ಜಾಮೀನು ಸಿಕ್ಕರೂ ಜೈಲಲ್ಲೇ ಕೂತ ನಟಿ

ತಿರುವನಂತಪುರಂ, ಜು.29: ಕೇರಳದಲ್ಲಿ ಭಾರಿ ಗದ್ದಲ ಎಬ್ಬಿಸಿರುವ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ಜನಪ್ರಿಯ ನಟಿ ಶಾಲು ಮೆನನ್ ಗೆ ಜಾಮೀನು ಸಿಕ್ಕರೂ ಜೈಲಲ್ಲೇ ಕಾಲದೂಡುವ ಪರಿಸ್ಥಿತಿ ಎದುರಾಗಿದೆ.

ಹೈಕೋರ್ಟಿನಲ್ಲಿ ಎರಡು ಜಾಮೀನು ಅರ್ಜಿಗಳು ವಿಚಾರಣೆಗೆ ಬಂದಿದ್ದು, ಕಿಂಗ್ ಪಿನ್ ಬಿಜು ರಾಧಕೃಷ್ಣನ್ ಎಸ್ಕೇಪ್ ಆಗಲು ಸಹಕರಿಸಿದ ಆರೋಪ ಶಾಲು ಮೆನನ್ ಮೇಲಿದೆ. ಈ ಪ್ರಕರಣದಲ್ಲಿ ಆಕೆಗೆ ಹೇಗೂ ಬೇಲ್ ಸಿಕ್ಕಿದೆ. ಆದರೆ, ಎನ್ನಾರೈ ರಫೀಕ್ ಅಲಿ ಅವರಿಗೆ 70 ಲಕ್ಷ ವಂಚನೆ ಮಾಡಿದ ಪ್ರಕರಣದಲ್ಲಿ ಜಾಮೀನು ಇನ್ನೂ ಸಿಕ್ಕಿಲ್ಲ.

ಕಳೆದ ವಾರ ಮಾಧ್ಯಮಗಳಿಗೆ ಒಂದು ಪತ್ರ ಸಿಕ್ಕಿದೆ. ಬಿಜು ಅವರು ಶಾಲುಗೆ ಬರೆದ ಪತ್ರ ಇದಾಗಿದ್ದು ಇಬ್ಬರ ನಡುವೆ ಪ್ರೇಮ ವ್ಯವಹಾರವೂ ಇತ್ತು ಎನ್ನಲಾಗಿದೆ. ಆದರೆ, ಬಿಜು ಪರ ವಕೀಲರು ಇದನ್ನು ಅಲ್ಲಗೆಳೆದಿದ್ದಾರೆ.

ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕುರ್ಚಿಗೆ ಕಂಟಕವಾಗಿರುವ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಗಲಾಟೆ, ದೊಂಬಿ, ಪ್ರತಿಭಟನೆ ಮುಂದುವರೆದಿದೆ. ಜನಪ್ರಿಯ ನಟಿ ಶಾಲು ಮೆನನ್ ಬಂಧನದ ನಂತರ ಇನ್ನಷ್ಟು ನಟಿಯರ ಮೇಲೆ ಪೊಲೀಸರ ಹದ್ದಿನ ಕಣ್ಣು ಬಿದ್ದಿದೆ. ಈ ಪ್ರಕರಣ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ...

ಶಾಲು ಮೆನನ್

ಶಾಲು ಮೆನನ್

ಸೋಲಾರ್ ಪ್ಯಾನೆಲ್ ಹಗರಣದಲ್ಲಿ ಉಮ್ಮನ್ ಚಾಂಡಿ ಅವರ ಕಾಂಗ್ರೆಸ್ ಸರ್ಕಾರದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾಬಿನೆಟ್ ಸಚಿವರು ಭಾಗಿಯಾಗಿರುವುದು ಪತ್ತೆಯಾಗಿದೆ. ಸಿಎಂ ಉಮ್ಮನ್ ಚಾಂಡಿ ಪದಚ್ಯುತಿಗೆ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ ಸೇರಿ ವಿಪಕ್ಷಗಳು ಎಡಬಿಡದೆ ಪ್ರತಿಭಟನೆ ನಡೆಸಿವೆ. ಹಿಂಸಾಚಾರದ ನಡುವೆ ಉಮ್ಮನ್ ಚಾಂಡಿ ತಣ್ಣಗೆ ಕುಳಿತ್ತಿದ್ದಾರೆ.

ಲಾಬಿಗಾರ್ತಿ ಸರಿತಾ

ಲಾಬಿಗಾರ್ತಿ ಸರಿತಾ

ಮಲೆಯಾಳಂ ಮನೋರಮಾ ವರದಿಯಂತೆ ಸುಮಾರು ಊಮಾನ್ ಚಾಂಡಿ ಸರ್ಕಾರದ ಬಹುತೇಕ ಭ್ರಷ್ಟರು ಸರಿತಾ ಕರೆಗೆ ಕುಣಿದಿದ್ದಾರೆ ಪೊಲೀಸರು ಈವರೆಗೆ 60,000 ಕ್ಕೂ ಅಧಿಕ ಫೋನ್ ಕರೆಯನ್ನು ಪರೀಕ್ಷಿಸಿದ್ದಾರೆ. ಸರಿತಾ ಬಳಿ ಸುಮಾರು 6 ಫೋನ್ ಗಳಿದ್ದು ಅವುಗಳಲ್ಲಿನ ಕರೆಗಳನ್ನು ತನಿಖೆಗೆ ಒಳಪಡಿಸಿದರೆ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುವ ಸಾಧ್ಯತೆಯಿದೆ.

ಬಿಜು-ರಾಧಾಕೃಷ್ಣನ್

ಬಿಜು-ರಾಧಾಕೃಷ್ಣನ್

ಸಾಧಾರಣ ವಂಚನೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ, ಬಿಜು- ಸರಿತಾ ಜೋಡಿಯ ಜಾಲ ವಿಸ್ತರಣೆ ಪರಿಚಯವಾಗುತ್ತಿದ್ದಂತೆ ಸರ್ಕಾರದ ಬುಡಕ್ಕೆ ಬಂದು ಬಿಟ್ಟಿತು.

ಸೌರಶಕ್ತಿ ಒದಗಿಸಲು ಹಣ ಪಡೆದು ವಂಚನೆ ಎಂದಷ್ಟೇ ತಿಳಿಯಲಾಗಿತ್ತು. ಈಗ ಇದು ಬೇರೆ ಏನೋ ಪ್ರಕರಣ ಏನನ್ನೋ ಹೊರಟಿದೆ. ಬಿಜು ತನ್ನ ಮೊದಲ ಪತ್ನಿ ರಶ್ಮಿ ಕೊಲೆಗೈದ ಆರೋಪ ಹೊತ್ತಿದ್ದಾನೆ ಕೂಡಾ. ಸರಿತಾ ಜೊತೆ ಲಿವ್ ಇನ್ ಸಂಬಂಧ ನಡೆಸಿದ್ದಾರೆ.
ಶಾಲುಗೆ ಸಂಕಟ

ಶಾಲುಗೆ ಸಂಕಟ

ಅನಿವಾಸಿ ಕೇರಳಿಗ ಉದ್ಯಮಿ ರಫೀಕ್ ಅವರನ್ನು ಬಲೆ ಬೀಳಿಸಿಕೊಳ್ಳಲು ಶಾಲು ಮೆನನ್ ಸಹಾಯ ಪಡೆದ ಕಿಂಗ್ ಪಿನ್ ಬಿಜು ಸುಮಾರು 25 ಲಕ್ಷ ರು ಲೂಟಿದ್ದ ಎನ್ನಲಾಗಿತ್ತು. ಆದರೆ, ಈಗ ಮೊತ್ತ 75 ಲಕ್ಷಕ್ಕೇರಿದೆ. ಇದೆ ಶಾಲುಗೆ ಮುಳುವಾಗಿದೆ. ಬಿಜುಗೆ ತನ್ನ ಮೊಬೈಲ್ ಕಾರು ಕೊಟ್ಟು ಎಸ್ಕೇಪ್ ಆಗಲು ಶಾಲು ಸಹಕರಿಸಿದ್ದಾರೆ ಎನ್ನಲಾಗಿದೆ.

ಚಾಂಡಿ ರಾಜೀನಾಮೆಗೆ ಒತ್ತಾಯ

ಚಾಂಡಿ ರಾಜೀನಾಮೆಗೆ ಒತ್ತಾಯ

ಕೋಳಿಕ್ಕಾಡ್: ವಿದ್ಯಾರ್ಥಿಗಳ ಇಸ್ಲಾಮಿಕ್ ಸಂಘಟನೆ(SIO), ಎಲ್ ಡಿಇಎಫ್ ಕಾರ್ಯಕರ್ತರು ಸಿಎಂ ಉಮ್ಮನ್ ಚಾಂಡಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನಿತರರ ತಾರೆಯರು

ಇನ್ನಿತರರ ತಾರೆಯರು

ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಉಮ್ಮನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಪೂರ್ಣ ಕಥೆ ಇಲ್ಲಿದೆ

ಬಿಜು ರಾಧಾಕೃಷ್ಣನ್, ಸರಿತಾ, ಶಾಲು ಮೆನನ್ ಬಂಧನದ ನಂತರ ಉತ್ತರ ಉನ್ನಿ, ಸಂಧ್ಯಾ ಹಾಗೂ ಮುಕ್ತಾ ಹೆಸರು ಕೇಳಿ ಬಂದಿದೆ..
ಉತ್ತರಾ ಉನ್ನಿ

ಉತ್ತರಾ ಉನ್ನಿ

ರೂಪದರ್ಶಿ ನಟಿ ಉತ್ತರಾ ಉನ್ನಿ ಅವರು ಸೋಲಾರ್ ಸಂಸ್ಥೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ ಹಲವಾರು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಉತ್ತರಾ ಮೇಲೆ ಬಲೆ ಬೀಸಿದ್ದಾರೆ. ಉತ್ತರಾಗೆ ಕೂಡಾ ಟೀಂ ಸೋಲಾರ್ ನಿಂದ ಭಾರಿ ಹಣ ಸಂದಾಯವಾಗಿದೆ ಎನ್ನಲಾಗಿದೆ.

ಮುಕ್ತಾ

ಮುಕ್ತಾ

ಈ ಪ್ರಕರಣದಲ್ಲಿ ಲೇಟೆಸ್ಟ್ ಎಂಟ್ರಿ. ಬಿಜು ಆಕೆಗೆ ದೊಡ್ಡ ಬ್ಯಾನರ್ ಸಿನಿಮಾ ಆಫರ್ ನೀಡಿದ್ದ. ಕ್ಯಾಲೆಂಡರ್ ಫೋಟೋ ಶೂಟಿಂಗ್ ಗೆ ಆಹ್ವಾನ ನೀಡಿದ್ದ ಎನ್ನಲಾಗಿದೆ. ಅಚ್ಚನುರಂಗಥಾ ವೀಡು (Achanurangatha Veedu) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+