ಎರಡು ರೈಲು ಅಪಘಾತಗಳಿಗೆ ಇಬ್ಬರು ಬಲಿ

2-train-accidents-bus-mishap-claim-3-lives-in-kasargod
ಕಾಸರಗೋಡು, ಆಗಸ್ಟ್ 1: ನಗರದಲ್ಲಿ ಬುಧವಾರ ಎರಡು ಪ್ರತ್ಯೇಕ ರೈಲ್ವೆ ಅಪಘಾತಗಳು ನಡೆದಿದ್ದು, ಇಬ್ಬರು ಅಸುನೀಗಿದ್ದಾರೆ. ಮತ್ತೊಂದು ಆಕಸ್ಮಿಕದಲ್ಲಿ 13 ವರ್ಷದ ಬಾಲಕ ಚಲಿಸುತ್ತಿದ್ದ ಬಸ್ಸಿನಿಂದ ಜಾರಿಬಿದ್ದು ತೀವ್ರವಾಗಿ ಗಾಯಗೊಂಡು, ಒಂದು ವಾರದ ಬಳಿಕ, ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಅಜ್ಜಿ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಟ್ರೈನಿನ ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಜಲೀಲ್ ತೈಲಂಗಡಿ ಅವರ ಪುತ್ರ, 8 ವರ್ಷದ ಜೋಹರ್ ಮೃತಪಟ್ಟ ಬಾಲಕ. ಆತ ಪಾಲಕುಣ್ಣು ಗ್ರೀನ್ ವುಡ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ. ಜೋಹರ್ ತನ್ನ ಅಜ್ಜಿಯ ಮನೆಗೆ ತೆರಳಿದ್ದಾಗ ಈ ದುರಂತ ನಡೆದಿದೆ.

ಮತ್ತೊಂದು ಪ್ರಕರಣದಲ್ಲಿ ಇದೇ ಶಾಲೆಯ ಉದ್ಯೋಗಿಯ ಮೇಲೆ ಬೇರೊಂದು ಟ್ರೈನು ರೈಲ್ವೆ ಕ್ರಾಸಿಂಗ್ ಬಳಿ ಹತ್ತಿದ ಪರಿಣಾಮ ಆಖೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಚಿತ್ರಾ (44) ಎಂದು ಗುರುತಿಸಲಾಗಿದೆ. ಚಿತ್ರಾ, ಸಂಬಂಧಿಕರ ಮನೆಯಿಂದ ತಮ್ಮ ಮನೆಗೆ ವಾಪಸಾಗುತ್ತಿದ್ದಾಗ ಈ ಅವಘಡ ನಡೆದಿದೆ. ಶವಪರೀಕ್ಷೆಯ ಬಳಿಕ ಮೃತ ದೇಹಗಳನ್ನು ಪೊಲೀಸರು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.

ಮತ್ತೊಂದು ಆಕಸ್ಮಿಕದಲ್ಲಿ ಮೊಹಮದ್ ಇರ್ಶಾದ್ ಎಂಬ 13 ವರ್ಷದ ಬಾಲಕ ಚಲಿಸುತ್ತಿದ್ದ ಬಸ್ಸಿನಿಂದ ಜಾರಿಬಿದ್ದು ತೀವ್ರವಾಗಿ ಗಾಯಗೊಂಡ. ಬಳಿಕ, ಮಂಗಳೂರು ಆಸ್ಪತ್ರೆಯಲ್ಲಿ ಅಸುನೀಗಿದ. ಜುಲೈ 22ರಂದು ಈ ದುರ್ಘಟನೆ ಸಂಭವಿಸಿತ್ತು. ಸರಕಾರಿ ಬಸ್ಸಿನಲ್ಲಿ ಶಾಲೆಯಿಂದ ವಾಪಸಾಗುತ್ತಿದ್ದಾಗ ಸಮತೋಲನ ತಪ್ಪಿದ ಇರ್ಶಾದ್ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ. ಆದರೆ 1 ವಾರದ ಬಳಿಕ ಚೇತರಿಕೆ ಕಾಣದೆ ಮೃತಪಟ್ಟ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+