ಗಂಗಾ ಪ್ರವಾಹಕ್ಕೆ ಕೊಚ್ಚಿ ಹೋದ ಮತ್ತೊಂದು ದೇವಾಲಯ

ಶ್ರಾವಣ ಮಾಸದ ಪೂಜೆಗೆ ಹೆಸರುವಾಸಿಯಾಗಿರುವ ಮಣಿಕಾರ್ಣಿಕ ದೇವಾಲಯ ಮಂದಾಕಿನಿ ನಡಿ ತಟದಲ್ಲಿದೆ. ಉತ್ತರಕಾಶಿ ಭಾಗದಲ್ಲಿ ಗುರುವಾರ ರಾತ್ರಿ ಎಡೆಬಿಡದೇ ಬಿದ್ದ ಮಳೆಯಿಂದಾಗಿ ದೇವಾಲಯಕ್ಕೆ ಭಾರೀ ಹಾನಿ ಉಂಟಾಗಿದೆ.
ಆದರೆ ಆ ಸಮಯದಲ್ಲಿ ಯಾತ್ರಾರ್ಥಿಗಳು ಇಲ್ಲದೇ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕ ಸುರೇಶ್ ಶಾಸ್ತ್ರಿ ಹೇಳಿದ್ದಾರೆ.
ಈ ಮಧ್ಯೆ ಅಲ್ಮೋರಾದ ಅಧಿಕಾರಿ ಅಜಯ್ ಅರೋರ ಸೇತುವೆಯಿಂದ ಆಯತಪ್ಪಿ ಮಂದಾಕಿನಿ ನದಿ ಪ್ರಪಾತಕ್ಕೆ ಬಿದ್ದಿದ್ದಾರೆ.
ಹದಿನಾಲ್ಕು ಮಂದಿ ಪರಿಣತರ ತಂಡ ಅವರ ಶೋಧನೆಗೆ ಮುಂದಾಗಿದ್ದು ಇದುವರೆಗೆ ಯಾವುದೇ ಪ್ರಗತಿ ಸಾಧಿಸಲಾಗಲಿಲ್ಲ.
1991ರಲ್ಲಿ ನೂರಾರು ಜನ ಉತ್ತರಕಾಶಿ ಭಾಗದಲ್ಲಿ ಭೂಕಂಪದಿಂದ ಸಾವನ್ನಪ್ಪಿದ ನಂತರ ಮಣಿಕಾರ್ಣಿಕ ದೇವಾಲಯವನ್ನು ಪುನರ್ನಿಮಾಣ ಮಾಡಲಾಗಿತ್ತು.
ಈ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮಂದಾಕಿನಿ ನದಿ ತಟದಲ್ಲಿ ವಾಸಿಸುವರಿಗೆ ಬೇರಡೆಗೆ ಸ್ಥಳಾಂತರವಾಗುವಂತೆ ಜಿಲ್ಲಾಡಳಿತ ಸೂಚಿಸಿದೆ.












Click it and Unblock the Notifications