ಮತ್ತೆ ಶುರುವಾಯ್ತ ಮಂಡ್ಯ ಕಾಂಗ್ರೆಸ್ ಸಮರ!

ಆತ್ಮಾನಂದ ಅವರನ್ನು ಜಿಲ್ಲಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸಬಾರದು ಎಂದು ಆಗ್ರಹಿಸಿ, ಭಾನುವಾರ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರ ನಿವಾಸದ ಎದುರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ದೊರೆಯದ ಕಾರಣ ಕೋಪಗೊಂಡಿದ್ದ ಆತ್ಮಾನಂದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಪಕ್ಷದ ಮುಖಂಡರು ಮನವೊಲಿಸಿ ಮುಂದುವರಿಯುವಂತೆ ಮಾಡಿದ್ದರು.
ಆದರೆ, ಚುನಾವಣೆಯಲ್ಲಿ ತಟಸ್ಥವಾಗಿ ಉಳಿದ ಆತ್ಮಾನಂದ ಅವರು, ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಇದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೂ ಕಾರ್ಯಕರ್ತರು ದೂರು ನೀಡಿದ್ದರು.
ಅಂಬರೀಶ್ ಜೊತೆ ಶೀತಲ ಸಮರ : ಆತ್ಮನಾಂದ ಅವರು ಮಂಡ್ಯ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ, ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಕೆಪಿಸಿಸಿ ಟಿಕೆಟ್ ನೀಡಿತು, ಅವರು ಗೆದ್ದು ಬಂದು ಸಚಿವರಾದರು. (ಮಂಡ್ಯ ಜಿಲ್ಲಾ ಚುನಾವಣಾ ಫಲಿತಾಂಶ)
ಈಗ ಪುನಃ ಜಿಲ್ಲಾ ಕಾಂಗ್ರೆಸ್ಅನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಅಂಬರೀಶ್ ಮತ್ತು ಆತ್ಮಾನಂದ ನಡುವೆ ಜಟಾಪಟಿ ಆರಂಭವಾಗಿದೆ. ಜಿಲ್ಲಾಧ್ಯಕ್ಷ ಹುದ್ದೆಯಲ್ಲಿ ಆತ್ಮಾನಂದ ಮುಂದುವರೆಯುವುದು ಅಂಬರೀಶ್ ಬೆಂಗಲಿಗರನ್ನು ಕೆರರಳಿಸಿದೆ.
ಕೆಪಿಸಿಸಿ ವತಿಯಿಂದ ಆತ್ಮಾನಂದ ಅವರಿಗೆ ಪತ್ರ ಬಂದಿದ್ದು, ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಿದೆ. ಇದರಿಂದಾಗಿ ಪುನಃ ವಿವಾದ ಉಂಟಾಗಿದ್ದು, ಅಂಬರೀಶ್ ಮತ್ತು ಆತ್ಮಾನಂದ ನಡುವೆ ಅಸಮಾಧಾನ ಹೆಚ್ಚಾಗಿದೆ. (ಮಂಡ್ಯದಲ್ಲಿ ಕೃಷ್ಣ ಕೃಷ್ಣಾ ಏನಿದು ಬಂಡಾಯ)
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಸಮಾಧಾನ ಬಗೆಹರಿಸಲು ಕೆಪಿಸಿಸಿ ಚುನಾವಣೆಯ ಸಮಯದಿಂದಲೂ ಪ್ರಯತ್ನ ನಡೆಸಿದೆ. ಆದರೆ, ಅದು ಶವನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಲು ಕೆಪಿಸಿಸಿ ಸಿದ್ಧವಾಗುತ್ತಿದೆ.












Click it and Unblock the Notifications