ಪ್ರೊಫೆಸರ್ ಪತ್ನಿಯ ಹತ್ಯೆ: ಡಿಡಿ ರಿಪೋರ್ಟರ್ ಅರೆಸ್ಟ್

wife-mamatha-murder-m-lore-dd-reporter-gangadhar-held
ಮಂಗಳೂರು, ಜುಲೈ16: ಪತ್ನಿ ಹತ್ಯೆ ಆರೋಪದ ಮೇಲೆ ದೂರದರ್ಶನದ ಸ್ಥಳೀಯ ವರದಿಗಾರನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಗಂಗಾಧರ ಪಡುಬಿದ್ರಿ ಬಂಧಿತ ಪತ್ರಕರ್ತ. ಕೊಡಿಕಲ್ ಸಮೀಪವಿರುವ ತನ್ನ ಸೋದರಿಯ ಮನೆಯಲ್ಲಿ ಪತ್ನಿ ಮಮತಾ ತೀರ್ಥ ಶೆಟ್ಟಿ (32) ಅವರನ್ನು ಸೋಮವಾರ ಹತ್ಯೆ ಮಾಡಿರುವ ಆರೋಪದ ಮೇರೆಗೆ ಊರ್ವ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಗಂಗಾಧರ ಪಡುಬಿದ್ರಿ ಮತ್ತು ಮಮತಾರ ಮದುವೆ ಮೂರು ವರ್ಷಗಳ ಹಿಂದೆ ನಡೆದಿತ್ತು. ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ವೈಮನಸ್ಯ ತಲೆದೋರಿ ಸಂಸಾರದಲ್ಲಿ ಬಿರುಗಾಳಿಯೆದ್ದಿತ್ತು. ಅದು ನಿನ್ನೆ ವಿಕೋಪಕ್ಕೆ ತಿರುಗಿತ್ತು.

ಮಮತಾ ತೀರ್ಥ ಶೆಟ್ಟಿ ಅವರು SDM ಕಾನೂನು ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಂಟರ ಸಮುದಾಯಕ್ಕೆ ಸೇರಿದ ಮಮತಾ ಅನಾಥೆ. ಗಂಗಾಧರ ಸಮಾಜಿಕ ಕಾರ್ಯಕರ್ತ ಸೋಗು ಧರಿಸಿ, ಆಕೆಯನ್ನು ವರಿಸಿದ್ದ.

ಗಂಗಾಧರನೇ ತನ್ನ ಪತ್ನಿಯನ್ನು ಹತ್ಯೆ ಮಾಡಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಆತನನ್ನು ತಕ್ಷಣ ಬಂಧಿಸಿದ್ದಾರೆ. ಡಿಸಿಪಿ ಧರ್ಮಯ್ಯ, ಎಸಿಪಿ ಕವಿತಾ ಮತ್ತು ಊರ್ವ ಪೊಲೀಸ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.

ಈ ಮಧ್ಯೆ, SDM ಕಾಲೇಜಿನ ಪ್ರಿನ್ಸಿಪಾಲ್ ಡಾ. ಡಿಕೆ ರವೀಂದ್ರ ಮತ್ತು ಉಪನ್ಯಾಸಕ ಅನಿಲ್ ಡಿಸೋಜಾ ಸಹ ಮಮತಾ ಮನೆಗೆ ಭೇಟಿ ನೀಡಿ, ತನಿಖೆಗೆ ಸಹಕರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+