ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಅಪಹರಣ ಸುಖಾಂತ್ಯ

ಪಿಯುಸಿ ವ್ಯಾಸಂಗ ಮಾಡುತ್ತಿರುವ ಸದರಿ ವಿದ್ಯಾರ್ಥಿನಿಯನ್ನು ರವಿ ಎಂಬಾತ ನಿನ್ನೆ ಸಂಜೆ 4 ಗಂಟೆಗೆ ಅಪಹರಣ ಮಾಡಿದ್ದ. ಆದರೆ ಇಂದು ಬೆಳಗಿನ ಜಾವ 5 ಗಂಟೆಯಲ್ಲಿ ಮಧುಗಿರಿ ಬಳಿ ಬಾಲಕಿಯನ್ನು ಬಿಟ್ಟು ನಾಪತ್ತೆಯಾಗಿದ್ದಾನೆ.
ಅದಕ್ಕೂ ಮುನ್ನ ಬಾಲಕಿಯು 'ತಾನು ಇನ್ನೂ ಓದಬೇಕಿದೆ. ಅಸಲಿಗೆ ನೀನು ಯಾರೂ ಅಂತಲೇ ಗೊತ್ಲೇ. ನೀನು ನನ್ನನ್ನು ಪ್ರೀತಿಸುತ್ತಿರುವುದೂ ನನಗೆ ಗೊತ್ತಿಲ್ಲ. ಮದುವೆಗೆ ನಾನು ತಯಾರಿಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡು' ಎಂದು ರವಿ ಮುಂದೆ ಪರಿಪರಿಯಾಗಿ ಬೇಡಿಕೊಂಡ ಫಲವಾಗಿ ಆತ ವಿದ್ಯಾರ್ಥಿನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮತ್ತೊಂದು ಮಾಹಿತಿ ಪ್ರಕಾರ ನಿನ್ನೆ ಕಾಲೇಜು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಬಾಲಕಿಯನ್ನು ಅಪಹರಿಸುತ್ತಿದ್ದಂತೆ ಆಕೆಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವ್ಯಾಪಕ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಅದರ ಸುಳಿವರಿತ ರವಿ, ಇನ್ನು ತನಗೆ ಉಳಿಗಾಲವಿಲ್ಲ ಎಂದು ಪೊಲೀಸರಿಗೆ ಹೆದರಿ ಬಾಲಕಿಯನ್ನು ಬಿಟ್ಟುಹೋಗಿದ್ದಾನೆ ಎನ್ನಲಾಗಿದೆ.
ಅದಕ್ಕೂ ಮುನ್ನ, 2 ವರ್ಷಗಳಿಂದ ರವಿ ಸದರಿ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿಯೂ, ಅದು ಬಾಲಕಿಯ ಅಪ್ಪ-ಅಮ್ಮನಿಗೆ ತಿಳಿದಿದೆ. ಆದರೆ ಅವರು ತಮ್ಮ ಮಗಳನ್ನು ರವಿಗೆ ಕೊಟ್ಟು ಮದುವೆ ಮಾಡಿಕೊಡಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಹುಡುಗಿಯನ್ನು ಅಪಹರಿಸಿ ಮದುವೆಯಾಗಲೂ ರವಿ ಸಿದ್ಧತೆ ನಡೆಸಿದ್ದಾನೆ ಎಂಬ ಸುದ್ದಿಯೂ ಹಬ್ಬಿತ್ತು.












Click it and Unblock the Notifications