ಜಿಕೆಟಗರಿ ನಿವೇಶನ: ಸಿಎಂ ಸಿದ್ದರಾಮಯ್ಯ ಖಡಕ್ ನಿರ್ಧಾರ

Chief Minister Siddaramaiah
ಬೆಂಗಳೂರು, ಜುಲೈ23: ಹಿಂದಿನ ಸರಕಾರಗಳು ಕಡಲೆ ಪುರಿಯಂತೆ ಜಿ ಕೆಟಗರಿ ನಿವೇಶನಗಳನ್ನು ಹಂಚಿರುವಾಗ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡಿಎ ನಿವೇಶನ ಹಂಚಿಕೆ ಸಂಬಂಧ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ.

ಏನಪ್ಪಾ ಅಂದರೆ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಡಿಎನಿಂದ ಯಾವುದೇ ಜಿ ಕೆಟಗರಿ ನಿವೇಶನ ಕೊಟ್ಟಿಲ್ಲ. ನ್ಯಾಯಾಲಯದ ತೀರ್ಮಾನ ಬರುವವರೆಗೆ ಕೊಡೋದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಅಪ್ಪಚ್ಚುರಂಜನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 15 ವಿಧಾನಸಭೆ ಸದಸ್ಯರು, 8 ವಿಧಾನಪರಿಷತ್ ಸದಸ್ಯರು ಮತ್ತು ಒಬ್ಬರು ಮಾಜಿ ಎಂಪಿಗೆ ಜಿ ಕೆಟಗರಿ ನಿವೇಶನ ಕೊಡಲಾಗಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಯಾರಿಗೂ ಜಿ ಕೆಟಗರಿ ನಿವೇಶನ ಕೊಟ್ಟಿಲ್ಲ. ಕೊಡಬಾರದು ಎಂಬುದೂ ತಮ್ಮ ನಿರ್ಧಾರವಾಗಿದೆ ಎಂದು ಸಿಎಂ ಸಿದ್ದು ಸ್ಪಷ್ಟಡಿಸಿದರು.

ಈ ಸಂಬಂಧ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದಾಗ 2013ರಲ್ಲಿ ಹೈಕೋರ್ಟ್ ಜಿ ಕ್ಯಾಟಗರಿ ನಿವೇಶನ ಹಂಚಿಕೆಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಪದ್ಮರಾಜ್, ರಂಗವಿಠಲ ಚಾರ್, ಪಿಬಿ ಮಹಿಷಿ ಅವರ ಸಮಿತಿಯನ್ನು ನೇಮಕ ಮಾಡಿದೆ. ಈ ಸಮಿತಿ ಆ. 26ಕ್ಕೆ ವರದಿ ನೀಡಲಿದ್ದು, ಆನಂತರ ಸರ್ಕಾರ ಈ ವಿಚಾರದಲ್ಲಿ ಜಿ ಕೆಟಗರಿ ನಿವೇಶನ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಿಎಂ ಸಿದ್ದು ವಿವರಿಸಿದ್ದಾರೆ.

1985ರಿಂದ ಬಿಜೆಪಿ ಸರ್ಕಾರದ ಆಡಳಿತ ಕೊನೆಯಾಗುವವರೆಗೆ 1930 ಜಿ ಕೆಟಗರಿ ನಿವೇಶನಗಳನ್ನು ಹಂಚಲಾಗಿದೆ. ನಾವುಗಳ್ಯಾರೂ ಜಿ ಕೆಟಗರಿ ನಿವೇಶನ ಪಡೆದು ಕೊಂಡಿಲ್ಲ. ನಿಮ್ಮ ಸರ್ಕಾರವೇ ಇತ್ತು. ನೀವೇ ಕೊಟ್ಟಿದ್ದೀರಿ ಎಂದು ಸಿಎಂ ಹೇಳಿದರು. ನನ್ನ ಪ್ರಶ್ನೆಯನ್ನು ಕೇವಲ ಮೂರು ವರ್ಷಕ್ಕೆ ಸೀಮಿತ ಮಾಡಿದ್ದಾರೆ. ಜಿ ಕೆಟಗರಿ ಕೋಟಾದಡಿ ಶಾಸಕರು ಮಾತ್ರವಲ್ಲ. ಕಾರು ಚಾಲಕರು ಕೂಡ ನಿವೇಶನ ಪಡೆದಿದ್ದಾರೆ ಎಂದು ಅಪ್ಪಚ್ಚುರಂಜನ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+