ಇಶ್ರತ್ ಎನ್ಕೌಂಟರ್ ಫಲಶ್ರುತಿ: ದೇಶದ ಭದ್ರತೆಗೆ ಅಪಾಯ

ನವದೆಹಲಿ,

ಜುಲೈ
15:
ಎತ್ತಿಗೆ
ಜ್ವರ
ಬಂದರೆ
ಎಮ್ಮೆಗೆ
ಬರೆ...
ಎಂಬಂತಾಗಿದೆ
ದೇಶದ
ಸ್ಥಿತಿ.
ಇಶ್ರತ್
ಜಹಾನ್
ಎಂಬ
ಯುವತಿ
ಸೇರಿದಂತೆ
ನಾಲ್ವರನ್ನು
ಪೊಲೀಸರು
ಗುಂಡಿಟ್ಟು
ಸಾಯಿಸಿದ
ಪ್ರಕರಣಕ್ಕೆ
ರಾಜಕೀಯ
ಬಣ್ಣ
ಮೆತ್ತಿಕೊಂಡು
ಕೇಸು
ರಾಡಿಯಾಗಿರುವ
ಹಿನ್ನೆಲೆಯಲ್ಲಿ
ಉನ್ನತ
ಅಧಿಕಾರಶಾಹಿಯಲ್ಲಿ
ಅಸಹನೆ
ಮನೆ
ಮಾಡಿಕೊಂಡಿದೆ.
ಇದರ
ಪರಿಣಾಂ
ದೇಶದ
ಆಂತರಿಕ
ಭದ್ರತೆಗೆ
ಅಪಾಯ
ಎದುರಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಗೋಕುಲಾಷ್ಠಮಿಗೂ

ಇಮಾಂ
ಸಾಬೀಗೂ
ಎತ್ತಣ
ಸಂಬಂಧ
ಎಂದು
ಕೇಳುವ
ಮುನ್ನ
ಇಲ್ಲಿರುವ
ಆತಂಕಕಾರಿ
ವರದಿಯೊಂದನ್ನು
ಕೇಳಿ.
ಏನಪ್ಪಾ
ಅಂದರೆ
ಗುಪ್ತಚರ
ಇಲಾಖೆ
ವಿಶೇಷ
ನಿರ್ದೇಶಕ
ರಾಜಿಂದರ್
ಕುಮಾರ್
ಅವರನ್ನು
ಇಶ್ರತ್
ಜಹಾನ್
ಎನ್ಕೌಂಟರ್
ಪ್ರಕರಣದಲ್ಲಿ
ಸಿಬಿಐ
ವಿಶೇಷ
ತನಿಖೆಗೆ
ಗುರಿಪಡಿಸಿರುವುದರಿಂದ
ರಾಷ್ಟ್ರದ
ಸರ್ವೋಚ್ಛ
Intelligence
Bureauದಲ್ಲಿನ
ಉನ್ನತಾಧಿಕಾರಿಗಳಲ್ಲಿ
ಅಸಹನೆಯ
ಕಟ್ಟೆಯೊಡೆದಿದೆ.

id='are-slot-2'
class='oiad
oi-axt
oiadv'>

IB

ಉನ್ನತಾಧಿಕಾರಿಗಳನ್ನು
ಪ್ರಕರಣವು
ಅಧೀರರನ್ನಾಗಿಸಿದೆ.
ತತ್ಪರಿಣಾಮ
ದೇಶದ
ಆಂತರಿಕ
ಭದ್ರತೆಗೆ
ಸಂಬಂಧಿಸಿದಂತೆ
ಸರಕಾರದ
ವಿವಿಧ
ಇಲಾಖೆಗಳಿಗೆ
ಗುಪ್ತ
ಮಾಹಿತಿ
ಒದಗಿಸಬೇಕಾದ
IB
ಅಧಿಕಾರಿಗಳು,
ತಮ್ಮ
ಮೂಲ
ಕೆಲಸದ
ಬಗ್ಗೆ
ಮೌನ
ವಹಿಸಿದ್ದಾರೆ.
ಇದರಿಂದ
ಇಶ್ರತ್
ಎನ್ಕೌಂಟರ್
ಸಮ್ಮುಖದಲ್ಲಿ
CBI
ಮತ್ತು
IB
ನಡುವಣ
ಶೀತಲ
ಸಮರ
ತಾರಕಕ್ಕೇರಿದ್ದು,
ದೇಶದ
ಆಂತರಿಕ
ಭದ್ರತೆಗೆ
ಅಪಾಯವೊದಗಿದೆ
ಎಂದು
ಮೂಲಗಳು
ತಿಳಿಸಿವೆ.
Multi Agency Centre

Multi Agency Centre

ಕೇಂದ್ರ ಸರಕಾರದ ಮಟ್ಟದಲ್ಲಿ ಬಹು ಸ್ಥರೀಯ ಕೇಂದ್ರದ (Multi Agency Centre) ಜತೆ ಕಾರ್ಯಗತವಾಗುವ ಇತರೆ ಇಲಾಖೆಗಳಿಂದ ಲಭ್ಯವಾಗುವ ಗುಪ್ತ ಮಾಹಿತಿಯನ್ನಷ್ಟೇ ರಾಜ್ಯಗಳಿಗೆ ರವಾನಿಸಿ ಕೈತೊಳೆದುಕೊಳ್ಳುತ್ತಿದೆ.

IB ಹಾಲಿ ಮುಖ್ಯಸ್ಥ ಸಯ್ಯದ್ ಅಸೀಫ್ ಇಬ್ರಾಹಿಂ

IB ಹಾಲಿ ಮುಖ್ಯಸ್ಥ ಸಯ್ಯದ್ ಅಸೀಫ್ ಇಬ್ರಾಹಿಂ

IB ಹಾಲಿ ಮುಖ್ಯಸ್ಥ ಸಯ್ಯದ್ ಅಸೀಫ್ ಇಬ್ರಾಹಿಂ. ದೇಶದ ಭದ್ರತೆಗೆ ಸಂಬಂಧಿಸಿದಂತೆ IBಯ ಅತ್ಯುನ್ನತ ಸ್ಥಾನಕ್ಕೆ ನೇಮಕವಾದ ಮೊದಲ ಮುಸ್ಲಿಂ ಅಧಿಕಾರಿ ಇಬ್ರಾಹಿಂ ಅವರು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಇಂತಹ ಎಚ್ಚರಿಕೆಯ ಸಂದೇಶಗಳನ್ನು ರವಾನಿಸಬೇಕಿತ್ತು. ಆದರೆ ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ Intelligence Bureauದಿಂದ ಒಂದೇ ಒಂದು ಎಚ್ಚರಿಕೆಯ ಸಂದೇಶವೂ ಬಂದಿಲ್ಲ.

ಬೋಧ್ ಗಯಾ ಸರಣಿ ಸ್ಫೋಟ ಮಾಹಿತಿ ವಿಳಂಬ

ಬೋಧ್ ಗಯಾ ಸರಣಿ ಸ್ಫೋಟ ಮಾಹಿತಿ ವಿಳಂಬ

ಇತ್ತೀಚೆಗೆ ಬೋಧ್ ಗಯಾ ಸರಣಿ ಬಾಂಬ್ ಸ್ಫೋಟದ ಕುರಿತಾದ ಮಾಹಿತಿಯನ್ನು IB ನೀಡಲಿಲ್ಲ. ಬದಲಿಗೆ MAC ಮೂಲಕ ಬೇರೊಂದು ಸಂಸ್ಥೆ ನೀಡಿತ್ತು ಎನ್ನಲಾಗಿದೆ. ಇದರಿಂದ ಗೊಂದಲ/ಅನಗತ್ಯ ವಿಳಂಬವಾಯ್ತು ಎಂದು ಗೃಹ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ.

ಈಗ ಪರಿಸ್ಥಿತಿ ತದ್ವಿರುದ್ಧ!

ಈಗ ಪರಿಸ್ಥಿತಿ ತದ್ವಿರುದ್ಧ!

ಈ ಹಿಂದೆ ಆಗಿದ್ದರೆ ಭಯೋತ್ಫಾದಕ ಚಟುಟವಟಿಕೆ ಸೇರಿದಂತೆ ಯಾವುದೇ ಅಪಾಯದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ Intelligence Bureau ತಕ್ಷಣ ಆ ಮಾಹಿತಿಯನ್ನು ಕೇಂದ್ರಕ್ಕೆ ರವಾನಿಸುವುದೂ ಅಲ್ಲದೆ ಸ್ವತಃ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಕ್ರಿಯವಾಗಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ತದ್ವಿರುದ್ಧ!

ಕಾಂಗ್ರೆಸ್ UPAಗೆ ತನ್ನದೇ ಆದ ರಾಜಕೀಯ ಗುರಿಸಾಧನೆ

ಕಾಂಗ್ರೆಸ್ UPAಗೆ ತನ್ನದೇ ಆದ ರಾಜಕೀಯ ಗುರಿಸಾಧನೆ

ಈ ಬೆಳವಣಿಗೆಗಳಿಂದ ಸ್ಥೈರ್ಯ ಕಳೆದುಕೊಂಡಿರುವ IB ನಿರ್ದೇಶಕ ಸಯ್ಯದ್ ಅಸೀಫ್ ಇಬ್ರಾಹಿಂ ಅವರು ಪ್ರಧಾನಿ ಮತ್ತು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ತಮ್ಮ ಅಸಮಾಧಾನ ಹೊರಹಾಕಿರುವ ಇಬ್ರಾಹಿಂ ಅವರು, CBI ತಮ್ಮ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸುವುದನ್ನು ಪ್ರಶ್ನಿಸಿದ್ದಾರಂತೆ. ಆದರೆ ಕಾಂಗ್ರೆಸ್ ನೇತೃತ್ವದ ಇಂದಿನ ಕೇಂದ್ರ ಸರಕಾರಕ್ಕೆ ತನ್ನದೇ ಆದ ರಾಜಕೀಯ ಗುರಿಸಾಧನೆಗಳನ್ನು ಈಡೇಸಿಕೊಳ್ಳಬೇಕಾದ ತುರ್ತು ಇದೆ.

 ಭವಿಷ್ಯದಲ್ಲಿ ಗುಪ್ತ ಚರ ಇಲಾಖೆ ಹೇಗೋ ಏನೋ

ಭವಿಷ್ಯದಲ್ಲಿ ಗುಪ್ತ ಚರ ಇಲಾಖೆ ಹೇಗೋ ಏನೋ

ಇಶ್ರತ್ ಜಹಾನ್ ಅಂತಹ ಎನ್ಕೌಂಟರ್ ಪ್ರಕರಣಗಳಲ್ಲಿ ತನ್ನ ಅಧಿಕಾರಿಗಳಿಗೆ ಸಂರಕ್ಷಣೆ ನೀಡದ ಹೊರತು ಭವಿಷ್ಯದಲ್ಲಿ ಗುಪ್ತ ಚರ ಇಲಾಖೆ ತನ್ನ ಸೇವೆಯನ್ನು ಮುಂದುವರಿಸುವುದು ಕಷ್ಟ ಸಾಧ್ಯವಾಗುತ್ತದೆ ಎಂದು IB ಹಿರಿಯ ಅಧಿಕಾರಿಯೊಬ್ಬರು ಮ್ಲಾನವದನರಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+