ಟ್ವಿಟ್ಟರ್: ಮೋದಿ ಸಚಿನ್ ಆದ್ರೆ, ತರೂರ್ ದ್ರಾವಿಡ್ ಥರ
ಬೆಂಗಳೂರು, ಜು.4: ಸಾಮಾಜಿಕ ಜಾಲ ತಾಣಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ರಾಜಕಾರಣಿಗಳ ಪೈಕಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಗ್ರಗಣ್ಯರಾಗಿದ್ದು, ಸುಮಾರು 18,28,095(ಬದಲಾವಣೆಗೆ ಒಳಪಟ್ಟಿದೆ) ಹಿಂಬಾಲಕರನ್ನು ಹೊಂದಿದ್ದಾರೆ. ಈ ಮೂಲಕ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಎನಿಸಿದ್ದಾರೆ.
ಆದರೆ, ಸಾಮಾಜಿಕ ಜಾಲ ತಾಣ, ಮೈಕ್ರೊ ಬ್ಲಾಗಿಂಗ್ ಸೈಟ್ ಗಳಲ್ಲಿ ನರೇಂದ್ರ ಮೋದಿ ಜನಪ್ರಿಯತೆಗೆ ಸೆಡ್ಡು ಹೊಡೆಯಲು ಕೇಂದ್ರದ ಸಚಿವ ಶಶಿ ತರೂರ್ ಕೂಡಾ ಸಜ್ಜಾಗಿದ್ದಾರೆ. ಶಶಿ ತರೂರ್ ಗೆ ಸುಮಾರು 18,21,915 ಹಿಂಬಾಲಕರಿದ್ದಾರೆ.
ಇವರಿಬ್ಬರನ್ನು ಬಿಟ್ಟರೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಜನಪ್ರಿಯತೆ ಟ್ವಿಟ್ಟರ್ ನಲ್ಲಿ ಹೆಚ್ಚಾಗುತ್ತಲೇ ಇದೆ. ಸುಷ್ಮಾ ಅವರಿಗೆ 5,23,552 ಹಿಂಬಾಲಕರಿದ್ದಾರೆ. ಕಾಂಗ್ರೆಸ್ ನ ಜನಪ್ರಿಯ ಧುರೀಣ, ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ 54,977 ಹಿಂಬಾಲಕರಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ ಅವರು 4,12,470 ಹಿಂಬಾಲಕರಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಸೈಬರ್ ವಾರ್ ನಡೆಸುತ್ತಿರುವುದು ಗುಟ್ಟಾದ ವಿಷಯವೇನಲ್ಲ. ಸೈಬರ್ ವಾರ್ ನಲ್ಲಿ ಶಶಿ ತರೂರ್ ಅವರು ಕಾಂಗ್ರೆಸ್ ಪಡೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ತ್ವರಿತವಾಗಿ ಮತದಾರರನ್ನು ಮುಟ್ಟುತ್ತದೆ ಎಂಬುದು ಸುಳ್ಳಲ್ಲ.
ಆದರೆ, 2009ರಲ್ಲಿ 'cattle class, ''holy cows' ಎಂದು ಟ್ವೀಟ್ ಮಾಡಿದ್ದ ಶಶಿ ಹಲವರ ವಿರೋಧದ ನಡುವೆಯೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಕಾಲಕಾಲಕ್ಕೆ ಟ್ವೀಟ್ ಮಾಡುತ್ತಾ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದಾರೆ. ಪ್ರಮುಖ ನಾಯಕರ ಇತ್ತೀಚಿನ ಟ್ವೀಟ್ ಗಳು ನಿಮಗಾಗಿ ಇಲ್ಲಿದೆ.

ಮೋದಿ ಜನಪ್ರಿಯತೆ
ಮೋದಿ ಜನಪ್ರಿಯತೆ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ವಿರುದ್ಧ ದಿಕ್ಕಿನಿಂದ ಯತ್ನಿಸುತ್ತಿದ್ದು, ಶಶಿ ತರೂರ್, ದೀಪೇಂದ್ರ ಹೂಡಾ, ಅಜಯ್ ಮಾಕೇನ್ ಮುಂತಾದ ನಾಯಕರ ಜೊತೆಗೆ ದಿಗ್ವಿಜಯ್ ಸಿಂಗ್ ಅವರು ಮೋದಿ ವಿರುದ್ಧ ಟ್ವೀಟ್ ಪ್ರಹಾರ ಆರಂಭಿಸಲು ತಂತ್ರ ಹೆಣೆದಿದ್ದಾರೆ.
ಬಹು ಜನಪ್ರಿಯ ವ್ಯಕ್ತಿಯನ್ನು ಹೊಗಳುವುದು ಅಥವಾ ತೆಗಳುವ ಮೂಲಕ ತಮ್ಮ ಚಿಂತನೆ ಹರಡುವುದು ಈ ಮೂಲಕ ಅಭಿಮಾನಿಗಳಲ್ಲಿ ಒಡಕು ಮೂಡಿಸಿ ತಮ್ಮತ್ತ ಸೆಳೆದುಕೊಳ್ಳುವುದು ಕಾಂಗ್ರೆಸ್ ತಂತ್ರಗಾರಿಕೆ
|
ಮೋದಿ ಟ್ವೀಟ್ಸ್
ಹಿಂದೂ ಜಾಗೃತಿ, ರಾಷ್ಟ್ರಭಕ್ತರ ನೆನಕೆ ಇದು ಮೋದಿ ಮಂತ್ರ
|
ಯುಪಿಎ ವಿರುದ್ದ ದನಿ
ಯುಪಿಎ ವಿರುದ್ದ ದನಿ ಎತ್ತುವುದು ಮೋದಿ ಎರಡನೇ ತಂತ್ರ
|
ಯುವ ಜನತೆಯ ಸೆಳೆತ
ಯುವ ಜನತೆ, ವಿದ್ಯಾರ್ಥಿಗಳನ್ನು ತಮ್ಮ ಅದ್ಭುತ ಭಾಷಣಗಳ ಮೂಲಕ ಸೆಳೆಯುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.
|
ಶಶಿಯದ್ದು ಭಿನ್ನ ತಂತ್ರ
ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಾ ಜನರಿಗೆ ಹತ್ತಿರವಾಗುವಲ್ಲಿ ಶಶಿ ತರೂರ್ ಕೂಡಾ ಯಶಸ್ವಿಯಾಗಿದ್ದಾರೆ.
|
ಶಶಿ ತರೂರ್ ಹೆಚ್ಚಿನ ಟ್ವೀಟ್
ಕ್ರಿಕೆಟ್, ಮನರಂಜನೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಜೊತೆ ಯುವ ಜನಾಂಗಕ್ಕೆ ಸಂಬಂಧಿತ ವಿಷಯಗಳ ಬಗ್ಗೆ ಶಶಿ ತರೂರ್ ಹೆಚ್ಚಿನ ಟ್ವೀಟ್ ಮಾಡುವುದು
|
ಸುಷ್ಮಾ ಸ್ವರಾಜ್ ಟ್ವೀಟ್
ಆಹಾರ ಭದ್ರತೆ ಕಾಯ್ದೆ ಬಗ್ಗೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಟ್ವೀಟ್












Click it and Unblock the Notifications