ಕಳೆದ ವಾರದ ಸುದ್ದಿ ಚಿತ್ರಗಳ ಹಿನ್ನೋಟ

ಬೆಂಗಳೂರು, ಜು.28 : ಜುಲೈ 21 ರಿಂದ 28ರ ತನಕ ದೇಶ ಅನೇಕ ಘಟನಾವಳಿಗಳನ್ನು ಕಂಡಿದೆ. ಉತ್ತರ ಭಾರತದ ಮಳೆ, ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆ ರಕ್ತಪಾತ, 'ರಾಷ್ಟ್ರಪತಿ'ಯಾಗಿ ಒಂದು ವರ್ಷ ಪೂರೈಸಿದ ಪ್ರಣಬ್ ಮುಖರ್ಜಿ, ಐಪಿಎಲ್ ನಂತರ ಬಾಡ್ಮಿಂಟನ್ ಲೀಗ್ ಆರಂಭ ಹಾಗೂ ಅದರ ವಿವಾದ, ಭಾರತದ ಬಿಲ್ಲುಗಾರ್ತಿಯರ ವಿಕ್ರಮ, ಇದರ ಜೊತೆಗೆ ನರೇಂದ್ರ ಮೋದಿ ಕುರಿತು ಆರ್ಥಿಕ ತಜ್ಞ ಅಮಾರ್ತ್ಯ ಸೇನ್ ಹೇಳಿಕೆ, ಕಾಂಗ್ರೆಸ್ ಹಾಗೂ ಬಿಜೆಪಿ ವಾಕ್ಸಮರ ಇದರ
ಜೊತೆಗೆ...

ಕರ್ನಾಟಕದಲ್ಲಿ ಸರಣಿ ಅಪಘಾತಗಳು, ಮಳೆ ಹಾನಿ ಚಿತ್ರಗಳೇ ಹೆಚ್ಚಾಗಿತ್ತು. ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದರು. ಆರು ಮಂದಿ ಗಾಯಗೊಂಡಿದ್ದರು. ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಕೆಎಸ್ಆರ್ ಟಿಸಿ ಬಸ್ ಪಲ್ಟಿ ಹೊಡೆದ ದುರಂತದಲ್ಲಿ ಒಟ್ಟು 8 ಮಂದಿ ಪ್ರಯಾಣಿಕರು ದುರಂತದಲ್ಲಿ ಮೃತಪಟ್ಟಿದ್ದರು. 15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿತ್ತು. ಕಳೆದ ವಾರದ ಇನ್ನಷ್ಟು ಸುದ್ದಿಗಳ ಕಥೆ ವ್ಯಥೆ ಇಲ್ಲಿದೆ ನೋಡಿ

ಬಿಲ್ಲುಗಾರ್ತಿಯರಿಗೆ ಚಿನ್ನದ ಪದಕ

ಬಿಲ್ಲುಗಾರ್ತಿಯರಿಗೆ ಚಿನ್ನದ ಪದಕ

ಕೊಲಂಬಿಯಾದಲ್ಲಿ ನಡೆದ ಬಿಲ್ಲುಗಾರಿಕೆ ವಿಶ್ವಕಪ್ ಗೆದ್ದ ದೀಪಿಕಾ ಕುಮಾರಿ(ವಿಶ್ವದ ನಂಬರ್ 3) ಅವರ ಭಾರತೀಯ ಮಹಿಳಾ ತಂಡ

ಪಶ್ಚಿಮ ಬಂಗಾಳದ ಗಲಭೆ

ಪಶ್ಚಿಮ ಬಂಗಾಳದ ಗಲಭೆ

ಪಶ್ಚಿಮ ಬಂಗಾಳದ 4ನೇ ಹಂತದ ಪಂಚಾಯತ್ ಚುನಾವಣೆ ಸೋಮವಾರ ಮುಕ್ತಾಯಗೊಂಡಿದೆ. ಹಿಂಸಾಚಾರದ ಕಾರಣ ಚುನಾವಣೆಗೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರಾಷ್ಟ್ರಪತಿಯಾಗಿ ಪ್ರಣಬ್ ಗೆ 1 ವರ್ಷ

ರಾಷ್ಟ್ರಪತಿಯಾಗಿ ಪ್ರಣಬ್ ಗೆ 1 ವರ್ಷ

ರಾಷ್ಟ್ರಪತಿಯಾಗಿ ಒಂದು ವರ್ಷದ ಅಧಿಕಾರ ಅವಧಿ ಪೂರೈಸಿದ(ಜು.25ಕ್ಕೆ) ಪ್ರಣಬ್ ಮುಖರ್ಜಿ ಅವರು ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಹೂ ಅರ್ಪಿಸಿದರು.

ಮುಂಬೈ, ದೆಹಲಿ ಮಳೆ

ಮುಂಬೈ, ದೆಹಲಿ ಮಳೆ

ಮುಂಬೈ, ದೆಹಲಿಯಲ್ಲಿ ಮಳೆ ಆರ್ಭಟ ಕಳೆದವಾರ ಹೆಚ್ಚಾಗಿತ್ತು, ಟ್ರಾಫಿಕ್ ಸಮಸ್ಯೆ ನಡುವೆ ಜನರು ನಿತ್ಯ ಜೀವನ ಸಾಗಿಸಿದರು.

ಸ್ಪೇನ್ ದುರಂತ

ಸ್ಪೇನ್ ದುರಂತ

ಸ್ಪೇನ್ : ವಾಯುವ್ಯ ಸ್ಪೇನ್ ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ 80 ಜನ ಅಸುನೀಗಿ, 140ಕ್ಕೂ ಅಧಿಕ ಜನ ಗಾಯಾಳುಗಳಾಗಿದ್ದರು.

ಯುಎಸ್ ಜೋ ಭೇಟಿ

ಯುಎಸ್ ಜೋ ಭೇಟಿ

ಯುಎಸ್ ಉಪಾಧ್ಯಕ್ಷ ಜೋ ಬಿಡೆನ್ ಹಾಗೂ ಅವರ ಪತ್ನಿ ಜಿಲ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು.

ಚೀನಾದಲ್ಲಿ ಕಂಪನ

ಚೀನಾದಲ್ಲಿ ಕಂಪನ

ಚೀನಾದ ಡಿಂಗ್ಸಿ ನಗರದಲ್ಲಿ ಸಂಭವಿಸಿದ ಭೂಕಂಪ (6.6 ಮ್ಯಾಗ್ನಿಟ್ಯುಡ್)ದಿಂದ 50 ಜನ ಸಾವನ್ನಪ್ಪಿದ್ದರು. 300ಕ್ಕೂ ಅಧಿಕ ಜನರಿಗೆ ಗಾಯಗಳಾಗಿತ್ತು.

ರಾಯಲ್ ಬೇಬಿ ಆಗಮನ

ರಾಯಲ್ ಬೇಬಿ ಆಗಮನ

ಲಂಡನ್: ಕೇಂಬ್ರಿಡ್ಜ್ ರಾಜಕುವರಿ ಕೇಟ್ ಹಾಗೂ ಪ್ರಿನ್ಸ್ ವಿಲಿಯಂ ದಂಪತಿಗೆ ಪುತ್ರ ಜನನ. ಜು.22 ರಂದು ಜನಿಸಿದ ಬ್ರಿಟಿಷ್ ರಾಜಮನೆತನದ ಕುಡಿಗೆ ಜಾರ್ಜ್ ಎಂದು ಹೆಸರಿಡಲಾಗಿದೆ. ಹೆಚ್ಚಿನ ವಿವರ ಇಲ್ಲಿ ಓದಿ

ಬಿಹಾರ ದುರಂತ ಆರೋಪಿ

ಬಿಹಾರ ದುರಂತ ಆರೋಪಿ

ಚಿತ್ರದಲ್ಲಿ ಮೀನಾ ದೇವಿ, ಬಿಹಾರದ ಛಾಪ್ರಾದ ದುರಂತ ಶಾಲೆಯ ಮುಖ್ಯೋಪಾಧ್ಯಾಯಿನಿ. ಬಿಹಾರದ ಛಾಪ್ರಾದ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 22 ಮಕ್ಕಳು ಸಾವನ್ನಪ್ಪಿದ್ದರು.

ರಾಜ್ ಬಬ್ಬರ್ 'ಅಬ್ಬರ'

ರಾಜ್ ಬಬ್ಬರ್ 'ಅಬ್ಬರ'

ಕಾಂಗ್ರೆಸ್ ಸಂಸದ ರಾಜ್ ಬಬ್ಬರ್ ಅವರು ಮುಂಬೈನಲ್ಲಿ 12 ರು ಗೆ ಫುಲ್ ಮೀಲ್ಸ್ ಸಿಗುತ್ತದೆ ಎಂದು ಹೇಳಿಕೆ ನೀಡಿದ್ದರು. ದೆಹಲಿಯಲ್ಲಿ ಮಸೂದ್ ಅವರು 5 ರು ಗೆ ಊಟ ಸಿಗುತ್ತದೆ ಎಂದರು.

ಜಮ್ಮು ಮತ್ತು ಕಾಶ್ಮೀರ ಸಿಎಂ ಫರೂಖ್ ಅಬ್ದುಲ್ಲಾ 1 ರು ಗೆ ಹೊಟ್ಟೆ ತುಂಬಾ ಊಟ ಎಂದರು. ಮುಂಬೈನಲ್ಲಿ ಹೋಟೆಲ್ ಬಿಲ್ ನಲ್ಲಿ ಯುಪಿಎ ವಿರುದ್ಧ ಪದ ಬಳಕೆ ಮಾಡಿದ ಕಾರಣಕ್ಕೆ ಹೋಟೆಲ್ ಬಂದ್ ಮಾಡಲಾಯಿತು.

ಚಿನ್ನದಂಥ ಅಥ್ಲೀಟ್

ಚಿನ್ನದಂಥ ಅಥ್ಲೀಟ್

ಫ್ರಾನ್ಸಿನ ಲಿಯಾನ್ ನಲ್ಲಿ ನಡೆದ ವಿಶ್ವ ಪ್ಯಾರಾಲಂಪಿಯನ್ ಚಾಂಪಿಯನ್ ಶಿಪ್ ನ ಜಾವೆಲಿನ್ ಎಸೆತ ಸ್ಪರ್ಧೆ(ಎಫ್ -47 ವಿಭಾಗ) ಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ದೇವೇಂದ್ರ ಝಾಝಾರಿಯಾ

ಐಬಿಲ್ ವಿವಾದ

ಐಬಿಲ್ ವಿವಾದ

ಭಾರತದ ಹೆಮ್ಮೆಯ ಬಾಡ್ಮಿಂಟನ್ ತಾರೆಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ಚಿನಿ ಪೊನ್ನಪ್ಪ ಅವರು ಇಂಡಿಯನ್ ಬಾಡ್ಮಿಂಟನ್ ಪ್ರಿಮೀಯರ್ ಲೀಗ್ ಆಯೋಜಕರ ವಿರುದ್ಧ ಕಿಡಿಕಾರಿದರು. ಆಟಗಾರರ ಮೂಲ ಹರಾಜು ಮೊತ್ತ ವ್ಯತ್ಯಾಸ ವಿವಾದಕ್ಕೆ ಕಾರಣವಾಗಿತ್ತು.

ಅಮಾರ್ತ್ಯ ಹೇಳಿಕೆ ವಿವಾದ

ಅಮಾರ್ತ್ಯ ಹೇಳಿಕೆ ವಿವಾದ

ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂದು ಅಮಾರ್ತ್ಯ ಸೇನ್ ನೀಡಿದ ಹೇಳಿಕೆ ಬಿಜೆಪಿ ಖಾರವಾಗಿ ಪ್ರತಿಕ್ರಿಯೆ ನೀಡಿತ್ತು. ಅಮಾರ್ತ್ಯ ಸೇನ್ ಅವರಿಗೆ ನೀಡಿರುವ ಭಾರತ ರತ್ನ ವಾಪಸ್ ಪಡೆಯುವಂತೆ ಆಗ್ರಹಿಸಿತ್ತು.

ಹಿಟ್ ಅಂಡ್ ರನ್ ಸಲ್ಮಾನ್

ಹಿಟ್ ಅಂಡ್ ರನ್ ಸಲ್ಮಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೈಲು ಭೀತಿ ಆವರಿಸಿತ್ತು. 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು, ಪ್ರಕರಣ ಆಗಸ್ಟ್ ಮೊದಲ ವಾರಕ್ಕೆ ಮುಂದೂಡಲಾಗಿದೆ. ಆರೋಪಗಳು ಸಾಬೀತಾದರೆ 10 ವರ್ಷ ಶಿಕ್ಷೆ ಗ್ಯಾರಂಟಿ. ಹೆಚ್ಚಿನ ವಿವರ ಇಲ್ಲಿ ಓದಿ

ಅರುಣ್ ನೆಹರೂ ಅಸ್ತಂಗತ

ಅರುಣ್ ನೆಹರೂ ಅಸ್ತಂಗತ

ಕೇಂದ್ರದ ಮಾಜಿ ಸಚಿವ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಂಬಂಧಿ ಅರುಣ್ ನೆಹರೂ ಅವರು ಇತ್ತೀಚೆಗೆ ನಿಧನರಾದರು.

ಕರ್ನಾಟಕದಲ್ಲಿ ಅಮ್ ಆದ್ಮಿ ಪಕ್ಷ

ಕರ್ನಾಟಕದಲ್ಲಿ ಅಮ್ ಆದ್ಮಿ ಪಕ್ಷ

ಕರ್ನಾಟಕದಲ್ಲಿ ಅಮ್ ಆದ್ಮಿ ಪಕ್ಷ (ಜನ ಸಾಮಾನ್ಯ ಪಕ್ಷ) ಶನಿವಾರ ಅಧಿಕೃತವಾಗಿ ಉದ್ಟಾಟನೆಗೊಂಡಿದೆ. ವಿವರಗಳನ್ನು ಇಲ್ಲಿ ಓದಿ

ತುಂಬಿದ ಅಣೆಕಟ್ಟುಗಳು

ತುಂಬಿದ ಅಣೆಕಟ್ಟುಗಳು

ಈ ವಾರ ಕೃಷ್ಣರಾಜ ಸಾಗರ ಅಣೆಕಟ್ಟಿನ ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿದ್ದು ಎಲ್ಲರಲ್ಲೂ ಹರ್ಷ ಮೂಡಿಸಿತ್ತು. ಕರ್ನಾಟಕದ ಅನೇಕ ಅಣೆಕಟ್ಟುಗಳು ತುಂಬಿದ್ದು ಹಲವೆಡೆ ಪ್ರವಾಹ ಭೀತಿ ಎದುರಾಗಿದೆ. ರಾಜ್ಯದ ಒಳನಾಡು ಬಿಟ್ಟರೆ ಉಳಿದೆಡೆ ಮಳೆ ಎಡೆಬಿಡದೆ ಸುರಿಯುತ್ತಲೇ ಇದೆ

ಬಿಜಾಪುರದ ಅಪಘಾತ

ಬಿಜಾಪುರದ ಅಪಘಾತ

ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದರು.

ಬೇಲೂರು ದುರಂತ

ಬೇಲೂರು ದುರಂತ

ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಕೆಎಸ್ಆರ್ ಟಿಸಿ ಬಸ್ ಪಲ್ಟಿ ಹೊಡೆದ ದುರಂತದಲ್ಲಿ ಒಟ್ಟು 8 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. 15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+