ಪ್ರವಾಹ ಸಂತ್ರಸ್ತರಿಗೆ ಕರ್ನಾಟಕ RSS ಅಳಿಲು ಸೇವೆ
ಬೆಂಗಳೂರು, ಜು 30: ಉತ್ತರಾಖಂಡದ ಪ್ರವಾಹ ಸಂತ್ರಸ್ತರಿಗೆ ರಾಷ್ಟೀಯ ಸ್ವಯಂಸೇವಕ ಸಂಘದ ಕರ್ನಾಟಕ ಘಟಕ ನೆರವಿನ ಹಸ್ತ ಚಾಚಿದೆ.
ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದ ನಂತರ ಅಂದರೆ ಜೂನ್ 15 ರಿಂದ ಸತತ 44 ದಿನಗಳ ಕಾಲ ವಿವಿಧ ರೀತಿಯಲ್ಲಿ ಪರಿಹಾರ ಚಟುವಟಿಕೆಯಲ್ಲಿ RSS ಸ್ವಯಂಸೇವಕರು ಪಾಲ್ಗೊಂಡಿದ್ದರು.
"ಉತ್ತರಾಂಚಲ್ ದೈವೀ ಆಪದಾ ಪೀಡಿತ್ ಸಹಾಯತಾ ಸಮಿತಿ" ಎನ್ನುವ ಹೆಸರಿನಲ್ಲಿ ಸಂಘದ ಸ್ವಯಂಸೇವಕರ ಪರಿಹಾರ ಕಾರ್ಯಾಚರಣೆ ಉತ್ತರಾಖಂಡದಲ್ಲಿ ಅವಿರತವಾಗಿ ನಡೆಯುತ್ತಿದೆ.
ಕರ್ನಾಟಕ RSS ಘಟಕದ ಸಾರ್ವಜನಿಕ ಮನವಿಗೆ ಸಮಯೋಚಿತವಾಗಿ ಸಾವಿರಾರು ಮಂದಿ ಸ್ಪಂದಿಸಿ ಆರ್ಥಿಕ ರೂಪದ ದೇಣಿಗೆಯನ್ನು "RSS ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ"ಗೆ ನೀಡಿದ್ದರು.

ಕರ್ನಾಟಕ RSS ಘಟಕದ ವತಿಯಿಂದ ಸಂಗ್ರಹವಾದ ಒಂದು ಕೋಟಿ ರೂಪಾಯಿಗಳನ್ನು ಉತ್ತರಾಖಂಡದ ಸಮಿತಿಗೆ ಘಟಕ ತಲುಪಿಸಿದೆ. ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಚಟುವಟಿಕೆಗಳಿಗೆ ಆ ಮೊತ್ತ ಬಳಕೆಯಾಗಲಿದೆ.
ಅಲ್ಲದೇ ಕಳೆದ ಜೂನ್ 18 ಮತ್ತು 19ರಂದು ಉತ್ತರಾಖಂಡಕ್ಕೆ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯ್ಯಾಜಿ ಜೋಷಿ ಭೇಟಿ ನೀಡಿ ಪುನರ್ವಸತಿ ಮತ್ತು ಪುನರ್ನಿಮಾಣ ಚಟುವಟಿಕೆಗಳ ಪರಿಶೀಲನೆ ನಡೆಸಿದ್ದರು.
ತೀರಾ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ RSS ನೇತೃತ್ವದ ಸ್ವಯಂಸೇವಕರು ಕ್ರಿಯಾಶೀಲರಾಗಿದ್ದಾರೆಂದು RSS ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications