ಹೊಸ ರಾಜ್ಯ ತೆಲಂಗಾಣ ಹಿನ್ನೋಟ, ಮುನ್ನೋಟ
ಬೆಂಗಳೂರು, ಜು.31: ದೇಶದ 29ನೇ ರಾಜ್ಯವಾಗಿ ತೆಲಂಗಾಣ ರಾಜ್ಯ ಸ್ಥಾಪನೆಯಾಗಿದೆ. ತೆಲಂಗಾಣ ರಾಜ್ಯವಾಗಿ ಅಸ್ತಿತ್ವಕ್ಕೆ ಬರಲು ಇನ್ನೂ ಕೊಂಚ ಸಮಯ ಹಿಡಿಯುತ್ತದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನಂತರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಆಂಧ್ರ ಪ್ರದೇಶದ ವಿಭಜನೆಗೆ ಅಂಕಿತ ಹಾಕಲಾಗಿದೆ.
ತೆಲಂಗಾಣ ರಾಜ್ಯ ಹೋರಾಟದ ಬಗ್ಗೆ ಸಂಕ್ಷಿಪ್ತ ಹಿನ್ನೋಟ ಹಾಗೂ ರಾಜ್ಯ ರಚನೆ ಇಲ್ಲಿದೆ : 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಪ್ರಧಾನಿ ಜವಹಾರಲಾಲ್ ನೆಹರೂ ಎದುರಿಸಿದ ದೊಡ್ಡ ಸಮಸ್ಯೆ ಭಾಷಾವಾರು ರಾಜ್ಯ ರಚನೆ.
ಅಂದು ಆದಷ್ಟು ಮಟ್ಟಿಗೆ ಭಾಷೆ ಆಧಾರದ ಮೇಲೆ ಭಾರತವನ್ನು ವಿಭಜಿಸಿ ರಾಜ್ಯಗಳನ್ನು ರಚನೆ ನಡೆಯಿತು. 1956 ನವೆಂಬರ್ 1 ರಂದು ಆಂಧ್ರಪ್ರದೇಶದಲ್ಲಿ ತೆಲಂಗಾಣವನ್ನೂ ಸೇರಿಸಿ ತೆಲುಗು ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ರಚಿಸುವಲ್ಲಿ ಪಂಡೀತ್ ಜೀ ಯಶಸ್ವಿಯಾದರು. ಆದರೆ, ಇದಕ್ಕೆ ಪೊಟ್ಟಿ ಶ್ರೀರಾಮುಲು ಅವರ ಬಲಿದಾನವೂ ಕಾರಣವಾಯಿತು.
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ತೆಲಂಗಾಣ ಪ್ರಾಂತ್ಯದಲ್ಲಿ ಹೈದರಾಬಾದ್ ಬಿಟ್ಟರೆ ಮಿಕ್ಕ ಭಾಗಗಳಿಗೆ ಅಂದಿನಿಂದ ಇಂದಿನವರೆಗೂ ಸರಿಯಾದ ಸ್ಥಾನ ಮಾನ ಸಿಕ್ಕಿರಲಿಲ್ಲ. ಇದಕ್ಕಾಗಿ ಹಲವು ದಶಕಗಳ ಕಾಲ ಹೋರಾಟ ನಡೆಸಬೇಕಾಯಿತು. ತೆಲಂಗಾಣ ರಾಜ್ಯದ ಬಗ್ಗೆ 10 ಸಂಗತಿಗಳು

ತೆಲಂಗಾಣ(ತೆಲುಗರ ನಾಡು)
ತೆಲಂಗಾಣ(ತೆಲುಗರ ನಾಡು) ಭಾರತ ಗಣರಾಜ್ಯದ 29ನೇ ರಾಜ್ಯವಾಗಿದೆ. 2000ರಲ್ಲಿ ಎನ್ ಡಿಎ ಸರ್ಕಾರ ಬಿಹಾರದಿಂದ ಜಾರ್ಖಂಡ್ ಹಾಗೂ ಮಧ್ಯಪ್ರದೇಶದಿಂದ ಚತ್ತೀಸ್ ಗಢ ಮತ್ತು ಉತ್ತರಪ್ರದೇಶದಿಂದ ಉತ್ತರಾಖಂಡ್ ರಾಜ್ಯ ರಚನೆ ಮಾಡಿದ್ದರು. ಈಗ ಯುಪಿಎ ಸರ್ಕಾರ ಸಾರ್ವತ್ರಿಕ ಚುನಾವಣೆಗೂ ಮುನ್ನ ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿದೆ.

ದಕ್ಷಿಣ ಭಾರತಕ್ಕೆ ಹೊಸ ರಾಜ್ಯ
ತೆಲಂಗಾಣ ದಕ್ಷಿಣ ಭಾರತದ ಐದನೇ ರಾಜ್ಯವಾಗಲಿದೆ. ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಸೀಮಾಂಧ್ರ ಮಿಕ್ಕ ನಾಲ್ಕು ರಾಜ್ಯಗಳು, ಗೋವಾ ದಕ್ಷಿಣ ಭಾರತಕ್ಕಿಂತ ನೈಋತ್ಯ ಭಾರತದ ಭಾಗವಾಗಿ ಹೆಚ್ಚು ಗುರುತಿಸಿಕೊಂಡಿದೆ.

ಹೊಸ ರಾಜ್ಯದ ಜಿಲ್ಲೆಗಳು
ತೆಲಂಗಾಣದಲ್ಲಿ ಹತ್ತು ಜಿಲ್ಲೆಗಳು ಸೇರ್ಪಡೆಗೊಂಡಿವೆ. ಹೈದರಾಬಾದ್ (ರಾಜಧಾನಿ), ಅದಿಲಾಬಾದ್, ಖಮ್ಮಮ್, ಕರೀಂನಗರ, ಮಹಬೂಬ್ ನಗರ, ಮೇಡಕ್, ನಾಲಗೊಂಡ, ನಿಜಾಮಾಬಾದ್, ರಂಗಾರೆಡ್ಡಿ ಹಾಗೂ ವಾರಂಗಲ್. ಸೀಮಾಂಧ್ರ ಹಾಗೂ ತೆಲಂಗಾಣಕ್ಕೆ 10 ವರ್ಷಕಾಲ ಹೈದರಾಬಾದ್ ಜಂಟಿ ರಾಜಧಾನಿಯಾಗಲಿದೆ.

ರಾಜ್ಯ ವಿಸ್ತಾರ ಎಷ್ಟಿದೆ?
ಒಟ್ಟಾರೆ 1.14 ಲಕ್ಷ ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು ಭಾರತದ 12ನೇ ದೊಡ್ಡ ರಾಜ್ಯ ಎನಿಸಿದೆ. ವಿಭಜನೆಗೂ ಮುನ್ನ 4ನೇ ಅತಿದೊಡ್ದ ವಿಸ್ತ್ರೀರ್ಣವುಳ್ಳ ರಾಜ್ಯವಾಗಿದ್ದ ಆಂಧ್ರಪ್ರದೇಶ ಈಗ 6ನೇ ಸ್ಥಾನಕ್ಕೆ ಕುಸಿದಿದೆ.

ಜನಸಂಖ್ಯೆ ಪ್ರಮಾಣ
ತೆಲಂಗಾಣ ಭಾಗದಲ್ಲಿ ಸುಮಾರು 3.52 ಕೋಟಿ ಜನರಿದ್ದಾರೆ (2011ರ ಜನಗಣತಿಯಂತೆ) ಇದು ದೇಶದ 12ನೇ ಅತಿದೊಡ್ಡ (ಜನಸಂಖ್ಯೆ) ರಾಜ್ಯವಾಗಿದೆ. ವಿಭಜನೆಗೂ ಮುನ್ನ 5ನೇ ಸ್ಥಾನದಲ್ಲಿದ್ದ ಆಂಧ್ರಪ್ರದೇಶ ಈಗ ಸೀಮಾಂಧ್ರವಾಗಿ 10ನೇ ಸ್ಥಾನಕ್ಕೆ ಕುಸಿದಿದೆ.

ಜಾತಿವಾರು ಅಂಕಿ ಅಂಶ
ತೆಲಂಗಾಣದಲ್ಲಿ ಶೇ 86 ರಷ್ಟು ಹಿಂದುಗಳು, ಶೇ12 ರಷ್ಟು ಮುಸ್ಲಿಂ ಹಾಗೂ ಶೇ 1 ರಷ್ಟು ಕ್ರೈಸ್ತ್ರರಿದ್ದಾರೆ.

ಭಾಷೆ ಅಂಕಿ ಅಂಶ
ತೆಲಂಗಾಣದಲ್ಲಿ ಶೇ 77 ರಷ್ಟು ಜನ ತೆಲುಗು ಭಾಷೆ ಮಾತನಾಡುತ್ತಾರೆ. ಶೇ 12ರಷ್ಟು ಉರ್ದು ಹಾಗೂ ಶೇ 11 ರಷ್ಟು ಇತರೆ ಭಾಷಿಗರು ಇದ್ದಾರೆ.

ಸಂಸತ್ ಸ್ಥಾನ
ತೆಲಂಗಾಣ 17 ಲೋಕಸಭಾ ಸ್ಥಾನ ಹಾಗೂ 119 ವಿಧಾನಸಭೆ ಸ್ಥಾನಗಳನ್ನು ಹೊಂದಿದೆ.

ನೀರಾವರಿ ಸೌಲಭ್ಯ
ದಕ್ಷಿಣ ಭಾರತದ ಎರಡು ಅತಿದೊಡ್ಡ ನದಿಗಳಾದ ಕೃಷ್ಣ ಹಾಗೂ ಗೋದಾವರಿ ತೆಲಂಗಾಣದಲ್ಲೂ ಹರಿಯುತ್ತದೆ. ಆದರೂ ರಾಜ್ಯದ ಬಹುತೇಕ ಭಾಗ ಒಣ, ಬಂಜರು ಭೂಮಿಯನ್ನು ಹೊಂದಿದೆ. ವಾತಾವರಣ ಕೂಡಾ ಒಣ ಹಾಗೂ ಶುಷ್ಕ ಹವೆಯನ್ನು ಹೊಂದಿದೆ.

ಹೊಸರಾಜ್ಯಕ್ಕೆ ಭೇಟಿ
ಹೊಸ ರಾಜ್ಯ ತೆಲಂಗಾಣಕ್ಕೆ ಭೇಟಿ ನೀಡಲು ನವೆಂಬರ್ ನಿಂದ ಫೆಬ್ರವರಿ ತಿಂಗಳು ಸೂಕ್ತವಾಗಿದೆ. ಹೈದರಾಬಾದಿನ ಆದಾಯ ಉಭಯ ರಾಜ್ಯಗಳು ಹಂಚಿಕೊಳ್ಳಬೇಕಿದೆ.
ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಹಂಚಿಕೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಲಿದೆ. ಎಲ್ಲಕ್ಕೂ ಕೇಂದ್ರ ಸರ್ಕಾರ ನೀಡುವ ಅನುದಾನ ಹಾಗೂ ಯೋಜನೆಗಳನ್ನು ಅವಲಂಬಿಸಬೇಕಾಗುತ್ತದೆ.-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications