ಗೋವಾ ಜತೆ ಸಂಪರ್ಕ ಕಡಿದುಕೊಂಡ ಕರ್ನಾಟಕ

ಕಾರವಾರ, ಜುಲೈ 3: ಅತ್ತ ಗೋವಾ ಇತ್ತ ಕರ್ನಾಟಕ ಎರಡೂ ಕಡೆ ವಿಪರೀತ ಎನಿಸುವಷ್ಟು ಮಳೆಯಾಗುತ್ತಿದೆ. ಇದರಿಂದ ಅಲ್ಲಲ್ಲಿ ಭೂಸ್ಖಲನಗಳು ಉಂಟಾಗುತ್ತಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದೆ.

ಅದರಲ್ಲೂ ರಾಷ್ಟ್ರೀಯ ಹೆದ್ದಾರಿ -17 ಕ್ಕೆ ಭಾರಿ ಧಕ್ಕೆಯೊದಗಿದೆ. ಮಡಗಾಂವ್ ನಿಂದ ಕಾರವಾರ ವರೆಗಿನ ಈ ರಾಷ್ಟ್ರೀಯ ಹೆದ್ದಾರಿ (National Highway-17) ಮಂಗಳವಾರ ರಾತ್ರಿ 2 ಗಂಟೆಯ ನಂತರ ಬಂದ್ ಆಗಿದೆ.

rain-landslide-nh17-margao-karwar-route-blocked-at-bali

ಎರಡೂ ರಾಜ್ಯಗಳನ್ನು ಸಂಪರ್ಕ ಕಲ್ಪಿಸುವ ಅನಮೋದ್ ಘಟ್ಟ ಪ್ರದೇಶದಲ್ಲಿ ಬಲಿ ಎಂಬಲ್ಲಿ ಭೂಸ್ಖಲನ ಜಾಸ್ತಿಯಾಗಿದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ -17 ರ ರಸ್ತೆ ಮಾರ್ಗವನ್ನು ಬದಲಿಸಲಾಗಿದೆ.

ಬರೀ ಮಣ್ಣು, ಭಾರಿ ಕಲ್ಲುಬಂಡೆಗಳು ಸುಮಾರು 10 ಅಡಿ ಎತ್ತರದಲ್ಲಿ ರಸ್ತೆಯಲ್ಲಿ ಬಿದ್ದಿವೆ. ಇದರಿಂದ ಜನಸಾಮಾನ್ಯರಿಗೆ ಜರೂರತ್ತಾಗಿರುವ ಈ NH-17 ಬಂದ್ ಆಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಗೋವಾ ಚೆಕ್ ಪೋಸ್ಟಿನಿಂದ 6 ಕಿಮೀ ದೂರದಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ.

ದಕ್ಷಿಣ ಗೋವಾ ಜಿಲ್ಲಾಧಿಕಾರಿ ಎನ್ ಡಿ ಅಗರವಾಲ್ ಅವರು ವಿಪತ್ತು ನಿರ್ವಹಣಾ ತಂಡದ ಜತೆಗೂಡಿ ಸ್ಥಳಕ್ಕೆ ಧಾವಿಸಿದ್ದು, ರಸ್ತೆ ಸಂಚಾರವನ್ನು ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಮಧ್ಯೆ, ಗೋವಾದಲ್ಲಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸೋಮವಾರದಿಂದೀಚೆಗೆ 8 ಅಂಗುಲ ಮಳೆಯಾಗಿದೆ. ಸಣವಾರಕೋಟಾ ಮತ್ತು ಭೀವಸಾ ಭಾಗಗಳು ಹೆಚ್ಚು ಸಂತ್ರಸ್ಥಗೊಂಡಿವೆ. ಬಿಚೋಲಿಂ ಮತ್ತು ವಳವಂತಿ ನದಿಗಳಲ್ಲಿ ನೀರು ಅಪಾಯದ ಮಟ್ಟ ತಲುಪಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+