿಯ ಆಸ್ತಿಯನ್ನು ಸರ್ವೆ ಮಾಡಿಯೇ ಸಿದ್ಧ ಎನ್ನುತ್ತಾರೆ.












Click it and Unblock the Notifications