• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು

By Mahesh
|

ತಿರುವನಂತಪುರಂ, ಜು,12: ಕೇರಳದಲ್ಲಿ ಭಾರಿ ಗದ್ದಲ ಎಬ್ಬಿಸಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕುರ್ಚಿಗೆ ಕಂಟಕವಾಗಿರುವ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಗಲಾಟೆ, ದೊಂಬಿ, ಪ್ರತಿಭಟನೆ ಮುಂದುವರೆದಿದೆ. ಜನಪ್ರಿಯ ನಟಿ ಶಾಲು ಮೆನನ್ ಬಂಧನದ ನಂತರ ಇನ್ನಷ್ಟು ನಟಿಯರ ಮೇಲೆ ಪೊಲೀಸರ ಹದ್ದಿನ ಕಣ್ಣು ಬಿದ್ದಿದೆ.

ಸೋಲಾರ್ ಪ್ಯಾನೆಲ್ ಹಗರಣದಲ್ಲಿ ಉಮ್ಮನ್ ಚಾಂಡಿ ಅವರ ಕಾಂಗ್ರೆಸ್ ಸರ್ಕಾರದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾಬಿನೆಟ್ ಸಚಿವರು ಭಾಗಿಯಾಗಿರುವುದು ಪತ್ತೆಯಾಗಿದೆ. ಸಿಎಂ ಉಮ್ಮನ್ ಚಾಂಡಿ ಪದಚ್ಯುತಿಗೆ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ ಸೇರಿ ವಿಪಕ್ಷಗಳು ಎಡಬಿಡದೆ ಪ್ರತಿಭಟನೆ ನಡೆಸಿವೆ. ಹಿಂಸಾಚಾರದ ನಡುವೆ ಉಮ್ಮನ್ ಚಾಂಡಿ ತಣ್ಣಗೆ ಕುಳಿತ್ತಿದ್ದಾರೆ.

ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಊಮಾನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಪೂರ್ಣ ಕಥೆ ಇಲ್ಲಿದೆ ಓದಿ... ಬಿಜು ರಾಧಾಕೃಷ್ಣನ್, ಸರಿತಾ, ಶಾಲು ಮೆನನ್ ಬಂಧನದ ನಂತರ ಉತ್ತರ ಉನ್ನಿ ಈಗ ಮುಕ್ತಾ ಹೆಸರು ಕೇಳಿ ಬಂದಿದೆ. ಪ್ರಕರಣ ಮುಂದಿನ ಕಥೆ ಇಲ್ಲಿ ನೋಡಿ

ಸರಿತಾ

ಸರಿತಾ

ಮಲೆಯಾಳಂ ಮನೋರಮಾ ವರದಿಯಂತೆ ಸುಮಾರು ಊಮಾನ್ ಚಾಂಡಿ ಸರ್ಕಾರದ ಬಹುತೇಕ ಭ್ರಷ್ಟರು ಸರಿತಾ ಕರೆಗೆ ಕುಣಿದಿದ್ದಾರೆ ಪೊಲೀಸರು ಈವರೆಗೆ 60,000 ಕ್ಕೂ ಅಧಿಕ ಫೋನ್ ಕರೆಯನ್ನು ಪರೀಕ್ಷಿಸಿದ್ದಾರೆ. ಸರಿತಾ ಬಳಿ ಸುಮಾರು 6 ಫೋನ್ ಗಳಿದ್ದು ಅವುಗಳಲ್ಲಿನ ಕರೆಗಳನ್ನು ತನಿಖೆಗೆ ಒಳಪಡಿಸಿದರೆ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುವ ಸಾಧ್ಯತೆಯಿದೆ.

ಬಿಜು-ರಾಧಾಕೃಷ್ಣನ್

ಬಿಜು-ರಾಧಾಕೃಷ್ಣನ್

ಸಾಧಾರಣ ವಂಚನೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ, ಬಿಜು- ಸರಿತಾ ಜೋಡಿಯ ಜಾಲ ವಿಸ್ತರಣೆ ಪರಿಚಯವಾಗುತ್ತಿದ್ದಂತೆ ಸರ್ಕಾರದ ಬುಡಕ್ಕೆ ಬಂದು ಬಿಟ್ಟಿತು.ಸೌರಶಕ್ತಿ ಒದಗಿಸಲು ಹಣ ಪಡೆದು ವಂಚನೆ ಎಂದಷ್ಟೇ ತಿಳಿಯಲಾಗಿತ್ತು. ಈಗ ಇದು ಬೇರೆ ಏನೋ ಪ್ರಕರಣ ಏನನ್ನೋ ಹೊರಟಿದೆ.

ಬಿಜು ತನ್ನ ಮೊದಲ ಪತ್ನಿ ರಷ್ಮಿ ಕೊಲೆಗೈದ ಆರೋಪ ಹೊತ್ತಿದ್ದಾನೆ ಕೂಡಾ. ಸರಿತಾ ಜೊತೆ ಲಿವ್ ಇನ್ ಸಂಬಂಧ ನಡೆಸಿದ್ದಾರೆ.

ಶಾಲು ಮೆನನ್

ಶಾಲು ಮೆನನ್

ಅನಿವಾಸಿ ಕೇರಳಿಗ ಉದ್ಯಮಿ ರಫೀಕ್ ಅಲೆ ಅವರನ್ನು ಬಲೆ ಬೀಳಿಸಿಕೊಳ್ಳಲು ಶಾಲು ಮೆನನ್ ಸಹಾಯ ಪಡೆದ ಕಿಂಗ್ ಪಿನ್ ಬಿಜು ಸುಮಾರು 25 ಲಕ್ಷ ರು ಲೂಟಿದ್ದ ಎನ್ನಲಾಗಿದೆ.ಬಿಜುಗೆ ತನ್ನ ಮೊಬೈಲ್ ಕಾರು ಕೊಟ್ಟು ಎಸ್ಕೇಪ್ ಆಗಲು ಶಾಲು ಸಹಕರಿಸಿದ್ದಾರೆ ಎನ್ನಲಾಗಿದೆ.

ಉತ್ತರ ಉನ್ನಿ

ಉತ್ತರ ಉನ್ನಿ

ರೂಪದರ್ಶಿ ನಟಿ ಉತ್ತರಾ ಉನ್ನಿ ಅವರು ಸೋಲಾರ್ ಸಂಸ್ಥೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ ಹಲವಾರು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಉತ್ತರಾ ಮೇಲೆ ಬಲೆ ಬೀಸಿದ್ದಾರೆ.

ಉತ್ತರಾಗೆ ಕೂಡಾ ಟೀಂ ಸೋಲಾರ್ ನಿಂದ ಭಾರಿ ಹಣ ಸಂದಾಯವಾಗಿದೆ ಎನ್ನಲಾಗಿದೆ.

ಮುಕ್ತಾ

ಮುಕ್ತಾ

ಈ ಪ್ರಕರಣದಲ್ಲಿ ಲೇಟೆಸ್ಟ್ ಎಂಟ್ರಿ. ಬಿಜು ಆಕೆಗೆ ದೊಡ್ಡ ಬ್ಯಾನರ್ ಸಿನಿಮಾ ಆಫರ್ ನೀಡಿದ್ದ. ಕ್ಯಾಲೆಂಡರ್ ಫೋಟೋ ಶೂಟಿಂಗ್ ಗೆ ಆಹ್ವಾನ ನೀಡಿದ್ದ ಎನ್ನಲಾಗಿದೆ. ಅಚ್ಚನುರಂಗಥಾ ವೀಡು (Achanurangatha Veedu) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Solar Scam in indeed burning. Yesterday it was reported that the upcoming actress Uthara Unni is involved with the Team Solar. Now actress Muktha has come up saying that she was cheated by the team Solar kingpin Biju Radhakrishnan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more