ಸೋಲಾರ್ ಹಗರಣ: ಜನಪ್ರಿಯ ನಟಿ ಬಂಧನ

ಸೋಲಾರ್ ಪ್ಯಾನೆಲ್ ಹಂಚಿಕೆ ಹಗರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಅವರ ಜೊತೆಜನಪ್ರಿಯ ಟೆಲಿ ಸೀರಿಯಲ್ ನಟಿ, ನೃತ್ಯಗಾರ್ತಿ ಶಾಲು ಮೆನನ್ ಸಂಪರ್ಕ ಹೊಂದಿರುವ ಆರೋಪ ಹೊರೆಸಲಾಗಿದೆ. ಕೊಟ್ಟಾಯಂ ಸಮೀಪದ ಚಂಗನಚ್ಚೇರಿಯಲ್ಲಿನ ಮನೆಯಲ್ಲಿದ್ದ ಶಾಲು ಅವರನ್ನು ಬಂಧಿಸಿದ ಪೊಲೀಸರು ಚೆಂಗಣ್ಣೂರು ಬಳಿ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎಂದು ಎಡಿಜಿಪಿ ಹೇಮಚಂದ್ರನ್ ಹೇಳಿದ್ದಾರೆ. ಸೋಲಾರ್ ಪ್ಯಾನೆಲ್ ಹಗರಣದಲ್ಲಿ ಊಮಾನ್ ಚಾಂಡಿ ಅವರ ಕಾಂಗ್ರೆಸ್ ಸರ್ಕಾರದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾಬಿನೆಟ್ ಸಚಿವರು ಭಾಗಿಯಾಗಿರುವುದು ಪತ್ತೆಯಾಗಿದೆ. ಸಿಎಂ ಊಮಾನ್ ಚಾಂಡಿ ಪದಚ್ಯುತಿಗೆ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ ಸೇರಿ ವಿಪಕ್ಷಗಳು ಕಾದು ಕುಂತಿವೆ. ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಊಮಾನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ್ದಾರೆ.
ತಿರುವನಂತಪುರ, ಜು.5: ಕೇರಳದಲ್ಲಿ ಭಾರಿ ಗದ್ದಲ ಎಬ್ಬಿಸಿ ಮುಖ್ಯಮಂತ್ರಿ ಊಮನ್ ಚಾಂಡಿ ಕುರ್ಚಿಗೆ ಕಂಟಕವಾಗಿರುವ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರಿಯ ನಟಿ ಶಾಲು ಮೆನನ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ಸೋಲಾರ್ ಪ್ಯಾನೆಲ್ ಹಂಚಿಕೆ ಹಗರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಅವರ ಜೊತೆಜನಪ್ರಿಯ ಟೆಲಿ ಸೀರಿಯಲ್ ನಟಿ, ನೃತ್ಯಗಾರ್ತಿ ಶಾಲು ಮೆನನ್ ಸಂಪರ್ಕ ಹೊಂದಿರುವ ಆರೋಪ ಹೊರೆಸಲಾಗಿದೆ.

ಕೊಟ್ಟಾಯಂ ಸಮೀಪದ ಚಂಗನಚ್ಚೇರಿಯಲ್ಲಿನ ಮನೆಯಲ್ಲಿದ್ದ ಶಾಲು ಅವರನ್ನು ಬಂಧಿಸಿದ ಪೊಲೀಸರು ಚೆಂಗಣ್ಣೂರು ಬಳಿ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎಂದು ಎಡಿಜಿಪಿ ಹೇಮಚಂದ್ರನ್ ಹೇಳಿದ್ದಾರೆ.

ಸೋಲಾರ್ ಪ್ಯಾನೆಲ್ ಹಗರಣದಲ್ಲಿ ಊಮಾನ್ ಚಾಂಡಿ ಅವರ ಕಾಂಗ್ರೆಸ್ ಸರ್ಕಾರದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾಬಿನೆಟ್ ಸಚಿವರು ಭಾಗಿಯಾಗಿರುವುದು ಪತ್ತೆಯಾಗಿದೆ. ಸಿಎಂ ಊಮಾನ್ ಚಾಂಡಿ ಪದಚ್ಯುತಿಗೆ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ ಸೇರಿ ವಿಪಕ್ಷಗಳು ಕಾದು ಕುಂತಿವೆ.

ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಊಮಾನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ್ದಾರೆ.

ಅನಿವಾಸಿ ಕೇರಳಿಗ ಉದ್ಯಮಿ ರಫೀಕ್ ಅಲೆ ಅವರನ್ನು ಬಲೆ ಬೀಳಿಸಿಕೊಳ್ಳಲು ಶಾಲು ಮೆನನ್ ಸಹಾಯ ಪಡೆದ ಕಿಂಗ್ ಪಿನ್ ಬಿಜು ಸುಮಾರು 25 ಲಕ್ಷ ರು ಲೂಟಿದ್ದ ಎನ್ನಲಾಗಿದೆ.

ಮಲೆಯಾಳಂ ಮನೋರಮಾ ವರದಿಯಂತೆ ಸುಮಾರು ಊಮಾನ್ ಚಾಂಡಿ ಸರ್ಕಾರದ ಬಹುತೇಕ ಭ್ರಷ್ಟರು ಸರಿತಾ ಕರೆಗೆ ಕುಣಿದಿದ್ದಾರೆ ಪೊಲೀಸರು ಈವರೆಗೆ 60,000 ಕ್ಕೂ ಅಧಿಕ ಫೋನ್ ಕರೆಯನ್ನು ಪರೀಕ್ಷಿಸಿದ್ದಾರೆ. ಸರಿತಾ ಬಳಿ ಸುಮಾರು 6 ಫೋನ್ ಗಳಿದ್ದು ಅವುಗಳಲ್ಲಿನ ಕರೆಗಳನ್ನು ತನಿಖೆಗೆ ಒಳಪಡಿಸಿದರೆ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುವ ಸಾಧ್ಯತೆಯಿದೆ.

ಸಾಧಾರಣ ವಂಚನೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ, ಬಿಜು- ಸರಿತಾ ಜೋಡಿಯ ಜಾಲ ವಿಸ್ತರಣೆ ಪರಿಚಯವಾಗುತ್ತಿದ್ದಂತೆ ಸರ್ಕಾರದ ಬುಡಕ್ಕೆ ಬಂದು ಬಿಟ್ಟಿತು.ಸೌರಶಕ್ತಿ ಒದಗಿಸಲು ಹಣ ಪಡೆದು ವಂಚನೆ ಎಂದಷ್ಟೇ ತಿಳಿಯಲಾಗಿತ್ತು. ಈಗ ಇದು ಬೇರೆ ಏನೋ ಪ್ರಕರಣ ಏನನ್ನೋ ಹೊರಟಿದೆ.

ಮಾಧ್ಯಮಗಳ ವರದಿ ಪ್ರಕಾರ ಗೃಹ ಸಚಿವ ಟಿ ರಾಧಕೃಷ್ಣನ್ ಸೇರಿಂದರೆ ಚಾಂಡಿ ಸರ್ಕಾರದ ಆರು ಸಚಿವರು ಸರಿತಾ ಜೊತೆ ನಿರಂತರ ಮಾತುಕತೆ ನಡೆಸಿದ್ದಾರೆ. ಇಂಜಿನಿಯರಿಂಗ್ ಕಾಲೇಜ್ ಡ್ರಾಪ್ ಔಟ್ ಸರಿತಾ ತನ್ನ ಮೊದಲ ಪತಿಗೆ ಕೈ ಕೊಟ್ಟ ಮೇಲೆ ಬಿಜು ರಾಧಕೃಷ್ಣನ್ ಜೊತೆ ಸೇರಿ ಚೀಟಿಂಗ್ ವ್ಯವಹಾರ ನಡೆಸಿದ್ದಾಳೆ.

ADBನಿಂದ ಬಹುಕೋಟಿ ಸಾಲ ಕೊಡಿಸುವ ಭರವಸೆ ನೀಡಿ ಕೈ ಎತ್ತಿದ್ದ ಸರಿತಾ-ಬಿಜು 2006ರಲ್ಲಿ ಜೈಲು ದರ್ಶನ ಮಾಡಿದ್ದಾರೆ. ಕೊಲೆ, ಬೆದರಿಕೆ ಸೇರಿದಂತೆ ಡಜನ್ ಗಟ್ಟಲೆ ಕೇಸ್ ಗಳನ್ನು ಹೊತ್ತುಕೊಂಡಿರುವ ಸರಿತಾ-ಬಿಜು ಹಾಗೂ ಚಾಂಡಿ ಸರ್ಕಾರದ ಅಪವಿತ್ರ ಮೈತ್ರಿ ರಹಸ್ಯ ಇನ್ನೂ ಸಂಪೂರ್ಣವಾಗಿ ಬಯಲಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+