ಸರ್ರೆಯಲ್ಲಿ ಹಿಂದೂ ಲಕ್ಷ್ಮಿನಾರಾಯಣ ದೇಗುಲಕ್ಕೆ ಧಕ್ಕೆ

hindu-laxmi-narayan-temple-in-surrey-canada-vandalised
ಟೊರೊಂಟೊ, ಜೂನ್ 28: ಕೆನಡಾದಲ್ಲಿ ಜನಾಂಗೀಯ ದ್ವೇಷ ಮತ್ತೆ ಕಾಣಿಸಿಕೊಂಡಿದೆ. ದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಸ್ಥಳೀಯರು ಇಲ್ಲಿನ ಪ್ರಸಿದ್ಧ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ. Surrey Royal Canadian Mounted Police (RCMP) ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇಲ್ಲಿನ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಜೂನ್ 23 ರಂದು ಈ ದುರ್ಘಟನೆ ನಡೆದಿದ್ದು, ಇಬ್ಬರು ಯುವಕರು ಬೇಸ್ ಬಾಲ್ ಬ್ಯಾಟಿನಿಂದ ದೇವಸ್ಥಾನದ ಆವರಣದಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲ ಪುಡಿ ಪುಡಿ ಮಾಡಿದ್ದಾರೆ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ.

'ಯಾರೋ ತಿಳಿಗೇಡಿಗಳು ಮಾಡಿದ ದುಷ್ಕೃತ್ಯ ಇದಲ್ಲ. ಉದ್ದೇಶಪೂರ್ವಕವಾಗಿ ಯೋಜಿತ ರೀತಿಯಲ್ಲಿ ಈ ಕೃತ್ಯವೆಸಗಿದ್ದಾರೆ. ಇದು ನಿಜಕ್ಕೂ ದುರುದೃಷ್ಟಕರ ಮತ್ತು ಆಘಾತಕಾರಿ' ಎಂದು ಇಲ್ಲಿನ ವೇದಿಕ್ ಹಿಂದೂ ಕಲ್ಚರ್ ಸೊಸೈಟಿಯ ಮುಖ್ಯಸ್ಥ ಪುರುಷೋತ್ತಮ್ ಗೋಯಲ್ ವರ್ಣಿಸಿದ್ದಾರೆ.

ನಿಜಕ್ಕೂ ಆತಂಕಕಾರಿಯಾಗಿದೆ. ಇದು ದರೋಡೆ ಕೃತ್ಯವಲ್ಲ. ಬೇರೆ ಏನೂ ಅನಾಹುತವೆಸಗಿಲ್ಲ. ಇಂತಹ ದುಷ್ಕೃತ್ಯವೆಸಗುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಯಾಕಾಗಿ ಇಂತಹ ಜನಾಂಗೀಯ ದ್ವೇಷ ಎಂದು ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಕರಣದಲ್ಲಿ ಬಳಸಿರುವ ಬ್ಯಾಟಿನ ಒಂದು ತುದಿಯಲ್ಲಿ ಸಿಖ್ ಜನಾಂಗದವರ ಕೊನೆಯ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಗುಲಕ್ಕೆ ಭೇಟಿ ನೀಡಿದ್ದ ಕೆನಡಾದ World Sikh Organization ಅಧ್ಯಕ್ಷ ಪ್ರೇಂ ಸಿಂಗ್ ವಿನ್ನಿಂಗ್ ಘಟನೆಯನ್ನು ಖಂಡಿಸಿದ್ದಾರೆ.

ಕೆನಡಾದ ಪೌರತ್ವ, ವಲಸೆ ಮತ್ತು ಬಹುಸಂಸ್ಕೃತಿ ವಿಭಾಗದ ಸಚಿವ ಜಾಸನ್ ಕೆನ್ನಿ ದಾಳಿಯನ್ನು ಖಂಡಿಸಿದ್ದಾರೆ.

1985ರ ಜೂನ್ 23ರಂದು ಐರ್ಲೆಂಡಿನಲ್ಲಿ ಏರ್ ಇಂಡಿಯಾ ವಿಮಾನವನ್ನು ಬಾಂಬಿಟ್ಟು ಸ್ಫೋಟಿಸಿದ ಪ್ರಕರಣಕ್ಕೆ ಪ್ರತೀಕಾರವಾಗಿ ಮೊನ್ನೆ ಭಾನುವಾರ ದೇವಾಲಯ ಧ್ವಂಸ ಕೃತ್ಯ ನಡೆದಿದೆಯಾ ಎಂಬ ಅನುಮಾನವೂ ಕಾಡುತ್ತಿದೆ.

1984ರಲ್ಲಿ ಅಮೃತಸರದಲ್ಲಿನ ಗೋಲ್ಡನ್ ಟೆಂಪಲ್ ಒಳಕ್ಕೆ ಭಾರತೀಯ ಸೇನೆ ನುಗ್ಗಿತ್ತು. ಅದರ ವಿರುದ್ಧ ಸಿಖ್ ಭಯೋತ್ಪಾದಕರು ಏರ್ ಇಂಡಿಯಾ ವಿಮಾನಕ್ಕೆ ಬಾಂಬಿಟ್ಟು 329 ಪ್ರಯಾಣಿಕರನ್ನು ಆಹುತಿ ತೆಗೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+