ಮೂರನೆಯವ ಗೋವಾದಲ್ಲಿ ಅಲ್ಲ ಇಲ್ಲೇ ಪರ್ಕಳದಲ್ಲಿ ಸಿಕ್ಕಿಬಿದ್ದ

ಇದಕ್ಕೂ ಮುಂಚೆ, ಪ್ರಕರಣದ ಮೂರನೆಯ ಆರೋಪಿಯೊಬ್ಬ ಗೋವಾಗೆ ಪರಾರಿಯಾಗಿದ್ದಾನೆಂದು ವರದಿಯಾಗಿತ್ತು. ಆದರೆ ಸ್ಥಳೀಯ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆನಂದನೇ ಮೂರನೇ ಆರೋಪಿ ಎಂದು ಪೊಲೀಸರಿಗೆ ಮನದಟ್ಟಾಗಿದೆ. ಆನಂದನಿಗೆ ಅವನ ಪತ್ನಿಯ ಮೂಲಕ ಬಾಧಿತ ವಿದ್ಯಾರ್ಥಿನಿಯ ಪರಿಚಯವಿತ್ತು ಎನ್ನಲಾಗಿದೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.
* ಕೃತ್ಯಕ್ಕೆ ಬಳಿಸಿದ ಆಟೋ ಹರೀಶನ ಮನೆಯಲ್ಲಿ ಸಿಕ್ಕಿದೆ.
* ಕುಕೃತ್ಯ ನಡೆದ ಸ್ಥಳ ಓಂತಿಬೆಟ್ಟು ಸಮೀಪ ಮಡಗ
* ಆನಂದನನ್ನು ಬಿಟ್ಟು ಉಳಿದಿಬ್ಬರೂ ಅವಿವಾಹಿತರು. ಮಣಿಪಾಲದಿಂದ 6-7 ಕಿಮೀ ದೂರದ ಆತ್ರಾಡಿ ಸಮೀಪದ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
* ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಪೊಲೀಸರೂ ಪತ್ತೆ ಕಾರ್ಯದಲ್ಲಿ ಉಡುಪಿ ಪೊಲೀಸರಿಗೆ ನೆರವಾಗಿದ್ದಾರೆ.
* ಕುಕೃತ್ಯವೆಸಗಿದ ಬಳಿಕ ಆರೋಪಿ ಯೋಗೀಶ ಆಕೆಯನ್ನು ರಿಕ್ಷಾದಲ್ಲಿ ಮಣಿಪಾಲದಲ್ಲಿ ಆಕೆ ವಾಸ್ತವ್ಯವಿದ್ದ ಅಪಾರ್ಟ್ ಮೆಂಟಿಗೆ ತಂದು ಬಿಟ್ಟಿದ್ದ.
* ಜೂನ್ 21ರಂದು ನಡೆಯಲಿದ್ದ ಪರೀಕ್ಷೆಗೆ ತಯಾರಿ ನಡೆಸಲು ಹಿಂದಿನ ರಾತ್ರಿ ಮಣಿಪಾಲ ವಿವಿ ಕಟ್ಟಡದಲ್ಲಿರುವ ಗ್ರಂಥಾಲಯದಲ್ಲಿ ಅಧ್ಯಯನ ನಡೆಸಿ ರಾತ್ರಿ 11.20ರ ಸುಮಾರಿಗೆ ತನ್ನ ರೂಮಿಗೆ ನಡೆದುಕೊಂಡು ಹೋಗುತ್ತಿದ್ದ ಕೇರಳದ ತಿರುವನಂತಪುರಂ ಮೂಲದ 22ರ ಹರೆಯದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮೂವರು ಆಟೊ ರಿಕ್ಷಾದಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
* ರಿಕ್ಷಾದಲ್ಲಿ ಜಾಲಿ ರೈಡ್ ಮಾಡುತ್ತಿದ್ದಾಗ ಕಣ್ಣಿಗೆ ಬಿದ್ದಳು: ಇದೊಂದು ಪೂರ್ವಯೋಜಿತ ಕೃತ್ಯವಲ್ಲ. ಇದು ತಕ್ಷಣದ ಪ್ರೇರಣೆಯಲ್ಲಿ ನಡೆದ ಅತ್ಯಾಚಾರ ಕೃತ್ಯ. ಘಟನೆಯು Crime By Chance ಆಗಿದೆ.
* ಮೂವರೂ ಆರೋಪಿಗಳು ಗೆಳೆಯರಾಗಿದ್ದು, ಹರಿಪ್ರಸಾದನ ರಿಕ್ಷಾದಲ್ಲಿ ಜೂ. 20ರ ರಾತ್ರಿ ಚೆನ್ನಾಗಿ ಕುಡಿದ ಮತ್ತಿನಲ್ಲಿ ಜಾಲಿ ರೈಡ್‌ಗೆ ಹೊರಟಿದ್ದರು. ರಿಕ್ಷಾ ಮಣಿಪಾಲ ವಿವಿ ಕ್ಯಾಂಪಸ್ ಎದುರು ಬಂದಾಗ, ಫಾರ್ಮಸಿ ಕಾಲೇಜಿನ ಎದುರು ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಏಕಾಂಗಿಯಾಗಿ ಹೋಗುವುದನ್ನು ನೋಡಿದ್ದಾರೆ. ತಕ್ಷಣವೇ ಆಕೆಯನ್ನು ಅಪಹರಿಸಿ ಕುಕೃತ್ಯವೆಸಗಿದ್ದಾರೆ.
* ಆರೋಪಿಗಳು ಮೂವರು ಲೈಗಿಂಕ ದೌರ್ಜನ್ಯ ಎಸಗಿರುವುದು ಖಚಿತವಾಗಿದೆ. ಯಾರು ಯಾವ ಪಾತ್ರವಹಿಸಿದರು ಎಂಬುದು ಅವರಿಂದಲೇ ತಿಳಿಯಬೇಕಿದೆ. ಪೊಲೀಸರು ಇನ್ನು ಮುಂದಿನ ತನಿಖೆಯನ್ನು ಗೌಪ್ಯವಾಗಿ ನಡೆಸಲಿದ್ದಾರೆ. ಇದರಲ್ಲಿ ಸಂತ್ರಸ್ತೆ ಸಹ ಭಾಗವಹಿಸುವುದರಿಂದ ಗೌಪ್ಯತೆ ಕಾಪಾಡಬೇಕಿದೆ.
ಇಡೀ ಪ್ರಕರಣವನ್ನು ಪುನರ್ ರೂಪಿಸಬೇಕಿದೆ. ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪೊಲೀಸರು ಗರಿಷ್ಠ ಪ್ರಯತ್ನ ನಡೆಸಬೇಕಿದೆ. ಶೀಘ್ರವೇ ಪ್ರಕರಣದ ಎಲ್ಲ ಘಟನೆಗಳನ್ನೂ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕಿದೆ.
ಇದನ್ನೂ ಓದಿ: ಮಣಿಪಾಲ್ ರೇಪ್- ಮೂವರು ಪಾತಕಿಗಳು ಇವರೇ












Click it and Unblock the Notifications