ಚಿತ್ರಗಳಲ್ಲಿ: ಮಳೆಬಿದ್ದರೂ ಬವಣೆ ತಪ್ಪಿದ್ದಲ್ಲ
ಬೆಂಗಳೂರು, ಜು.8: ಉತ್ತರ ಭಾರತದಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಎಲ್ಲೆಡೆ ತನ್ನ ಪ್ರಭಾವ ಬೀರಿದೆ. ಗಂಗೆ, ಯುಮುನೆಯರ ಪ್ರವಾಹದೊಡನೆ ರೈತರಿಗೆ, ಸಾರ್ವಜನಿಕರಿಗೆ ನಿತ್ಯ ಜೀವನ ಜಂಜಾಟ ಮುಂದುವರೆದಿದೆ.
ಉತ್ತರ ಪ್ರದೇಶ ರಾಜ್ಯದ ಮೊರಾದಾಬಾದಿನಲ್ಲಿ ರೈತ ಕುಟುಂಬವೊಂದು ಮರದ ತುಂಡಿನ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಭತ್ತದ ಗದ್ದೆ ಅಣಿ ಮಾಡುವ ದೃಶ್ಯ ಗಮನ ಸೆಳೆದಿದೆ.
ಅಸ್ಸಾಂನಲ್ಲಿ ರೈತರ ಚಟುವಟಿಕೆ ಜೋರಾಗಿದೆ. ಶಿಮ್ಲಾದಲ್ಲಿ ಮಳೆ ಚಳಿ ಹಿತವಾಗಿದೆ. ಬ್ರಹ್ಮಾಪುತ್ರ ನದಿ ಪ್ರವಾಹವೂ ತಗ್ಗಿದ್ದು ಸಂಚಾರ ಸುಗಮವಾಗಿದೆ. ಮುಂಬೈ ಮಳೆಯನ್ನು ಜನ ಎಂದಿನಂತೆ ಖುಷಿಯಿಂದ ಸ್ವಾಗತಿಸಿದ್ದಾರೆ.
ರೈತ ಹಾಗೂ ಮಳೆ ಚಿತ್ರಗಳ ನಂತರ ಅಮರನಾಥ ಯಾತ್ರೆ ಚಿತ್ರಗಳು, ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆ ಚಿತ್ರಗಳು ಇಂದಿನ ಚಿತ್ರ ಸುರಳಿಯಲ್ಲಿದೆ ತಪ್ಪದೇ ನೋಡಿ

ರೈತರ ಚಟುವಟಿಕೆ ಶುರು
ಉತ್ತರ ಪ್ರದೇಶ ರಾಜ್ಯದ ಮೊರಾದಾಬಾದಿನಲ್ಲಿ ರೈತ ಕುಟುಂಬವೊಂದು ಮರದ ತುಂಡಿನ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಭತ್ತದ ಗದ್ದೆ ಅಣಿ ಮಾಡುವ ದೃಶ್ಯ

ರೈತರ ಚಟುವಟಿಕೆ ಶುರು
ಅಸ್ಸಾಂನಲ್ಲಿ ರೈತರ ಚಟುವಟಿಕೆ ಜೋರಾಗಿದೆ

ಪಶ್ಚಿಮ ಬಂಗಾಳ ಕಂಬಳ
ಪಶ್ಚಿಮ ಬಂಗಾಳದ 24 ಪರಗಾಣ ಜಿಲ್ಲೆಗಳಲ್ಲಿ ಕಂಬಳ

ಮುಂಬೈನ ಮಳೆ
ಮುಂಬೈ: ಮಳೆಯಲ್ಲಿ ಜೊತೆಯಲಿ ಸಾಗುತ್ತಿರುವ ಯುವಜೋಡಿ

ಶಿಮ್ಲಾದ ಸಂಜೆ
ಕಳೆದ ಸಂಜೆ ಶಿಮ್ಲಾದಲ್ಲಿ ಕಾಣಿಸಿದ ದೃಶ್ಯ












Click it and Unblock the Notifications