ಉಗುಳಿದ್ರೆ ಜೈಲು ವಾಟಾಳ್ ವ್ಯಂಗ್ಯ!

ಬೆಂಗಳೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್, ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರ ಮೊದಲು ಶೌಚಾಲಯ ನಿರ್ಮಿಸಿ ನಂತರ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಶೌಚಾಲಯವಿಲ್ಲದಿದ್ದರೆ ಎಲ್ಲಿ ಮಲ, ಮೂತ್ರ ವಿಸರ್ಜಿಸಬೇಕು ಎಂದು ವಾಟಾಳ್ ಸರ್ಕಾರವನ್ನು ಪ್ರಶ್ನಿಸಿದರು.
ಸಾರ್ವಜನಿಕರು ಕೆಮ್ಮಿದರೆ, ಉಗುಳಿದರೆ ದಂಡ ಹಾಕಿ ಜೈಲಿಗೆ ಕಳುಹಿಸುವ ಸರ್ಕಾರ, ಇದಕ್ಕಾಗಿ ಎಷ್ಟು ಜೈಲುಗಳನ್ನು ಕಟ್ಟುತ್ತದೆ? ಎಂದು ಸರ್ಕಾರವ ವಿರುದ್ಧ ವಾಟಾಳ್ ಗುಡುಗಿದ್ದಾರೆ. ಸರ್ಕಾರ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಶೌಚಾಲಯ ನಿರ್ಮಿಸುವಂತೆ ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಇದನ್ನು ಗಮನಿಸಿದ ಸರ್ಕಾರ ಅವೈಜ್ಞಾನಿಕ ಕಾಯ್ದೆ ಜಾರಿಗೆ ತರಲು ಹೊರಟಿದೆ ಎಂದು ವಾಟಾಳ್ ದೂರಿದ್ದಾರೆ. (ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಹಾಕ್ತಾರೆ)
ಬಿಬಿಎಂಪಿ ಏನು ಮಾಡುತ್ತದೆ : ಒಣ ಮತ್ತು ಹಸಿ ಕಸವನ್ನು ಸಾರ್ವಜನಿಕರೇ ಪ್ರತ್ಯೇಕಿಸಿ ಕೊಡುವುದಾದದರೆ ಬಿಬಿಎಂಪಿ ಏನು ಕೆಲಸ ಮಾಡುತ್ತದೆ. ಕಸ ವಿಂಗಡನೆ ಮಾಡಿಕೊಟ್ಟರು ಪೌರ ಕಾರ್ಮಿಕರು ಅದನ್ನು ಮತ್ತೆ ಒಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ ಎಂದು ವಾಟಾಳ್ ಆರೋಪಿಸಿದ್ದಾರೆ.
ಕರ್ನಾಟಕ ಪೌರ ನಿಗಮಗಳ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲುರು ಸಹಿ ಹಾಕಬಾರದು ಎಂದು ಒತ್ತಾಯಿಸಿದ ವಾಟಾಳ್ ನಾಗರಾಜ್, ರಾಜ್ಯದ ಬುದ್ಧಿ ಜೀವಿಗಳು, ಸಾರ್ವಜನಿಕರು ಕಾಯ್ದೆಯನ್ನು ವಿರೋಧಿಸಬೇಕೆಂದು ವಾಟಾಳ್ ಕರೆ ನೀಡಿದರು.
ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿ ನಂತರ ಕಾಯ್ದೆ ಜಾರಿಗೆ ತರಬೇಕು. ಇಲ್ಲವಾದಲ್ಲಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.












Click it and Unblock the Notifications