ಗುರುವಾರದಿಂದ ಕ್ಷೀರಭಾಗ್ಯ ಯೋಜನೆ ಆರಂಭ

ಕ್ಷೀರಭಾಗ್ಯ ಯೋಜನೆಯಡಿ 64 ಸಾವಿರ ಅಂಗನವಾಡಿ, 51 ಸಾವಿರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 1 ಕೋಟಿಗೂ ಹೆಚ್ಚು ಮಕ್ಕಳಿಗೆ ಇನ್ನುಮುಂದೆ ವಾರದಲ್ಲಿ ಮೂರು ದಿನ ಹಾಲು ದೊರೆಯಲಿದೆ.
ಹಾಲಿನ ಬದಲು ಪುಡಿ : ಹಾಲಿನಲ್ಲಿ ಕಲಬೆರೆಕೆ ಆಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಾರದು ಎಂದು ಸರ್ಕಾರ, ಕಚ್ಚಾ ಹಾಲು ಪೂರೈಸುವ ಬದಲು ಪೋಷಕಾಂಶಗಳನ್ನು ಹೊಂದಿರುವ ಪರಿಶುದ್ಧ ನಂದಿನಿ ಹಾಲಿನ ಪುಡಿಯನ್ನು ಸರಬರಾಜು ಮಾಡಲಿದೆ.
ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ರಾಜ್ಯದ ಎಲ್ಲಾ 13 ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಶಾಲೆ ಮತ್ತು ಅಂಗನವಾಡಿಗಳಿಗೆ ಹಾಲಿನ ಪುಡಿಯನ್ನು ಪೂರೈಕೆ ಮಾಡಲಾಗುತ್ತದೆ.
ರಾಜ್ಯದ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ಒಂದು ತಿಂಗಳಿಗೆ ಅಗತ್ಯವಿರುವಷ್ಟು ಹಾಲಿನ ಪುಡಿಯನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಅಂಗನವಾಡಿಗಳಿಗೆ ನೇರವಾಗಿ ಹಾಲಿನಪುಡಿಯ ಪ್ಯಾಕ್‌ಗಳು ತಲುಪಿದರೆ, ಶಾಲೆಗಳ ಬಿಸಿಯೂಟ ಕೇಂದ್ರಗಳಿಗೆ ರವಾನೆಯಾಗಲಿದೆ.
ರಕ್ಷಣೆಗೆ ವ್ಯವಸ್ಥೆ : ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಶಾಲೆಗಳಲ್ಲಿ ರಕ್ಷಿಸಿಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಒಮ್ಮೆ ಓಪನ್ ಮಾಡಿದ ಹಾಲಿನ ಪ್ಯಾಕೆಟ್ ಗಳನ್ನು ಒಂದು ತಿಂಗಳುಗಳ ಕಾಲ ಬಳಸಬಹುದಾಗಿದೆ.
ಸೂಚನೆ ಏನು : ಹಾಲನ್ನು ಚೆನ್ನಾಗಿ ಕಾಯಿಸಿ, ಕುಡಿಯಲು ಅಗತ್ಯವಿರುವಷ್ಟು ತಣ್ಣಗಾದ ಮೇಲೆ ಮಕ್ಕಳಿಗೆ ವಿತರಿಸಬೇಕು ಎಂದು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಕುದಿಸಿದ 3 ಗಂಟೆಯೊಳಗೆ ಮಕ್ಕಳಿಗೆ ನೀಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications