ರಾಜಮಂಡ್ರಿ ಬ್ಯಾಂಕ್ ದರೋಡೆ ರಹಸ್ಯ ಬಯಲು

Rajahmundry sensational heist mystery busted
ಹೈದರಾಬಾದ್, ಜು.10: ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ರಾಜಮಂಡ್ರಿ ನಗರ ಬೆಚ್ಚಿ ಬೀಳಿಸಿದ್ದ ದರೋಡೆ ಪ್ರಕರಣದ ಅಪ್ದೇಟ್ ಇಲ್ಲಿದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸುಮಾರು 7.35 ಕೋಟಿ ರು ದೋಚಿರುವ ಕಳ್ಳರು ಒಬ್ಬ ಸಿಬ್ಬಂದಿಯನ್ನು ಹತ್ಯೆಗೈಯ್ದಿದ್ದರು. ಕದ್ದವರು ಯಾರು ಎಂಬ ರಹಸ್ಯ ಕೊನೆಗೂ ಬಗೆ ಹರಿದಿದೆ. ವೈಎಸ್ಆರ್ ಕಾಂಗ್ರೆಸ್ ಮುಖಂಡ ಈ ದರೋಡೆ ಗ್ಯಾಂಗ್ ಲೀಡರ್ ಎಂಬ ಸತ್ಯ ಹೊರ ಬಿದ್ದಿದೆ.

ಆಂಧ್ರಪ್ರದೇಶದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಈ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಮಂದಿ ಜನರ ಗ್ಯಾಂಗ್ ಬಂಧಿಸಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಮುಖಂಡ ಗುಜ್ಜು ಶ್ರೀಧರ್ ರೆಡ್ಡಿ ಈ ಗ್ಯಾಂಗಿನ ಲೀಡರ್ ಆಗಿದ್ದು ಒಟ್ಟಾರೆ 7.31 ಕದ್ದಿದ್ದು ದೃಢಪಟ್ಟಿದೆ.

ಆದರೆ, ಪೊಲೀಸರ್ ಕೈಗೆ ಸದ್ಯಕ್ಕೆ 2.01 ಕೋಟಿ ರು ನಗದು, ಚಿನ್ನಾಭರಣ ಹಾಗೂ ಕೆಲವು ವಾಹನಗಳು ಮಾತ್ರ ಸಿಕ್ಕಿದೆ. ಶ್ರೀಧರ್ ರೆಡ್ಡಿ ಲೆಕ್ಕವಿಲ್ಲದ್ದಷ್ಟು ಹಣವನ್ನು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮೇಲೆ ಸುರಿದಿದ್ದಾನೆ ಎನ್ನಲಾಗಿದೆ. [ಚಾಲಾಕಿ ಕಳ್ಳತನ ಕಥೆ ಇಲ್ಲಿ ಓದಿ]

ಎಸ್ ಬಿಐ ನೇಮಕದಂತೆ Scientific Security Management Services Limited (SSMSL) ಸೆಕ್ಯುರಿಟಿ ಸಿಬ್ಬಂದಿಗಳು ಎಸ್ ಬಿಐನಿಂದ ಹಣ ಪಡೆದು ನಗರದ ವಿವಿಧ ಭಾಗಗಳಲ್ಲಿರುವ 20ಕ್ಕೂ ಅಧಿಕ ಎಟಿಎಂಗಳಿಗೆ ತುಂಬುತ್ತಿದ್ದರು. ಅದರಂತೆ, ಬ್ಯಾಂಕಿನಿಂದ ಹಣ ಪಡೆದು ಆರ್ ವಿ ನಗರದ ಮನೆಯಲ್ಲಿ ಇರಿಸಿದ್ದರು. ಇದು ಶ್ರೀಧರ್ ರೆಡ್ಡಿ ಗ್ಯಾಂಗ್ ಪಾಲಾಗಿತ್ತು.

ಪೊಲೀಸರ ಪ್ರಕಾರ ಈ ದರೋಡೆ ಸಂದರ್ಭದಲ್ಲಿ ಮೃತಪಟ್ಟ 29 ವರ್ಷದ SSMSL ಸಿಬ್ಬಂದಿ ಪೌರಾಜು ಶ್ರೀನಿವಾಸ್ ಹಾಗೂ ಗುಜ್ಜು ಪ್ರಸಾದ್ ರೆಡ್ಡಿ ಎಂಬುವರು ಶ್ರೀಧರ್ ರೆಡ್ಡಿಗೆ ಸಹಾಯ ಮಾಡಿದ್ದಾರೆ.ರಾಜಮಂಡ್ರಿ ಹಾಗೂ ಕಾಕಿನಾಡ ವ್ಯಾಪ್ತಿಯಲ್ಲಿ ಎಸ್ ಇಬಿಎಂ ಎಟಿಎಂ ಹಣ ಕಳುವು ಮಾಡಿ ಶ್ರೀಧರ್ ರೆಡ್ಡಿ ಜೋಳಿಗೆ ತುಂಬಿಸಲಾಗುತ್ತಿತ್ತು.

ಶರ್ಮಿಳಾ ಯಾತ್ರೆಗೆ ಬಳಕೆ: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರಿ ಶರ್ಮಿಳಾ ಅವರ ಪಾದಯಾತ್ರೆಗೆ ಈ ಕದ್ದ ಹಣ ಬಳಕೆಯಾಗಿರುವುದನ್ನು ಎಸ್ಪಿ ಟಿ. ರವಿಕುಮಾರ್ ದೃಢಪಡಿಸಿದ್ದಾರೆ.

ಜೂ.23ರಂದು SSMSL ಸಿಬ್ಬಂದಿ ಪೌರಾಜು ಶ್ರೀನಿವಾಸ್ ಬಳಿ ಹಣಕ್ಕಾಗಿ ಶ್ರೀಧರ್ ರೆಡ್ಡಿ ಬೇಡಿಕೆ ಇಟ್ಟಿದ್ದಾನೆ. ಆಯ್ತು ನೋಡೋಣ ಎಂದು ಹೇಳಿದ ಶ್ರೀನಿವಾಸ್ ರಾಜು ಎಟಿಎಂ ಹಣದ ಪೆಟ್ಟಿಗೆ ಇಟ್ಟಿರುವ ಮನೆ ವಿವರ ನೀಡಿದ್ದಾನೆ. ಆದರೆ, ಹರಕು ಬಾಯಿ ಶ್ರೀನಿವಾಸ್ ರಾಜು ಕಳ್ಳತನ ಬಗ್ಗೆ ಇತರರಿಗೆ ಎಂದಾದರೂ ತಿಳಿಸಿಬಿಡುತ್ತಾನೆ ಎಂದು ಶ್ರೀಧರ್ ರೆಡ್ಡಿಗೆ ಮೊದಲಿನಿಂದಲೂ ಶಂಕೆ ಉಂಟಾಗಿದೆ. ಹೀಗಾಗಿ ಪೌರಾಜು ಕೊಲೆಗೆ ಸಂಚು ರೂಪಿಸಿದ್ದಾನೆ.

ಕೋಲ್ಕತ್ತಾದಿಂದ ಪಿಸ್ತೂಲ್ ಹಾಗೂ ಮ್ಯಾಗಜೀನ್ ಗಳನ್ನು ಖರೀದಿಸಿ ಶ್ರೀರಾಪು ಶ್ರೀನು, ಕಡಾಲಿ ವೀರ ವೆಂಕಟೇಶ್ವರ ರಾವ್ ಹಾಗು ಗುಜ್ಜು ಕುರ್ಮಾ ರೆಡ್ಡಿ ಜೊತೆಗೂಡಿ ಪೌರಾಜು ಶ್ರೀನಿವಾಸ್ ಇದ್ದ ಕಡೆ ಬಂದಿದ್ದಾರೆ. ಮೊದಲಿಗೆ ರೇಜರ್ ಬಳಸಿ ಶ್ರೀನಿವಾಸ್ ತಾನೇ ದೇಹವನ್ನು ಕೊಯ್ದುಕೊಂಡಂತೆ ಕೊಯ್ದಿದ್ದಾರೆ. ರಕ್ತಸ್ರಾವದಿಂದ ಬಳಲುತ್ತಿದ್ದ ಶ್ರೀನಿವಾಸ್ ನನ್ನು ನಂತರ ನೇಣಿಗಾಗಿದ್ದಾರೆ.

ಚೋರನ ಪ್ಯಾರ್ ಕಹಾನಿ : 58ಲಕ್ಷ ರು ಮೊದಲ ಪೆಟ್ಟಿಗೆಯಿಂದ ಎತ್ತಿಕೊಂಡು ಕೋಲ್ಕತ್ತಾ, ನವದೆಹಲಿ, ದಾರ್ಜಲಿಂಗ್ ಹಾಗೂ ಬ್ಯಾಂಕಾಕ್ ತನಕ ಈ ತಂಡ ಸುತ್ತಾಟ ನಡೆಸಿದೆ. ಈ ನಡುವೆ ಗ್ಯಾಂಗ್ ಲೀಡರ್ ಶ್ರೀಧರ ರೆಡ್ಡಿಗೆ ಕ್ಯಾಬರೇ ನೃತ್ಯಗಾರ್ತಿ ಜಸ್ವಿಂಧರ್ ಕೌರ್ ಮೇಲೆ ಮನಸ್ಸಾಗಿದೆ. ಇಬ್ಬರಿಗೂ ಪ್ಯಾರ್ ಆಗಿದೆ. ಪೆಲ್ಲಿ ಚೇಸು ಕುಂದಾಂ ರಾ.. ಎಂದಿದ್ದಾನೆ.. ಕೌರ್ ಓಕೆ ಎಂದಿದ್ದಾಳೆ. ಆದರೆ, ಅವಳ ಹೀರೋ ಶ್ರೀಧರ್ ರೆಡ್ಡಿ 'ಶಾದಿ' ಗೆ ಮೊದಲು 'ಮಾವ'ನ ಮನೆ ಸೇರಿಬಿಟ್ಟಿದ್ದಾನೆ

ಈ ಗ್ಯಾಂಗ್ ನ ಇತರೆ ಸದಸ್ಯರಾದ ದವರ್ ಸಿಂಗ್ ಲಕ್ಷ್ಮಣ್ ಕುಮಾರ್, ಕುರುಮೆಲ್ಲಾ ರಾಜೇಶ್, ನಂದಿಕಾ ಜಗದೀಶ್ ಕುಮಾರ್, ದಾಸರಿ ಸತ್ಯನಾರಾಯಣ ಮೂರ್ತಿ, ಪಿಲಾಕಾ ದಿಲಿಪ್ ರೆಡ್ಡಿ, ಬಾಥುಲಾ ಹೇಮ ನಾಗರಾಜು, ಗುಜ್ಜು ಪ್ರಸಾದ್ ರೆಡ್ಡಿ ಈಗ ಕಂಬಿ ಎಣಿಸುತ್ತಿದ್ದಾರೆ.

74.71 ಲಕ್ಷ ರು ನಗದು, 15.82 ಲಕ್ಷ ರು ಮೌಲ್ಯದ 633 ಗ್ರಾಂ ಚಿನ್ನಾಭರಣ, 3 ಕಾರು, 9 ಬೈಕು ಮೌಲ್ಯ ಸುಮಾರು 15.32 ಲಕ್ಷ, ಭೂಮಿ ಖರೀದಿ ದಾಖಲೆ 95.76 ಲಕ್ಷ ಪೊಲೀಸರಿಗೆ ಇಷ್ಟು ಲೆಕ್ಕ ಸಿಕ್ಕಿದೆ ಮಿಕ್ಕ ಹಣ ಎಲ್ಲಿ ಖರ್ಚಾಯಿತು ಇನ್ನೂ ರೆಡ್ಡಿ ಬಾಯ್ಬಿಟ್ಟಿಲ್ಲ.

ಇವ ನಮ್ಮವನಲ್ಲ: ಶ್ರೀಧರ ರೆಡ್ಡಿ ಬಂಢನದ ಸುದ್ದಿ ತಿಳಿದ ಮೇಲೆ ಪ್ರತಿಕ್ರಿಯಿಸಿರುವ ಮಾಜಿ ಎಂಎಲ್ ಎ ವೈಎಸ್ ಆರ್ ಜಗನ್ ಮೋಹನ್ ರೆಡ್ಡಿ ಆಪ್ತ ದ್ವಾರಮ್ ಪುಡಿ ಚಂದ್ರಶೇಖರ್ ರೆಡ್ಡಿ, ಶ್ರೀಧರ್ ರೆಡ್ಡಿ ನಾಲ್ಕು ತಿಂಗಳ ಹಿಂದೆ ನಮ್ಮ ಪಕ್ಷ ಸೇರಿದ್ದು ನಿಜ ಆದರೆ, ಆತ ಬರೀ ಕಾರ್ಯಕರ್ತನಾಗಿದ್ದ. ನಮಗೆ ಅವನ ಪೂರ್ವಾಪರ ತಿಳಿದಿಲ್ಲ. ಅವನಿಂದ ಹಣ ಪಡೆದು ಯಾತ್ರೆ ನಡೆಸಿಲ್ಲ. ಆತನ ಕೆಲವು ಬೆಂಬಲಿಗರು ಕಾರ್ಪೊರೇಟ್ ಎಲೆಕ್ಷನ್ ನಲ್ಲಿ ರೆಡ್ಡಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದರು ಅಷ್ಟೇ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+