ಸನ್ ನೆಟ್ವರ್ಕ್ ತೆಕ್ಕೆಗೆ ಟಿವಿ 9 ಗ್ರೂಪ್ ! ಸ್ಪಷ್ಟೀಕರಣ

ಚೆನ್ನೈ, ಜು 17: ಕಲಾನಿಧಿ ಮಾರನ್ ಒಡೆತನದ ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ ಹೈದರಾಬಾದ್ ಮೂಲದ ಟಿವಿ 9 ಸಮೂಹ ಸಂಸ್ಥೆಯನ್ನು ಖರೀದಿಸಲಿದೆ ಎನ್ನುವ ಸುದ್ದಿಗೆ ಸನ್ ನೆಟ್ವರ್ಕ್ ಸ್ಪಷ್ಟೀಕರಣ ನೀಡಿದೆ.

ಮಾಧ್ಯಮಗಳಲ್ಲಿ ಬರುತ್ತಿರುವ ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಈ ವರದಿಯಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಎಂದು ಸನ್ ನೆಟ್ವರ್ಕ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಎಸ್ ಎಲ್ ನಾರಾಯಣ್ ಸ್ಪಷ್ಟ ಪಡಿಸಿದ್ದಾರೆ.

Sun TV denies TV9 acquisition report

ಈ ಬಗ್ಗೆ ಮಾತನಾಡುತ್ತಿದ್ದ ಅಸೋಸಿಯೇಟೆಡ್ ಬ್ರಾಡ್ಕಾಸ್ಟ್ ಕಂಪೆನಿ ಲಿಮಿಟೆಡ್ ಸಂಸ್ಥೆಯ ಶ್ರೀನಿರಾಜು , ಟಿವಿ 9 ಸಮೂಹ ಸಂಸ್ಥೆಯ ಷೇರುಗಳನ್ನು ಸನ್ ನೆಟ್ವರ್ಕಿಗೆ ಮಾರಾಟ ಮಾಡುವ ಸುದ್ದಿ ಸುಳ್ಳು ವರದಿ. ಇದು ಚರ್ಚೆಯ ಹಂತದಲ್ಲೂ ಇಲ್ಲ ಮತ್ತು ಸನ್ ನೆಟ್ವರ್ಕ್ ಈ ಬಗ್ಗೆ ನಮಗೆ ಪ್ರಸ್ತಾಪನೆಯನ್ನೂ ಸಲ್ಲಿಸಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಸನ್ ನೆಟ್ವರ್ಕ್, ಟಿವಿ 9 ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳುವ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ. ಸುಮಾರು 150 ಕೋಟಿ ರೂಪಾಯಿಗೆ ಈ ಡೀಲ್ ಅಂತಿಮವಾಗಬಹುದು ಎಂದು ಹಿಂದು ಬ್ಯುಸಿನೆಸ್ ಆನ್ಲೈನ್ ಸೇರಿದಂತೆ ಹಲವು ಆಂಗ್ಲ ಅಂತರ್ಜಾಲಗಳಲ್ಲಿ ಸೋಮವಾರ (ಜು 15) ವರದಿ ಪ್ರಕಟವಾಗಿದ್ದವು.

ಮಾರಿಷಸ್ ಮೂಲದ ಸೈಫ್ ಪಾರ್ಟ್ನರ್ಸ್ ಟಿವಿ 9 ಸಂಸ್ಥೆಯಲ್ಲಿ ಗಣನೀಯ ಷೇರುಗಳನ್ನು ಹೊಂದಿದ್ದು ಅದನ್ನು ಅದು ಮಾರಾಟ ಮಾಡಿ ಸಂಸ್ಥೆಯ ಆಡಳಿತದಿಂದ ಹೊರಬರಲು ಇಚ್ಚಿಸುತ್ತಿದೆ ಎಂದೂ ಅಂತರ್ಜಾಲದಲ್ಲಿ ವರದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+