ಸರಣಿ ಸರಗಳ್ಳತನ, ಬೆಚ್ಚಿಬಿದ್ದ ಬೆಂಗಳೂರು

chain
ಬೆಂಗಳೂರು, ಜೂ.30 : ನಗರದ ವಿವಿಧ ಪ್ರದೇಶಗಳಲ್ಲಿ ಭಾನುವಾರ ಬೆಳಗ್ಗೆ ಏಕಕಾಲಕ್ಕೆ ನಾಲ್ಕಾರು ಸರಗಳ್ಳತನದ ಪ್ರಕರಣಗಳು ನಡೆದಿವೆ. ಮೋಟಾರ್ ಬೈಕಿನಲ್ಲಿ ಮಿಂಚಿನಂತೆ ಬಂದ ಖದೀಮರು ಬಂಗಾರದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸರಗಳ್ಳತನಗಳು ಆಗಾಗ, ಅಲ್ಲಲ್ಲಿ ನಡೆಯುವುದು ಬೆಂಗಳೂರಿನಲ್ಲಿ ಮಾಮೂಲು. ಆದರೆ, ಒಂದೇ ದಿನ ಅದೂ ನಗರದ ಉತ್ತರ ಭಾಗದಲ್ಲೇ ಹಲವಾರು ಪ್ರಕರಣಗಳು ನಡೆದಿದ್ದು ನಗರವನ್ನು ಬೆಚ್ಚಿ ಬೀಳಿಸಿದೆ.

ಯಶವಂತಪುರದ ತ್ರಿವೇಣಿ ರಸ್ತೆ, ಜಾಲಹಳ್ಳಿಯ ಬಿಇಎಲ್ ರಸ್ತೆ, ವೈಯಾಲಿ ಕಾವಲ್, ಪುಲಿಕೇಶಿ ನಗರ, ಮತ್ತು ಮಲ್ಲೇಶ್ವರಂನಿಂದ ಸರಗಳ್ಳತನಗಳು ರಾಜಾರೋಷವಾಗಿ ನಡೆದ ಘಟನೆಗಳು ವರದಿಯಾಗಿವೆ. ಈ ಸಂಬಂಧದ ಪ್ರಕರಣಗಳು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. (ನಾಲ್ಕು ಕಡೆ ನಕಲಿ ಪೊಲೀಸರ ಕೈ ಚಳಕ)

ಆಭರಣ ಕಳೆದುಕೊಂಡ ವ್ಯಕ್ತಿಗಳ ಹೆಸರುಗಳು ಮತ್ತು ಬಂಗಾರದ ಅಂದಾಜು ತೂಕ ಇಂತಿದೆ. ಕಮಲಮ್ಮ ( 75 ಗ್ರಾಂ), ರಾಣಿ (100 ಗ್ರಾಂ), ಮೂರ್ತಿ (30 ಗ್ರಾಂ), ಸಗಾಯಿ (40 ಗ್ರಾಂ). ಎಂ.ಎಂ.ರಸ್ತೆಯ ಸರಸ್ವತಿ (40 ಗ್ರಾಂ) ಒಂದೇ ಗುಂಪು ಎಲ್ಲಾ ಪ್ರದೇಶಗಳಲ್ಲಿ ಸರಣಿ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಹಾನಗರದ ಪೊಲೀಸ್ ಆಯುಕ್ತರಾಗಿ ರಾಘವೇಂದ್ರ ಔರಾದ್ ಕರ್ ಅಧಿಕಾರ ಸ್ವೀಕರಿಸಿದ ದಿನದಂದೇ ಸರಣಿ ಸರಗಳ್ಳತನ ನಡೆದಿರುವುದು ಕಾಕತಾಳೀಯವೆನಿಸಿದೆ. ಭಾನುವಾರ ಬೆಳಗ್ಗೆ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಔರಾದ್ ಕರ್ ಗೆ ಅಧಿಕಾರ ಹಸ್ತಾಂತರಿಸಿದರು. ಅಂದಹಾಗೆ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ 24,300.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+