ರಾಜಮಂಡ್ರಿ ಭರ್ಜರಿ ಬ್ಯಾಂಕ್ ದರೋಡೆ ರಹಸ್ಯ

ಬ್ಯಾಂಕಿಗೆ ಸೇರಿದ ಈ ಭಾರಿ ಮೊತ್ತದ ಹಣವನ್ನು ಆರ್ ವಿ ನಗರದಲ್ಲಿರುವ ರಾಜಮಂಡ್ರ್ರಿ ಸೆಂಟ್ರಲ್ ಜೈಲಿನ ಹತ್ತಿರವೇ ಇರುವ ಮನೆಯೊಂದರಲ್ಲಿ ಇರಿಸಲಾಗಿತ್ತು. ಮನೆಗೆ ಸೆಕ್ಯುರಿಟಿ ಏಜೆನ್ಸಿ ಸಿಬ್ಬಂದಿಗಳ ಕಾವಲಿತ್ತು. ಆದರೆ, ಕಳ್ಳರು ಎಲ್ಲರನ್ನು ಯಾಮಾರಿಸಿ ಹಣ ಕೊಳ್ಳೆ ಹೊಡೆದು ಪರಾರಿಯಾಗಿದ್ದಾರೆ ಎಂಬುದು ಇನ್ನೂ ವಿಶೇಷ.
ಎಸ್ ಬಿಐ ನೇಮಕದಂತೆ Scientific Security Management Services Limited(SSMSL) ಸೆಕ್ಯುರಿಟಿ ಸಿಬ್ಬಂದಿಗಳು ಎಸ್ ಬಿಐನಿಂದ ಹಣ ಪಡೆದು ನಗರದ ವಿವಿಧ ಭಾಗಗಳಲ್ಲಿರುವ 20ಕ್ಕೂ ಅಧಿಕ ಎಟಿಎಂಗಳಿಗೆ ತುಂಬುತ್ತಿದ್ದರು. ಅದರಂತೆ, ಬ್ಯಾಂಕಿನಿಂದ ಹಣ ಪಡೆದು ಆರ್ ವಿ ನಗರದ ಮನೆಯಲ್ಲಿ ಇರಿಸಿದ್ದರು. ಇದು ಈಗ ಕಳ್ಳರ ಪಾಲಾಗಿದೆ.
ಚಾಲಾಕಿ ಕಳ್ಳರು: ಟಾಟಾ ಸೆಕ್ಯುರಿಟೀಸ್ ನಿಂದ ಗುತ್ತಿಗೆ ಪಡೆದಿದ್ದ SSMSL ಸಿಬ್ಬಂದಿಗಳಲ್ಲಿ ಒಬ್ಬರಾದ ಶ್ರೀಮನ್ನಾರಾಯಣ ಅವರು ಕಚೇರಿ ಬಾಗಿಲು ತೆಗೆದು ನೋಡಿದಾಗ ಇನ್ನೊಬ್ಬ ಸಿಬ್ಬಂದಿ ಪೌರಾಜು ಶ್ರೀನಿವಾಸ್(29) ಅವರ ಶವ ಸೀಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಾಣಿಸಬೇಕು. ಕಳ್ಳತನ, ಕೊಲೆ ಪ್ರಕರಣ ಬಗ್ಗೆ ತಕ್ಷಣಕ್ಕೆ ತಿಳಿಯಬಾರದು ಎಂಬುದು ಕಳ್ಳರ ಉದ್ದೇಶವಾಗಿತ್ತು.
ಅದರಂತೆ, ಶ್ರೀಮನ್ನಾರಾಯಣ ಅವರು ಶ್ರೀನಿವಾಸ್ ಸಾವಿನ ಬಗ್ಗೆ ತಲೆಕೆಡಿಸಿಕೊಂಡಿದ್ದರಿಂದ ತಕ್ಷಣಕ್ಕೆ ಲಾಕರ್ ಗಳು ಬರಿದಾಗಿರುವುದು, ಹಣ ಇಟ್ಟಿದ್ದ ದೊಡ್ಡ ಪೆಟ್ಟಿಗೆಗಳು ಮಾಯವಾಗಿರುವುದು ಕಂಡು ಬಂದಿಲ್ಲ. ನಂತರ ಕಳ್ಳತನದ ಬಗ್ಗೆ ಅರಿವಾದಾಗ ಹೌಹಾರಿ ಪ್ರಕರಣದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಎಸ್ಪಿ ಟಿ ರವಿಕುಮಾರ್ ಮೂರ್ತಿ ಹೇಳಿದ್ದಾರೆ.
ನಂತರ ಘಟನಾ ಸ್ಥಳಕ್ಕೆ ಶ್ವಾನದಳದೊಂದಿಗೆ ಬಂದ ಪೊಲೀಸ್ ಸಿಬ್ಬಂದಿಗಳಿಗೆ ಶಾಕ್ ಆಗಿದೆ. ಶ್ರೀನಿವಾಸ್ ರನ್ನು ಯಾರೋ ಹರಿತವಾದ ಆಯುಧದಿಂದ ಕುತ್ತಿಗೆ ಸೀಳಿ ಕೊಂದಿರುವುದು ದೃಢಪಟ್ಟಿದೆ. ಚಾಲಾಕಿ ಕಳ್ಳರು ಸಿಸಿಟಿವಿ ಕೆಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಎಲ್ಲೆಡೆ ಮೆಣಸಿನ ಪುಡಿ ಘಾಟು ಎಬ್ಬಿಸಿದ್ದಾರೆ. ಶ್ವಾನದಳಕ್ಕೂ ಸುಳಿವು ಸಿಗದಂತೆ ಮಾಡಿದ್ದಾರೆ. ಕಚೇರಿ ಹೊಕ್ಕ ಪೊಲೀಸ್ ನಾಯಿಗಳು ಶೀನಿಗೊಂಡು ಹೊರಗೊಡುವಂತೆ ಮಾಡಲಾಗಿದೆ.
ಸದ್ಯಕ್ಕೆ ಡಿಎಸ್ ಪಿ ಅನಿಲ್ ಕುಮಾರ್ ನೇತೃತ್ವದ ತಂಡಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ಶ್ರೀನಿವಾಸ್ ಶವಪರೀಕ್ಷೆ ಮಾಡಲು ಕಳಿಸಿ ವರದಿಗಾಗಿ ಕಾಯುತ್ತಿದ್ದಾರೆ.
ಹಣವನ್ನು ಮನೆಯಲ್ಲಿ ತಂದಿರಿಸಿದ್ದ SSMSL ಸಿಬ್ಬಂದಿಯನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮೊದಲೇ ಪೊಲೀಸರಿಗೆ ಏಕೆ ತಿಳಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಎಸ್ ಬಿಐ ಮುಖ್ಯ ಮ್ಯಾನೇಜರ್ ಕೆ ಚಿಟ್ಟಿಬಾಬು ಅವರು ಸೆಕ್ಯುರಿಟಿ ಏಜೆನ್ಸಿ ಕರ್ತವ್ಯ ಲೋಪದಿಂದ ಹಣ ಕಳ್ಳತನವಾಗಿದೆ ಎಂದು ದೂರಿದ್ದಾರೆ.
ಸೆಕ್ಯುರಿಟಿ ಏಜೆನ್ಸಿ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿಗಳ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಬ್ಯಾಂಕಿನಲ್ಲಿ ಹಣ ಇಟ್ಟರೆ ಸೇಫ್ ಎಂದು ನಂಬಿದ್ದ ಗ್ರಾಹಕರು ಈಗ ತಲೆ ಮೇಲೆ ಕೈಹೊತ್ತುಕೊಂಡು ಕೂತಿದ್ದಾರೆ. ಎಸ್ ಬಿಐ ಕಳೆದುಕೊಂಡಿದ್ದು 7 ಕೋಟಿ ರು ಗಿಂತ ಇನ್ನೂ ಹೆಚ್ಚಿನ ಮೊತ್ತ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.











Click it and Unblock the Notifications