ಕಾರ್ಪೊರೇಟ್ ಉದ್ಯೋಗಿಗಳಿಗೆ ಉಚಿತ ಆರೋಗ್ಯ ಶಿಬಿರ

Are you suffering from constant back and neck pain?
ಬೆಂಗಳೂರು, ಜು. 15 : ನಿಮಗೆ ಯಾವತ್ತಾದರೂ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿದೆಯೆ? ತಡೆದುಕೊಳ್ಳಲಾರದಷ್ಟು ಬೆನ್ನು ನೋವು ಕಾಡುತ್ತಿದೆಯೆ? ನೀವು 20-30 ವಯಸ್ಸಿನವರಾಗಿದ್ದು ಯಾವತ್ತಾದರೂ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಬೆನ್ನುನೋವು ಅನುಭವಿಸಿದ್ದೀರಾ? ನಿತ್ಯವೂ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಕಾರಣ ನಿಮಗೆ ಆಗಾಗ ಬೆನ್ನುನೋವು ಕಾಣಿಸಿಕೊಳ್ಳುತ್ತಿದೆಯೆ?

ಹೌದು ಎಂದಾದರೆ, ತಕ್ಷಣವೇ ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ನಿಮ್ಮ ನೋವಿಗೆ ಪರಿಹಾರ ಕಂಡುಕೊಳ್ಳಿ. ಡಾ. ಪ್ರಶಾಂತ್ ಎಸ್. ಆಚಾರ್ಯ ಮತ್ತು ಅವರ ತಂಡದವರು ಕಾರ್ಪೊರೇಟ್ ಉದ್ಯೋಗಿಗಳಿಗಾಗಿ ಉಚಿತವಾಗಿ ಸ್ಪೈನ್ ಚೆಕಪ್ ಕ್ಯಾಂಪ್ ನಡೆಸುತ್ತಿದ್ದಾರೆ. ಜುಲೈ 19, 20 ಮತ್ತು 21ರಂದು ಬೆಂಗಳೂರಿನ ಇಂದಿರಾನಗರದಲ್ಲಿ ಈ ಕ್ಯಾಂಪ್ ನಡೆಯಲಿದೆ.

ಡಾ.ಪ್ರಶಾಂತ್ ಎಸ್. ಆಚಾರ್ಯ ಅವರು ಈ ವರೆಗೆ ಸುಮಾರು 1,500 ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಈ ಬಾರಿಯ ಕ್ಯಾಂಪ್‌ನಲ್ಲಿ ಡಾ.ಆಚಾರ್ಯ ಅವರು ದೀರ್ಘಕಾಲದ ಬೆನ್ನುನೋವು, ಸ್ಪಾಂಡಿಲೈಟಿಸ್ ಸೇರಿದಂತೆ ಡಿಸ್ಕ್‌ಗೆ ಸಂಬಂಧಿಸಿದ ತೊಂದರೆಗಳ ಬಗ್ಗೆ ತಪಾಸಣೆ ನಡೆಸಲಿದ್ದಾರೆ ಮತ್ತು ಸೂಕ್ತ ಪರಿಹಾರ ಹೇಳಲಿದ್ದಾರೆ.

ಡಾ.ಪ್ರಶಾಂತ್ ಎಸ್. ಆಚಾರ್ಯ ಪ್ರಕಾರ, ಇತ್ತೀಚೆಗೆ 20-30 ವರ್ಷ ವಯಸ್ಸಿನವರಲ್ಲಿ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಜನರ ಜೀವನಶೈಲಿ ಅದರಲ್ಲೂ ಪ್ರಮುಖವಾಗಿ ಕಾರ್ಪೋರೇಟ್ ಉದ್ಯೋಗಿಗಳ ಕೆಲಸದ ವೈಖರಿಯಿಂದಾಗಿ ಈ ಹೆಚ್ಚಳ ಕಂಡುಬಂದಿದೆ. ಇದು ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಈ ಕ್ಯಾಂಪ್‌ನಿಂದ ಕಾರ್ಪೋರೇಟ್ ಉದ್ಯೋಗಿಗಳು ಬೆನ್ನುನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ಈ ಕ್ಯಾಂಪ್‌ನ ವಿಭಿನ್ನ ಶೈಲಿಯಲ್ಲಿ ನಡೆಸಲು ಪ್ಲಾನ್ ಮಾಡಲಾಗಿದೆ. ಕ್ಯಾಂಪ್‌ಗೆ ಬರಲು ಇಚ್ಚಿಸುವವರು ಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರನ್ನೂ 20 ನಿಮಿಷಗಳಷ್ಟು ಕಾಲ ತಪಾಸಣೆ ಮಾಡಲಾಗುವುದು. ಈ 20 ನಿಮಿಷದಲ್ಲಿ ಬೆನ್ನು, ಕತ್ತು ಮತ್ತು ಭುಜದ ತಪಾಸಣೆ ಮಾಡಲಾಗುವುದು.

ಅಪಾಯಿಂಟ್‌ಮೆಂಟ್‌ಗಾಗಿ ಕರೆಮಾಡಿ ಅರ್ಥ್ ಆಯುರ್ವೇದಿಕ್ ಆಸ್ಪತ್ರೆ, ಇಂದಿರಾನಗರ 080-25288630 ಅಥವಾ 25254654.

ವಿಳಾಸ : ಅರ್ಥ್ ಆಯುರ್ವೇದಿಕ್ ಆಸ್ಪತ್ರೆ, 13ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+