ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಚಾಲನೆ
ಬೆಂಗಳೂರು, ಜು.28: ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿಜಾಲ ಅವರ ಆಮ್ ಆದ್ಮಿ ಪಾರ್ಟಿ(ಜನ ಸಾಮಾನ್ಯ ಪಕ್ಷ) ಕರ್ನಾಟಕ ಶನಿವಾರ ಉದಯವಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ವಿಭಾಗಕ್ಕಾಗಿ ಪ್ರತ್ಯೇಕ ಅಧಿಕೃತ ವೆಬ್ ತಾಣ ಲೋಕಾರ್ಪಣೆ ಮಾಡಲಾಗಿದೆ.
ನಗರದ ಇಂದಿರಾನಗರ ನ್ಯೂ ಹಾರಿಜನ್ ಸ್ಕೂಲ್ ನಲ್ಲಿ ಶನಿವಾರ ಮಧ್ನಾಹ್ನ ನಡೆದ ಸಮಾರಂಭದಲ್ಲಿ ಜನ ಸಾಮಾನ್ಯ ಪಕ್ಷಕ್ಕೆ ಚಾಲನೆ ನೀಡಿದ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ ಅವರು 'ಸ್ವರಾಜ್' ಎಂಬ ಕೃತಿಯನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ, 'ನರೇಂದ್ರ ಮೋದಿಯಾಗಲಿ, ರಾಹುಲ್ ಗಾಂಧಿಯಾಗಲಿ ದೇಶಕ್ಕೆ ಉತ್ತಮ ಭವಿಷ್ಯ ನೀಡಲಾರರು, ಜನತೆ ಕಾಂಗ್ರೆಸ್ ಹಾಗೂ ಬಿಜೆಪಿ ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ' ಎಂದರು
ವ್ಯವಸ್ಥೆ ಪರಿವರ್ತನೆ, ಜನ ಲೋಕಪಾಲ, ರಾಜಕೀಯ ವಿಕೇಂದ್ರಿಕರಣ, ನಿರಾಕರಣೆ ಹಕ್ಕು(Right to reject), ವಾಪಸ್ ಕರೆಸುವ ಹಕ್ಕು(Right to recall) ಮುಂತಾದ ಆಶಯದೊಂದಿಗೆ ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕಕ್ಕೆ ಚಾಲನೆ ಸಿಕ್ಕಿದೆ.
ಪಕ್ಷ ಸ್ಥಾಪನೆಗೂ ಮುನ್ನ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗದಗ, ಹಾವೇರಿ, ಚಿಕ್ಕಮಗಳೂರು ಇನ್ನಿತರ ಕಡೆಗಳಲ್ಲಿ ಪೂರ್ವಭಾವಿ ಸಭೆ, ಚರ್ಚೆ ನಡೆಸಿ ಜನಾಭಿಪ್ರಾಯವನ್ನು ಆಮ್ ಆದ್ಮಿ ಪಕ್ಷ ಪಡೆದಿದ್ದರು. ಎಎಪಿ ಕರ್ನಾಟಕ ಉದ್ಘಾಟನಾ ಸಮಾರಂಭದ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳು ಇಲ್ಲಿವೆ ನೋಡಿ

ಕೇಜ್ರಿವಾಲ ಭಾಷಣ
ರಾಷ್ಟ್ರೀಯ ಪಕ್ಷಗಳಿಗೆ ಸಿಗುತ್ತಿರುವ ಪಾರ್ಟಿ ಫಂಡ್ ನ ಶೇ 15ರಷ್ಟು ಕರ್ನಾಟಕದಿಂದಲೇ ಸಿಗುತ್ತಿದೆ. ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ನಿಂತು ಮಾತನಾಡಲು ಹೆಮ್ಮೆ ಎನಿಸುತ್ತದೆ. ಜ್ಞಾನ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ ನಾಡು ಇದು.ಈಗ ನಾಡನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಸಂಕಲ್ಪ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಘಟಕ ಸದಾ ಶ್ರಮಿಸಲಿದೆ ಎಂದರು.

ಬಿಜೆಪಿ ವಿರುದ್ಧವೂ ಕಿಡಿ
ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸರ್ಕಾರದ ಅಕ್ರಮಗಳನ್ನು ಖಂಡಿಸಲು ಬಿಜೆಪಿ ವಿಫಲವಾಗಿದೆ. ಜನತೆ ಬದಲಾವಣೆ ಬಯಸಿದ್ದಾರೆ. ದೆಹಲಿಯಲ್ಲಿ 70 ಅಸೆಂಬ್ಲಿ ಸೀಟುಗಳ ಪೈಕಿ 40 ಸೀಟು ಗೆದ್ದು ನಮ್ಮ ಯುವ ಪಕ್ಷ ಅಧಿಕಾರ ಗದ್ದುಗೆ ಏರಲಿದೆ ಎಂದರು.

ಕಾರ್ಯಕ್ರಮದಲ್ಲಿದ್ದ ಗಣ್ಯರು
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಪಕ್ಷ ಸ್ಥಾಪಕ ಅರವಿಂದ್ ಕೇಜ್ರಿವಾಲ, ಸಾಮಾಜಿಕ ಕಾರ್ಯಕರ್ತ ವೂಡಿ ಪಿ ಕೃಷ್ಣ, ವಿ ಬಾಲಸುಬ್ರಮಣ್ಯ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭರವಸೆಯ ಆಶಾಕಿರಣ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟತೆ ತೊಲಗಿಸಿ, ಪಾರದರ್ಶಕ ಆಡಳಿತ ಕಾಣುವ ಭರವಸೆಯ ಆಶಾಕಿರಣವಾಗಿ ಆಮ್ ಆದ್ಮಿ ಪಕ್ಷವನ್ನು ಜನತೆ ಕಾಣುತ್ತಿದೆ. 2012 ನವೆಂಬರ್ 26ರಂದು ಆಮ್ ಆದ್ಮಿ ಪಕ್ಷ ಅಧಿಕೃತವಾಗಿ ಚಾಲನೆಗೊಂಡಿತು.

ಪ್ರತಿಭಟನೆಯ ಕಿಡಿ
ದೆಹಲಿ ಸರ್ಕಾರದ ಜಲ ಹಾಗೂ ವಿದ್ಯುತ್ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಇಳಿಯುವ ಮೂಲಕ ಆಮ್ ಆದ್ಮಿ ಪಕ್ಷ ಹೆಚ್ಚು ಜನರಿಗೆ ಹತ್ತಿರವಾಗಿದೆ. ಸಾರ್ವಜನಿಕರ ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಇಂಧನ ಹಾಗೂ ವಿದ್ಯುತ್ ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿದೆ.

ಹೈಕಮಾಂಡ್ ಇಲ್ಲದ ಪಕ್ಷ
ಆಮ್ ಆದ್ಮಿ ಪಕ್ಷದಲ್ಲಿ ಪಾರದರ್ಶಕತೆಯೇ ಮೂಲ ಮಂತ್ರವಾಗಿದ್ದು ಪಕ್ಷದ ನಿಧಿ ರೂಪದಲ್ಲಿ ಸಿಗುವ 1 ರುಪಾಯಿ ಲೆಕ್ಕ ಕೂಡಾ ಸಾರ್ವಜನಿಕರಿಗೆ ತಿಳಿಯುವಂತೆ ವೆಬ್ ಸೈಟ್ ನಲ್ಲಿ ಖರ್ಚು ವೆಚ್ಚಗಳ ವಿವರಗಳನ್ನು ನೀಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ. ಕೌನ್ಸಿಲ್ ಸದಸ್ಯರು ಕಾರ್ಯಕಾರಿ ಸದಸ್ಯರನ್ನು ನೇಮಕ ಮಾಡುತ್ತಾರೆ.

ಉದ್ಘಾಟನಾ ಸಮಾರಂಭ
ಇಂದಿರಾನಗರ ನ್ಯೂ ಹಾರಿಜನ್ ಸ್ಕೂಲ್ ನಲ್ಲಿ ಶನಿವಾರ ನಡೆದ ಆಮ್ ಆದ್ಮಿ ಪಕ್ಷದ ಉದ್ಘಾಟನಾ ಸಮಾರಂಭದ ಚಿತ್ರಗಳು

ಉದ್ಘಾಟನಾ ಸಮಾರಂಭದ ಚಿತ್ರಗಳು
ಬೆಂಗಳೂರಿನ ಇಂದಿರಾನಗರ ನ್ಯೂ ಹಾರಿಜನ್ ಸ್ಕೂಲ್ ನಲ್ಲಿ ಶನಿವಾರ ನಡೆದ ಆಮ್ ಆದ್ಮಿ ಪಕ್ಷದ ಕರ್ನಾಟಕ ವಿಭಾಗದ ಉದ್ಘಾಟನಾ ಸಮಾರಂಭದ ಚಿತ್ರಗಳು. ಚಿತ್ರ ಕೃಪೆ : ಎಎಪಿ ಕರ್ನಾಟಕ












Click it and Unblock the Notifications