ಬೆಂಗಳೂರಿನಲ್ಲಿ ಅಂಧರಿಗಾಗಿ ವಿಶಿಷ್ಟ ಕಾರ್ಯಕ್ರಮ

ಕಿವುಡರು ಮತ್ತು ಅಂಧರ ಪಾಲಿನ ದಾರಿದೀಪವಾಗಿರುವ ಅಮೆರಿಕದ ಲೇಖಕಿ, ರಾಜಕೀಯ ಚಳವಳಿಗಾರ್ತಿ ಹೆಲೆನ್ ಕೆಲ್ಲರ್ (ಜೂ. 27, 1880 - ಜೂ. 1, 1968) ಸ್ಮರಣಾರ್ಥ ಈ ಉದಾತ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೂನ್ 27ರನ್ನು ವಿಶ್ವ ಹೆಲೆನ್ ಕೆಲ್ಲರ್ ದಿನ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಧರಿಗೆ ಶೀಟಿ ಮತ್ತು ಕೈಗಡಿಯಾರವನ್ನು ಕೂಡ ಕೊಡಲಾಗುತ್ತಿದೆ.
ಬೆಂಗಳೂರು ಪೊಲೀಸ್ ಆಯುಕ್ತರಾಗಿರುವ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಮುಖ್ಯ ಅತಿಥಿಯಾಗಿ ಮತ್ತು ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಡಾ. ಸಲೀಂ ಎಂ.ಎ. ಅವರು ಗೌರವ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಸಾರ್ವಜನಿಕರು ಕೂಡ ಭಾಗಿಯಾಗಬಹುದು.
ಕಾರ್ಯಕ್ರಮ ನಡೆಯುತ್ತಿರುವ ಸ್ಥಳ : ಪೊಲೀಸ್ ಕಮಿಷನರ್ ಕಚೇರಿ, ಇನ್‌ಫಂಟ್ರಿ ರಸ್ತೆ, ಬೆಂಗಳೂರು - 560 001.
ದಿನಾಂಕ : 27ನೇ ಜೂನ್, 2013, ಗುರುವಾರ
ಸಮಯ : ಬೆಳಿಗ್ಗೆ 11.15ಕ್ಕೆ
ಸಂಪರ್ಕ : 9342530290, ಈಮೇಲ್: [email protected]












Click it and Unblock the Notifications