ಕೃಷ್ಣ ಅಳಿಯನ ಅಕ್ರಮ ಆಸ್ತಿ ವಿರುದ್ಧ ಹಿರೇಮಠ್ ಗುಡುಗು
ಚಿಕ್ಕಮಗಳೂರು,
ಜುಲೈ 8: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ಸಿನ ಎಸ್ ಎಂ ಕೃಷ್ಣ ಅವರ ಅಳಿಯ ವಿ ಜಿ ಸಿದ್ದಾರ್ಥ್ (ಹೆಗ್ಡೆ) ಅವರು ತಮ್ಮ ಮಾವನ ಹೆಸರು ಹೇಳಿಕೊಂಡು ಅಪಾರವಾದ ಅಕ್ರಮ ಆಸ್ತಿ ಮಾಡಿದ್ದಾರೆ. ಸಾಲಗಾರರಾಗಿದ್ದ ಸಿದ್ದಾರ್ಥ್ ಇಂದು ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್ಆರ್ ಹಿರೇಮಠ್ ಅವರು ಆಗ್ರಹಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಇದಲ್ಲದೆ
ರಾಜ್ಯದಲ್ಲಿ ಒಟ್ಟು 1600 ಭೂ ಒತ್ತುವರಿ ಪ್ರಕರಣಗಳಿವೆ. 1,95,000 ಕೋಟಿ ರೂ. ಅಕ್ರಮ ಇದಾಗಿದೆ. ಈಗ ಅಧಿಕಾರಕ್ಕೆ ಬಂದಿರುವ ಹೊಸ ಸರಕಾರ, ಪಕ್ಷಭೇದ ಬಿಟ್ಟು ಇವುಗಳ ತನಿಖೆಗೆ ಮುಂದಾಗಲಿ. ಅದಕ್ಕೆ ಅಗತ್ಯವಿರುವ ದಾಖಲೆಗಳನ್ನು ನಾವು ಒದಗಿಸುತ್ತೇವೆ ಎಂದು ಅವರು ಹಿರೇಮಠ್ ತಿಳಿಸಿದ್ದಾರೆ. id='are-slot-2' class='oiad oi-axt oiadv'>ಭಾರಿ

ಹಾಸನದಲ್ಲಿ ರೇವಣ್ಣ ಭೂದಾಹ:
ಭೂ ಕಬಳಿಕೆಯಲ್ಲಿ ಎಲ್ಲ ಪಕ್ಷದ ಕೆಲ ಮುಖಂಡರ ಪಾಲಿದೆ. ಜೆಡಿಎಸ್‌ನ ರೇವಣ್ಣ ಅವರು ಸಾಕಷ್ಟು ಬಾನಗಡಿಗಳನ್ನು ಹಾಸನದಲ್ಲಿ ಮಾಡಿದ್ದಾರೆ. ಮಾಜಿ ಸಭಾಧ್ಯಕ್ಷ, ಕಾಂಗ್ರೆಸ್‌ನ ರಮೇಶ ಕುಮಾರ್ ಅವರು 60 ಎಕರೆ ಅರಣ್ಯ ಭೂಮಿಯನ್ನು ಕೋಲಾರದಲ್ಲಿ ಕಬಳಿಸಿದ್ದಾರೆ. ಈ ಜಿಲ್ಲೆಯ ಶಾಸಕ ಜೀವರಾಜ್ ವಿರುದ್ಧವೂ ಆರೋಪಗಳಿವೆ.

DC ರಾಮಾಂಜನೇಯ 424 ಪ್ರಕರಣಗಳಲ್ಲಿ ಭಾಗಿ
ರಾಜಕಾರಣಿಗಳಂತೆ ಅಷ್ಟೇ ಅಧಿಕಾರಿಗಳೂ ಇದ್ದಾರೆ. ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಾಮಾಂಜನೇಯ ಅವರು 424 ಪ್ರಕರಣಗಳಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಎಕರೆ ಜಮೀನು ಅಕ್ರಮ ವ್ಯವಹಾರದಲ್ಲಿ ಸಹಕರಿಸಿದ್ದಾರೆ ಎಂದು ದೂರಿದರು. ಇವರೊಂದಿಗೆ ಭೂ ಕಬಳಿಕೆಯಲ್ಲಿ ಬಂಡವಾಳ ಶಾಹಿಗಳ ಪಾಲೂ ಇದೆ.

Bagmane Tech Park
ಸಿದ್ದಾರ್ಥ್ ಹೆಗಡೆ ಅವರು ಕೃಷ್ಣ ಅವರ ಪುತ್ರಿ ಮಾಳವಿಕಾರ ಪತಿ. ಸಿದ್ದಾರ್ಥ್ ಬೆಂಗಳೂರಿನ ಭೈರಸಂದ್ರದಲ್ಲಿ 6.5 ಎಕರೆ ಕೆರೆ ಒತ್ತುವರಿ ಮಾಡಿದ್ದಾರೆ. ಇಲ್ಲಿ Bagmane Tech Park ನಿರ್ಮಿಸಿದ ಸಿದ್ದಾರ್ಥ್ ಅದನ್ನೆಲ್ಲಾ ಎಂಎನ್ ಸಿ ಕಂಪನಿಗಳಿಗೆ ಮಾರಾಟ ಮಾಡಿದ್ದಾರೆ. ಈ ಅಕ್ರಮ ಕಟ್ಟಡದ ಚಿತ್ರವು ಐಎಎಸ್ ಅಧಿಕಾರಿ ವಿ ಬಾಲಸುಬ್ರಮಣ್ಯಯನ್ ಅವರು ಸಲ್ಲಿಸಿದ Greed and Connivance ವರದಿಯ ಮುಖಪಟದಲ್ಲಿ ರಾರಾಜಿಸಿದೆ.

ಅತ್ಯಂತ ಶ್ರೀಮಂತರ ಸಾಲಿನಲ್ಲಿ ಸಿದ್ದಾರ್ಥ್ ಹೆಗಡೆ
ಎಸ್‌ಎಂ ಕೃಷ್ಣ ಮುಖ್ಯಮಂತ್ರಿ ಆಗುವ ಮುನ್ನ ಅವರ ಅಳಿಯ ಸಿದ್ದಾರ್ಥ್ ಹೆಗಡೆ 60-70 ಲಕ್ಷ ರೂ ಸಾಲಗಾರರಾಗಿದ್ದರು. ಕೃಷ್ಣ ಮುಖ್ಯಮಂತ್ರಿ ಆದ ಕೆಲವೇ ವರ್ಷಗಳಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತರ ಸಾಲಿನಲ್ಲಿ ಅವರ ಹೆಸರು ಸೇರ್ಪಡೆಯಾಯಿತು. ಈಗ ಸಿದ್ದಾರ್ಥ್ ಒಡೆತನದ ಕಾಫಿ ಡೇ ವಿಶ್ವದ 16ಕ್ಕೂ ಹೆಚ್ಚು ದೇಶಗಳಲ್ಲಿವೆ.

ಕೃಷ್ಣ ಅವರ ಪಾತ್ರವೂ ಇದೆ
ಚಿಕ್ಕಮಗಳೂರು ನಗರದಲ್ಲಿ ಅವರು ಐಷಾರಾಮಿ ಸ್ಟಾರ್ ಹೋಟೆಲ್ ಹಾಗೂ ನೂರಾರು ಎಕರೆ ಕಾಫಿ ತೋಟ ಹೊಂದಿದ್ದಾರೆ. ಈ ಆಸ್ತಿಗಳಿಕೆ ಹಿಂದೆ ಕೃಷ್ಣ ಅವರ ಪಾತ್ರವೂ ಇದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.












Click it and Unblock the Notifications