ಒಮಾಶ್ರಮಕ್ಕೆ ನೀವೇನು ಮಾಡಬಹುದು?
ಒಮಾಶ್ರಮವನ್ನು ನಡೆಸಿಕೊಂಡು ಹೋಗುವುದು ಕಷ್ಟದ ವಿಚಾರವೇ ಆಗಿದೆ. ಪ್ರತೀ ವೃದ್ಧರಿಗೂ ಪ್ರತೀ ತಿಂಗಳಿಗೆ ಸುಮಾರು 5,000 ರೂಪಾಯಿಗಳ ಖರ್ಚು ಬೀಳುತ್ತದೆ. ಪ್ರತೀ ತಿಂಗಳಿಗೆ ಒಟ್ಟು ಸುಮಾರು 3 ಲಕ್ಷ ರೂಪಾಯಿಗಳ ಖರ್ಚು ಬೀಳುತ್ತದೆ. ಹೀಗಾಗಿ ಟ್ರಸ್ಟ್ ದಾನಿಗಳ ನೆರವನ್ನು ನಿರೀಕ್ಷೆ ಮಾಡುತ್ತಿದೆ.
* 5,000 ರೂಪಾಯಿ ನೀಡಿ ಒಬ್ಬ ವಯೋವೃದ್ಧನನ್ನು 1 ತಿಂಗಳ ಮಟ್ಟಿಗೆ ಸಾಕುವ ಜವಾಬ್ದಾರಿ ವಹಿಸಿಕೊಳ್ಳಬಹುದು.
* 7,000 ರೂಪಾಯಿ ನೀಡಿ 50 ವಯೋವೃದ್ಧರಿಗೆ ಒಂದು ದಿನ ಊಟ-ತಿಂಡಿ ನೀಡಿದ ಪುಣ್ಯಕಟ್ಟಿಕೊಳ್ಳಬಹುದು.
* ಅಕ್ಕಿ, ಗೋಧಿ, ಇತರೆ ಸಾಮಗ್ರಿಗಳನ್ನು ಕೂಡ ಸಹಾಯವಾಗಿ ಟ್ರಸ್ಟ್‌ಗೆ ನೀಡಬಹುದು.
* ಹುಟ್ಟುಹಬ್ಬ, ವಾರ್ಷಿಕೋತ್ಸವ ಮುಂತಾದ ಖುಷಿಯನ್ನು ವೃದ್ಧಾಶ್ರಮದಲ್ಲಿ ಸಂಭ್ರಮಿಸಿಕೊಳ್ಳಬಹುದು.
* ಪ್ರತೀತಿಂಗಳು 200 ರಿಂದ 1,000 ರೂಪಾಯಿ ತನಕ ಈಸಿಎಲ್ ನೀಡಿ ಒಮಾಶ್ರಮದ ಪೋಷಕರಾಗಬಹುದು.
* ವೃದ್ಧಾಶ್ರಮಕ್ಕೆ ನೀಡುವ ಎಲ್ಲಾ ನೆರವುಗಳು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ. ಎಪ್‌ಆರ್‌ಸಿಎಯ ಕ್ಲೀಯರೆನ್ಸ್ ಕೂಡ ಸಿಗುತ್ತದೆ.

ಸವಾಲುಗಳ ಮಧ್ಯೆ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗುತ್ತಿರುವ ಗೀತಾಶಂಕರ್, ಮಕ್ಕಳಿಂದ ಪೋಷಕರ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿರುವ ಹಿರಿಯರು ತನ್ನ ಮನೆಗೆ ಸ್ವಂತ ಮನೆಗೆ ಮರಳಿದರೆ ಸಂತೋಷ ಹೆಚ್ಚುತ್ತದೆ. ಆದ್ರೆ ಇದು ಕೇವಲ ಕನಸು ಅನ್ನೋದನ್ನ ಹೇಳಲು ಹಿಂಜರಿಯುತ್ತಿಲ್ಲ. ಭವಿಷ್ಯದಲ್ಲಿ ಒಮಾಶ್ರಮ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲು ಯೋಜನೆಗಳನ್ನು ಕೂಡ ರೂಪಿಸಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ: ಒಮಾಶ್ರಮ, #850, 5ನೇಕ್ರಾಸ್, 11ನೇ ಮುಖ್ಯರಸ್ತೆ, ವಿಜಯಾ ಬ್ಯಾಂಕ್ ಕಾಲೋನಿ, ಬಿಳೆಕನಹಳ್ಳಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560 076 ಇಲ್ಲಿ ಸಂಪರ್ಕಿಸಬಹುದು.
ದೂರವಾಣಿ : 9845567663, 26581682 / 41503305 / 64530629
ವೆಬ್‌ಸೈಟ್ : www.omashram.org
ಇ ಮೇಲ್ : [email protected], [email protected], [email protected]











Click it and Unblock the Notifications