ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್!

ಗುರುವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ಜುಲೈ 10ರಿಂದ ಬಜೆಟ್ ಅಧಿವೇಶನ ಪ್ರಾರಂಭಿಸಬೇಕು. ಜುಲೈ 12ರಂದು ಬಜೆಟ್ ಮಂಡನೆ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.
ಜುಲೈ 10ರಿಂದ 20ರವರೆಗೆ ಒಟ್ಟು ಹತ್ತಿದಿನಗಳ ಕಾಲ ಬಜೆಟ್ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಅಗತ್ಯವಿದ್ದರೆ, ಮೂರುದಿನಗಳ ಕಾಲ ಅಧಿವೇಶನ ಮುಂದುವರೆಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ವಿದ್ಯಾರ್ಥಿನಿಗೆ ಸಹಾಯ : ಮಲ್ಲೇಶ್ವರಂ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿ ರಕ್ಷಿತಾಗೆ ಸರ್ಕಾರದ ವತಿಯಿಂದ ಉಚಿತವಾಗಿ ಇಂಜಿನಿಯರಿಂಗ್ ಸೀಟು ಹಂಚಿಕೆ ನೀಡಲು ಸಹ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ರಕ್ಷಿತಾಗೆ 1 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ವಿದ್ಯಾರ್ಥಿನಿ ಪಿಯುಸಿ ಉತ್ತೀರ್ಣವಾದ ನಂತರ ಆಕೆಗೆ, ಸರ್ಕಾರದ ವತಿಯಿಂದ ಉಚಿತವಾಗಿ ಬಿಇ ಸೀಟು ನೀಡುವುದಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯ ಇತರ ನಿರ್ಣಯಗಳು
* ಲೋಕಾಯಕ್ತ ದಾಳಿವೇಳೆ ಸಿಕ್ಕಿಬಿದ್ದು, ಆರೋಪ ಸಾಬೀತಾಗಿದ್ದ ಕುಣಿಗಲ್ ಪಶುಇಲಾಖೆ ವೈದ್ಯಾಧಿಕಾರಿ ಎ. ಶೇಖರನ್ ವಜಾ ಸೇವೆಯಿಂದಾ ವಜಾ.
* ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಡಿ.ದರ್ಜೆ ನೌಕರ ದೇವೇಗೌಡ ವಿರುದ್ಧ ಕ್ರಮ, ಅವರ ಸಂಬಳ ಶೇ 50ರಷ್ಟು ಕಡಿತ.
* ಬೆಂಗಳೂರಿನ ನ್ಯಾಯಾಧೀಶರ ವಸತಿ ಸಂಕೀರ್ಣಕ್ಕೆ 2 ಎಕರೆ ಭೂಮಿ ನೀಡುವುದು.
* ಎಸ್.ಸಿ ಮತ್ತು ಎಸ್.ಟಿ ವಸತಿ ಶಾಲೆಗೆ 68.57 ಅನುದಾಣ ನೀಡಿಕೆ.












Click it and Unblock the Notifications