ವಿಚ್ಛೇದಿತ ಪತ್ನಿಗೆ ಪಿತ್ರಾರ್ಜಿತ ಆಸ್ತಿಯಲ್ಲೂ ಪಾಲು!

ಬುಧವಾರ ಪ್ರಧಾನಿ ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ, ಸಚಿವರ ಉನ್ನತಮಟ್ಟದ ಸಮಿತಿಯು ನೀಡಿದ ಶಿಫಾರಸುಗಳಿಗೆ ಅನುಮೋದನೆ ನೀಡಲಾಗಿದೆ.
ಸಮಿತಿಯ ಸಲಹೆ : ವಿವಾಹ ಕಾಯ್ದೆಯ ತಿದ್ದುಪಡಿ ಕುರಿತು ಶಿಫಾರಸು ಸಲ್ಲಿಸಲು ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಚಿವರ ಸಮಿತಿ ರಚಿಸಿತ್ತು. ಈ ಸಮಿತಿ ವಿಚ್ಛೇದನ ಪ್ರಕರಣಗಳಲ್ಲಿ ಪತಿಯ ಪೂರ್ವಿಕರ ಆಸ್ತಿಯಲ್ಲೂ ಪತ್ನಿಗೆ ಪಾಲು ಇರಬೇಕೆಂದು ಎಂದು ಶಿಫಾರಸು ಮಾಡಿತ್ತು.
ಸಚಿವ ಸಂಪುಟ ಸಭೆಯಲ್ಲಿ ಈ ಶಿಫಾರಸುಗಳಿಗೆ ಅನುಮೋದನೆ ನೀಡಿ ವಿವಾಹ ಕಾಯ್ದೆಯಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಪಿರ್ತಾರ್ಜಿತ ಆಸ್ತಿಯಲ್ಲಿ ಪಾಲು ಕೊಡುವುದು ಸಾಧ್ಯವಾಗದೇ ಇದ್ದರೆ, ನಿರ್ಧಿಷ್ಟ ಪ್ರಮಾಣದ ಪರಿಹಾರ ನೀಡಬೇಕು ಎಂದು ಕಾನೂನು ತಿದ್ದುಪಡಿ ಆಗಲಿದೆ.
ಈಗಿನ ಕಾನೂನು ಏನು : ಪ್ರಸ್ತುತ ಪತಿಯ ಆಸ್ತಿಯಲ್ಲಿ ಪಾಲು ಪಡೆಯಲು ವಿಚ್ಛೇದಿತ ಮಹಿಳಿಗೆ ಅಧಿಕಾರವಿದೆ. ಆದರೆ ಪತಿಯ ಪೂರ್ವಿಕರ ಆಸ್ತಿಯಲ್ಲಿ ವಿಚ್ಛೇದಿತ ಮಹಿಳೆಗೆ ಪಾಲು ನೀಡುವ ಅವಕಾಶವಿಲ್ಲ.
ಕೇಂದ್ರ ಸರ್ಕಾರದ ವಿವಾಹ ಕಾಯ್ದೆಗೆ ಹೊಸ ವಿಧಿಯನ್ನು ಸೇರಿಸಿ, ಪಿರ್ತಾರ್ಜಿತ ಆಸ್ತಿಯಲ್ಲಿಯೂ ವಿಚ್ಛೇದಿತ ಮಹಿಳಿಗೆ ಪಾಳು ನೀಡುವ ತಿದ್ದುಪಡಿ ಜಾರಿಗೆ ತರಲಿದೆ. ಆ ಮೂಲಕ ಕಾಯ್ದೆಯನ್ನು ಮತ್ತಷ್ಟು ಮಹಿಳಾ ಪರವಾಗಿಸಲು ಅನುಮೋದನೆ ನೀಡಿದೆ.












Click it and Unblock the Notifications