ಪವಿತ್ರ ರಂಜಾನ್ ಮತ್ತು ಇಫ್ತಾರ್ ಕೂಟದ ದೃಶ್ಯಾವಳಿ

ಹಿಜರಿ ಕ್ಯಾಲೆಂಡರಿನ ಪ್ರಕಾರ ಒಂಬತ್ತನೇ ತಿಂಗಳಲ್ಲಿ ಮುಸ್ಲಿಂ ಬಾಂಧವರು ನೇಮ, ನಿಷ್ಠೆಯಿಂದ ಆಚರಿಸುವ ಪವಿತ್ರ ಮಾಸ ರಂಜಾನ್. ಮುಸ್ಲಿಂರ ಪಾಲಿಗೆ ಈ ಮಾಸ ಸ್ವರ್ಗದ ಬಾಗಿಲು ತೆಗೆದಿರುವ ಮಾಸ ಎನ್ನುವ ನಂಬಿಕೆ.

ಈ ಪವಿತ್ರ ತಿಂಗಳಲ್ಲಿ ಪ್ರತೀ ಮುಸ್ಲಿಂರು ಕಟ್ಟುನಿಟ್ಟಾಗಿ ಉಪವಾಸ ಮಾಡುವುದು ಕಡ್ಡಾಯ ಮತ್ತು ಕರ್ತವ್ಯ. ಸೂರ್ಯೋದಯದ ಮೊದಲು ಬೆಳಗ್ಗಿನ ನಮಾಜ್ ನಂತರ ಉಂಡರೆ ನಂತರ ಸೂರ್ಯಾಸ್ತದ ನಮಾಜ್ ನಂತರವೇ ಇಫ್ತಾರ್ ಮೂಲಕ ದಿನದ ಉಪವಾಸ ಮುರಿಯುವುದು ಈ ಮಾಸದಲ್ಲಿರುವ ಪದ್ದತಿ.

ಈ ಪವಿತ್ರ ತಿಂಗಳಲ್ಲಿ ಯಾರು ಅಲ್ಲಾನನ್ನು ಎಷ್ಟು ಸ್ತುತಿಸುತ್ತಾರೋ ಮತ್ತು ಕುರಾನ್ ಪಠಣ ಮಾಡುತ್ತಾರೋ ಅಷ್ಟು ಒಳ್ಳೆದು ಎನ್ನುವ ನಂಬಿಕೆ ಮುಸಲ್ಮಾರದ್ದು. ಇಫ್ತಾರ್ ಕೂಟ ರಂಜಾನ್ ತಿಂಗಳಿನ ಮತ್ತೊಂದು ವಿಶೇಷತೆ. ಮುಸ್ಲಿಂ ಬಾಂಧವರು ಒಬ್ಬರು ಇನ್ನೊಬ್ಬರನ್ನು ಗೌರವ, ಆದರದಿಂದ ಸತ್ಕರಿಸುವುದು ಇಫ್ತಾರ್ ಕೂಟದ ಭಾಗವಾಗಿದೆ.

ರಂಜಾನ್ ಹಬ್ಬ ಚಂದ್ರ ದರ್ಶನದಂತೆ 29ನೇ ಅಥವಾ 30ನೇ ಉಪವಾಸದ ಬಳಿಕ ಕೊನೆಗೊಳ್ಳುತ್ತದೆ. ಅಂದು ಬಡವರಿಗೆ ಬಟ್ಟೆಬರೆ, ಆಹಾರ ಪದಾರ್ಥಗಳನ್ನು ದಾನ ಮಾಡಿ ರಂಜಾನ್ (ಈದ್ - ಉಲ್-ಫಿತರ್) ಹಬ್ಬವನ್ನು ಆಚರಿಸುತ್ತಾರೆ.

ಈ ವರ್ಷ ರಂಜಾನ್ ಹಬ್ಬ ಆಗಸ್ಟ್ 9 ಅಥವಾ 10ರಂದು ಬರಲಿದೆ. ನಿಖರವಾದ ದಿನವನ್ನು ದೆಹಲಿಯ ಜಾಮಾ ಮಸೀದಿಯ ಇಮಾಂಮರು ಘೋಷಿಸುತ್ತಾರೆ. ಅಂದ ಹಾಗೆ, ಆಗಸ್ಟ್ ಏಳರಿಂದ ಶ್ರಾವಣ ಮಾಸಾರಂಭ ಮತ್ತು ಆಗಸ್ಟ್ 9ರಂದು ಸಂಪದ್ಗೌರೀ ವೃತ.

ದೇಶದ ಕೆಲವು ಕಡೆ ನಡೆದ ಇಫ್ತಾರ್ ಕೂಟದ ಬಗ್ಗೆ ಸ್ಲೈಡಿನಲ್ಲಿ.

ಮುಂಬೈ

ಮುಂಬೈ

ಮುಂಬೈನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್, ನಟ ಸಂಜಯ್ ಖಾನ್, ಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಭಾಗವಹಿಸಿದ್ದರು.

ಮುಂಬೈ ಇಫ್ತಾರ್

ಮುಂಬೈ ಇಫ್ತಾರ್

ಶುಕ್ರವಾರ (ಜು 26) ಆಯೋಜಿಸಲಾಗಿದ್ದ ಈ ಕೂಟದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡಾ ಭಾಗವಹಿಸಿದ್ದರು.

ಲಕ್ನೋ

ಲಕ್ನೋ

ಉತ್ತರಪ್ರದೇಶದ ರಾಜಧಾನಿಯಲ್ಲಿ ಲಕ್ನೋದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ರಾಜ್ಯಪಾಲ ಬಿ ಎಲ್ ಜೋಷಿ, ಸಿಎಂ ಅಖಿಲೇಶ್ ಯಾದವ್ ಭಾಗವಹಿಸಿದ್ದರು. ರಾಜಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಾಂಚಿ

ರಾಂಚಿ

ಜಾರ್ಖಂಡ್ ರಾಜಧಾನಿ ರಾಂಚಿಯ ಇಫ್ತಾರ್ ಕೂಟದಲ್ಲಿ ರಾಜ್ಯಪಾಲ ಸಯ್ಯದ್ ಅಹಮದ್ ಮತ್ತು ಸಿಎಂ ಹೇಮಂತ್ ಸೊರೆನ್ ಭಾಗವಹಿಸಿದ್ದರು.

ಭೋಪಾಲ್

ಭೋಪಾಲ್

ಮಧ್ಯಪ್ರದೇಶದ ರಾಜಧಾನಿ ಭೋಪಾಲಿನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪಾಲ್ಗೊಂಡಿದ್ದರು.

ಕೊಲ್ಕತ್ತಾ

ಕೊಲ್ಕತ್ತಾ

ಕೊಲ್ಕತ್ತಾ ಮುನ್ಸಿಪಾಲಿಟಿ ಪಾರ್ಕ್ ಸರ್ಕಸ್ ಮೈದಾನದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+