ಕ್ರೈಸ್ಟ್ ಕಾಲೇಜು ಲೈಂಗಿಕ ಕಿರುಕುಳ ಪ್ರಕರಣಕ್ಕೆ ತೆರೆ

rape
ಬೆಂಗಳೂರು, ಜು.17 : ನಗರದ ಕ್ರೈಸ್ಟ್ ಕಾಲೇಜಿನ ಲೈಂಗಿಕ ಕಿರುಕುಳ ಆರೋಪ ಮಹತ್ವದ ತಿರುವು ಪಡೆದುಕೊಂಡಿದೆ. ಎನ್‌ಸಿಸಿ ಶಿಕ್ಷಕನ ವಿರುದ್ಧ ನೀಡಿದ್ದ ದೂರನ್ನು ಯುವತಿ ಕುಟುಂಬದವರು ಹಿಂಪಡೆದಿದ್ದಾರೆ. ಇದರಿಂದಾಗಿ ಪ್ರಕರಣದ ತನಿಖೆ ಅಂತ್ಯವಾಗಲಿದೆ.

ಬುಧವಾರ ವಿದ್ಯಾರ್ಥಿನಿ ಪೋಷಕರು, ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕ ಅಜಯ್ ಪಿನ್ನಿತ್ರನ್ ವಿರುದ್ಧ ನೀಡಿದ ತೀರ್ಪನ್ನು ಹಿಂಪಡೆದಿದ್ದಾರೆ. ನಮಗೆ ಈ ಪ್ರಕರಣದಿಂದ ಮಾನಸಿಕ ಕಿರಿಕಿರಿ ಉಂಟಾಗಿದೆ.

ಈ ಪ್ರಕಣದ ತನಿಖೆ ನಡೆದು ವಿಚಾರಣೆ ಮುಗಿಯಲು ಹಲವು ದಿನಗಳು ಬೇಕು. ನಮಗೆ ಅನಗತ್ಯ ಕಲಾಪಗಳು ಬೇಡ ಆದ್ದರಿಂದ ದೂರನ್ನು ಹಿಂಪಡೆಯುತ್ತೇವೆ. ದೂರನ್ನು ಹಿಂಪಡೆಯುವಂತೆ ನಮಗೆ ಯಾವುದೇ ಒತ್ತಡವಿಲ್ಲ ಎಂದು ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಏನಿದು ಪ್ರಕರಣ : ಕ್ರೈಸ್ಟ್‌ ಕಾಲೇಜಿನ 2ನೇ ವರ್ಷದ ಬಿಎ ವಿದ್ಯಾರ್ಥಿನಿ ಎನ್‌ಸಿಸಿಗೆ ಸೇರ್ಪಡೆಯಾಗಿದ್ದಳು. ಸುಮಾರು ಆರು ತಿಂಗಳಿನಿಂದ, ತರಬೇತಿ ನೆಪದಲ್ಲಿ ಶಿಕ್ಷಕ ಅಜಯ್ ನನ್ನನ್ನು ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬುದು ವಿದ್ಯಾರ್ಥಿನಿ ಆರೋಪ.

ಸೋಮವಾರ ಎನ್‌ಸಿಸಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿನಿಗೆ ಶಿಕ್ಷಕರು ಸೂಚಿಸಿದ್ದರು. ಇದಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿಸಿದಾಗ, ವಿದ್ಯಾರ್ಥಿಗಳ ಎದುರು ನನಗೆ ಹೊಡೆದಿದ್ದಾರೆ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಳು.

ಶಿಕ್ಷಕರ ವರ್ತನೆಯಿಂದ ಮನನೊಂದ ಯುವತಿ ಸೋಮವಾರ ಕಾಲೇಜಿನ ಕ್ಯಾಂಪಸ್ಸಿನಲ್ಲಿ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸದ್ಯ ಯುವತಿ ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಯುವತಿ ಕುಟುಂಬದವರು ನೀಡಿದ ದೂರಿನ ಅನ್ವಯ ಮೈಕೋಲೇಜೌಟ್ ಪೊಲೀಸರು ಮಂಗಳವಾರ ಶಿಕ್ಷಕ ಅಜಯ್ ನನ್ನು ಬಂಧಿಸಿ, 6ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಶಿಕ್ಷಕನಿಗೆ ಒಂದು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+