ಲೋಕಸಭೆ ಚುನಾವಣೆ: 10 ಸ್ಥಾನಗಳಿಗೆ ಕೆಜೆಪಿ ತಾಲೀಮು
ಬೀದರ್,
ಜುಲೈ 15: ಬಿಜೆಪಿಗೆ ಮರಳುವುದಕ್ಕೆ ಸೂಕ್ತ ಮುಲಾಮು ಸಿಗದ ಹಿನ್ನಲೆಯಲ್ಲಿ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಒತ್ತಡದ ತಂತ್ರಕ್ಕೆ ಶರಣಾಗಿರುವಂತಿದೆ. id="toptextpromo"> id='are-slot-1' class='oiad oi-axt oiadv'>ಆದರೆ
ಯಾವ ಪಕ್ಷದ ಜತೆಯೂ ವಿಲೀನವಾಗುವುದಿಲ್ಲ. ತಮ್ಮದೇ ಪ್ರತ್ಯೇಕ ಅಸ್ತಿತ್ವವವನ್ನು ಉಳಿಸಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕೆಜೆಪಿ ಸ್ಪರ್ಧೆಗಾಗಿ ಮೊದಲ ಕಂತಿನಲ್ಲಿ ಅವರು 10 ಲೋಕಸಭಾ ಕ್ಷೇತ್ರಗಳನ್ನೂ ಅವರು ಗುರುತಿದ್ದಾರೆ. id='are-slot-2' class='oiad oi-axt oiadv'>ರಾಷ್ಟ್ರ
ಕಟ್ಟುವ ವಿಚಾರವಾಗಿ ಮಾತನಾಡಿರುವ ಯಡಿಯೂರಪ್ಪ, ಆ ನಿಟ್ಟಿನಲ್ಲಿ ತಮ್ಮ ಗುರಿ ಸಾಧನೆಗೆ ಸೂಕ್ತವೆನಿಸುವ ಪಕ್ಷದೊಂದಿಗೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುತ್ತೇವೆ. ನಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದಾರೆ. ಅದರೊಂದಿಗೆ ಬಿಜೆಪಿ ಜತೆ ಮತ್ತೆ ಕೈಜೋಡಿಸುವ ಪ್ರಯತ್ನಕ್ಕೆ ಬ್ರೇಕ್ ಹಾಕಿದಂತಿದೆ.
ನವೆಂಬರ್- ಡಿಸೆಂಬರಿನಲ್ಲಿ ಸಾರ್ವತ್ರಿಕ ಚುನಾವಣೆ
ನನಗೆ ಬಂದಿರುವ ಮಾಹಿತಿ ಪ್ರಕಾರ ಇದೇ ನವೆಂಬರ್- ಡಿಸೆಂಬರಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೈತ್ರಿ ಪಕ್ಕಾ ಆಗುತ್ತಿದ್ದಂತೆ ಉಳಿದ 18 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಯಡಿಯೂರಪ್ಪ ಕಾರ್ಯಕರ್ತರಿಗೆ ತಿಳಿಸಿದರು. (ಚಿತ್ರ ಕೃಪೆ: ದಿ ಹಿಂದೂ)

ಮೋದಿ-ಏಕತೆ ಮತ್ತು ಬದ್ಧತೆ ತುಂಬಿತುಳುಕುತ್ತಿದೆ
ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಯಡಿಯೂರಪ್ಪ ಅವರು ಆತ ದೂರದೃಷ್ಟಿಯಿರುವ ನಾಯಕ. ಏಕತೆ ಮತ್ತು ಬದ್ಧತೆ ಅವರಲ್ಲಿ ತುಂಬಿತುಳುಕುತ್ತಿದೆ. ಅಂತಹ ನಾಯಕನ್ನು ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಕಟಿಸಿದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಮೋದಿಗೆ ಉಘೇ ಉಘೇ ಅಂದರು.

ಚಿಹ್ನೆಯ ಗೊಂದಲದಿಂದ ಹಿನ್ನಡೆ
ಬೀದರಿನಲ್ಲಿ ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಕೆಜೆಪಿ ಪಕ್ಷವನ್ನು ಸದೃಢಗೊಳಿಸುವ ಮಾತನ್ನಾಡಿರುವ ಯಡಿಯೂರಪ್ಪ 'ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದಕ್ಕಿದ್ದ (ತೆಂಗಿನಕಾಯಿ) ಚಿಹ್ನೆಯ ಗೊಂದಲದಿಂದಾಗಿ ವಿಧಾನಸೌಧ ಮೆಟ್ಟಿಲೇರುವಲ್ಲಿ ಹಿನ್ನಡೆ ಸಾಧಿಸಿದೆವು.

ಒಂದೆರಡಾದರೂ ಸಚಿವ ಸ್ಥಾನ
ಆದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಗಾಗಲು ಬಿಡುವುದಿಲ್ಲ. ಅದಕ್ಕೆ ಈಗಿನಿಂದಲೇ ನಾವು ಕಾರ್ಯಮಗ್ನರಾಗಬೇಕುತ್ತದೆ. ಇದರಿಂದ ಲೋಕಸಭೆಯಲ್ಲಿ ಒಂದೆರಡಾದರೂ ಸಚಿವ ಸ್ಥಾನಗಳನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಖಂಡರನ್ನು ಹುರಿದುಂಬಿಸಿದ್ದಾರೆ. ಅಷ್ಟೇ ಅಲ್ಲದೆ 10 ಕ್ಷೇತ್ರಗಳಲ್ಲಿ ಕೆಜೆಪಿ ಹುರಿಯಾಳುಗಳನ್ನು ನಿಲ್ಲಿಸುವ ಬಗ್ಗೆಯೂ ನಿರ್ಣಯ ತೆಗೆದುಕೊಂಡಿದ್ದಾರೆ.
ವಾರದೊಳಗೆ ಈ ಜಿಲ್ಲೆಗಳ ಪ್ರಮುಖರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಅಭ್ಯರ್ಥಿಯ ಹೆಸರುಗಳನ್ನೂ ಮುಂಚಿತವಾಗಿಯೇ ಪ್ರಕಟಿಸಲಾಗುವುದು.

10 ಲೋಕಸಭಾ ಕ್ಷೇತ್ರಗಳು
ಬೀದರ್, ಗುಲ್ಬರ್ಗ, ಶಿವಮೊಗ್ಗ, ವಿಜಾಪುರ, ತುಮಕೂರು, ಹಾವೇರಿ, ದಾವಣಗೆರೆ, ಚಾಮರಾಜನಗರ ಸೇರಿದಂತೆ 10 ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಲಾಗವುದು. ಇಲ್ಲೆಲ್ಲಾ ಕಳೆದ ಚುನಾವನೆಯಲ್ಲಿ ಕೆಜೆಪಿಗೆ ಎರಡೂವರೆ ಲಕ್ಷಕ್ಕೂ ಅಧಿಕ ಮತ ಬಂದಿದೆ. ಹೀಗಾಗಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications