• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಮರ್‌ಜೆನ್ಸಿ : ಇತಿಹಾಸದಿಂದ ಆಯ್ದ 12 ಪುಟಗಳು

By Srinath
|

1975ರ ಜೂನ್ 26ರಿಂದ 1977ರ ಮಾರ್ಚ್ 21 = 21 ತಿಂಗಳ ಅವಧಿ = ಸ್ವತಂತ್ರ ಭಾರತ ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಕರಾಳ ದಿನಗಳು! 39 ವರ್ಷಗಳ ಹಿಂದೆ ದೇಶವನ್ನು ಅಲ್ಲಾಡಿಸಿದ ರಾಷ್ಟ್ರೀಯ ದುರಂತ.

ಸಂವಿಧಾನಬದ್ಧವಾಗಿ ಭಾರತೀಯ ಪೌರರಿಗೆ ನೀಡಲಾಗಿದ್ದ ಸ್ವಾತಂತ್ರ್ಯವನ್ನು ಕಸಿದುಕೊಂಡು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ ಕರಾಳ ದಿನಗಳವು. ಭಾರತದ ಇತಿಹಾಸದುದ್ದಕ್ಕೂ ಕಪ್ಪುಚುಕ್ಕೆಯಾಗಿ ಉಳಿಯುವ ಪ್ರಧಾನಿ ಇಂದಿರಾ ಗಾಂಧಿ ಅವರ ಅತ್ಯಂತ ವಿವಾದಾತ್ಮಕ ಆದೇಶ ಅದು.

ಎಲ್ಲದಕು ಕಾರಣನು 'ಲೋಕ ಬಂಧು' ರಾಜ್ ನಾರಾಯಣ್

ಎಲ್ಲದಕು ಕಾರಣನು 'ಲೋಕ ಬಂಧು' ರಾಜ್ ನಾರಾಯಣ್

'ಲೋಕ ಬಂಧು' ರಾಜ್ ನಾರಾಯಣ್ ಅವರು ಜನತಾಪಕ್ಷದ ಅಭ್ಯರ್ಥಿಯಾಗಿ 1971ರ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಸೋತಿದ್ದೇ ಮುಂದಿನ ಎಲ್ಲ ಅನಾಚಾರಗಳಿಗೂ ಹೇತುವಾಯಿತು. ಆದರೆ ಇಂದಿರಾ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸೋತು-ಗೆದ್ದರು. ಇದರಿಂದ ಪ್ರತಿಪಕ್ಷಗಳು ಸಹಜವಾಗಿ ಕೆಂಡಾಮಂಡಲವಾದವು.

ರಾಜಮನೆತನದ ಸುಶಿಕ್ಷಿತ ರಾಜ್ ನಾರಾಯಣ್

ರಾಜಮನೆತನದ ಸುಶಿಕ್ಷಿತ ರಾಜ್ ನಾರಾಯಣ್

ಸೋತ ಅಭ್ಯರ್ಥಿ, ರಾಜಮನೆತನದ ಸುಶಿಕ್ಷಿತ ರಾಜ್ ನಾರಾಯಣ್ ಅವರು ಅಲಹಾಬಾದ್ ಹೈಕೋರ್ಟಿನಲ್ಲಿ ಇಂದಿರಾ ವಿರುದ್ಧ ಅಪೀಲು ಹೋದರು. ವಿಜಯೀ ಅಭ್ಯರ್ಥಿ ಇಂದಿರಾ ಗಾಂಧಿ ಚುನಾವಣೆ ಅಕ್ರಮವೆಸಗಿದ್ದಾರೆ. ಹಾಗಾಗಿ ಅವರ ಆಯ್ಕೆ ಅಸಿಂಧು. ಬದಲಿಗೆ, ಚುನಾವಣೆ ಗೆದ್ದಿರುವುದು ರಾಜ್ ನಾರಾಯಣ್ ಅವರೇ ಎಂದು ನ್ಯಾಯಾಲಯ ತೀರ್ಪು ನೀಡಿತು. ಅಷ್ಟೇ ಅಲ್ಲ ಇಂದಿರಾ ಇನ್ನು ಆರು ವರ್ಷ ಚುನಾವಣೆ ಕಣಕ್ಕಿಳಿಯುವಂತಿಲ್ಲ ಎಂದು 1974ರ ಜೂನ್ 25ರಂದು ಸಾರಿಬಿಟ್ಟಿತು.

ಪಾಕಿಸ್ತಾನ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ

ಪಾಕಿಸ್ತಾನ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ

ಇದನ್ನೆ ನೆಪವಾಗಿಟ್ಟುಕೊಂಡು ಇಂದಿರಾ ಗಾಂಧಿ ಅವರು ಅದಾಗತಾನೆ ಮುಗಿದಿದ್ದ ಪಾಕಿಸ್ತಾನ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯ ಇದೆಯೆಂದೂ, ಭೀಕರ ಕ್ಷಾಮ ಇದೆಯೆಂದೂ, 1973ರ ತೈಲ ಸಂಕಷ್ಟದ ಭೀಕರ ಪರಿಣಾಮ ಎದುರಾಗಿದೆಯೆಂದೂ, ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆಯೆಂದೂ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಬಿಟ್ಟರು. ತರುವಾಯ, ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸುವಂತೆ ತಮ್ಮ ತಾಯಿಯ ಮೇಲೆ ಭಾರಿ ಒತ್ತಡ ಹೇರಿದರು ಎಂಬ ಮಾತು ಜನಜನಿತವಾಯಿತು.

 'ರಬ್ಬರ್ ಸ್ಟಾಂಪ್' ರಾಷ್ಟ್ರಪತಿ ಫಕ್ರುದ್ದೀನ್ ಅಲಿ

'ರಬ್ಬರ್ ಸ್ಟಾಂಪ್' ರಾಷ್ಟ್ರಪತಿ ಫಕ್ರುದ್ದೀನ್ ಅಲಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ ರಾಯ್ 'ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ' ಪ್ರಸ್ತಾಪವನ್ನು ಪ್ರಧಾನಿ ಇಂದಿರಾ ಮುಂದೆ ಹಿಡಿದು ನಿಂತರು. 'ರಬ್ಬರ್ ಸ್ಟಾಂಪ್' ರಾಷ್ಟ್ರಪತಿಯೆನಿಸಿದ ಫಕ್ರುದ್ದೀನ್ ಅಲಿ ಅಹಮದ್ ಪ್ರಧಾನಿ ಪ್ರಸ್ತಾವನೆಗೆ ಅಂಕಿತ ಹಾಕಿದರು.

ಆರು ತಿಂಗಳಿಗೊಮ್ಮೆ ತುರ್ತು ಪರಿಸ್ಥಿತಿಗೆ ಮುದ್ರೆ

ಆರು ತಿಂಗಳಿಗೊಮ್ಮೆ ತುರ್ತು ಪರಿಸ್ಥಿತಿಗೆ ಮುದ್ರೆ

1977ರವರೆಗೂ ಆರು ತಿಂಗಳಿಗೊಮ್ಮೆ ಪ್ರಧಾನಿ ಇಂದಿರಾ ಮತ್ತೆ ಮತ್ತೆ ತುರ್ತು ಪರಿಸ್ಥಿತಿಗೆ ರಾಷ್ಟ್ರಪತಿಯಿಂದ ಅನುಮೋದನೆಯ ಮುದ್ರೆ ಪಡೆಯುತ್ತಿದ್ದರು. ಈ ನಡುವಣ ಅವಧಿಯಲ್ಲಿ ಸಂವಿಧಾನದ ಪರಿಚ್ಚೇದ 352ರ ಅನುಸಾರ ತಮಗೆ ವಿಶೇಷಾಧಿಕಾರಿ ದಕ್ಕಿಸಿಕೊಂಡ ಇಂದಿರಾ ಪೌರಹಕ್ಕುಗಳನ್ನು ಕಸಿದುಕೊಂಡು ತಮ್ಮ ವಿರೋಧಿಪಾಳಯದ ನಾಯಕರ ಧ್ವನಿ ಅಡಗಿಸಲು ಇನ್ನಿಲ್ಲದ ಶ್ರಮ ಹಾಕಿದರು. ಮಾಧ್ಯಮದ ಧ್ವನಿಯನ್ನು ಅಡಗಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಅನೇಕ ಸಂಘಟನೆಗಳಿಗೆ ನಿಷೇಧ ಹೇರಲಾಗಿತ್ತು.

ಪ್ರಧಾನಿ ಇಂದಿರಾ ತಮಗೆ ನ್ಯಾಯಾಂಗದ ಸಂರಕ್ಷಣೆ ಕಲ್ಪಿಸಿಕೊಳ್ಳುವುದರ ಜತೆಗೆ ನಾಗರಿಕರು ಯಾವುದೇ ಕೋರ್ಟುಗಳಲ್ಲಿ ಸರಕಾರವನ್ನು ಪ್ರಶ್ನಿಸುವಂತಿಲ್ಲ ಎಂದೂ ಸಂವಿಧಾನಕ್ಕೆ ತಿದ್ದುಪಡಿ ತಂದಿಕೊಂಡರು.

ನಿಧನ ವಾರ್ತೆಯಾಗಿಯೂ ಪ್ರಸಾರವಾಯ್ತು

ನಿಧನ ವಾರ್ತೆಯಾಗಿಯೂ ಪ್ರಸಾರವಾಯ್ತು

ಮುಂಬೈನ ಟೈಮ್ಸ್ ಆಫ್ ಇಂಡಿಯಾ, ಪತ್ರಿಕೆಯ ನಿಧನ ಕಾಲಂನಲ್ಲಿ D.E.M O'Cracy beloved husband of T.Ruth, father of L.I.Bertie, brother of Faith, Hope and Justica expired on 26 June ಎಂದು ಪ್ರಕಟಿಸಿತು.

ರಾಷ್ಟ್ರ ನಾಯಕರು ಬೆಂಗಳೂರು ಸೆಂಟ್ರಲ್ ಜೈಲಿಗೆ

ರಾಷ್ಟ್ರ ನಾಯಕರು ಬೆಂಗಳೂರು ಸೆಂಟ್ರಲ್ ಜೈಲಿಗೆ

ಜಯಪ್ರಕಾಶ್ ನಾರಾಯಣ್, ರಾಜ್ ನಾರಾಯಣ್, ಮೊರಾರ್ಜಿ ದೇಸಾಯಿ, ಚರಣ ಸಿಂಗ್, ಜೀವತ್ರಂ ಕೃಪಲಾನಿ, ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಸಿನ್ಹಾ ಮುಂತಾದ ನಾಯಕರನ್ನು ಇಂದಿರಾ ಪೊಲೀಸರು ಜೈಲಿಗಟ್ಟಿದರು. ಆ ಸಂದರ್ಭದಲ್ಲಿ ಅನೇಕ ರಾಷ್ಟ್ರ ನಾಯಕರು ಬೆಂಗಳೂರು ಸೆಂಟ್ರಲ್ ಜೈಲಿಗೆ ರವಾನೆಯಾಗಿದ್ದರು. ಮೀಸಾ ಕಾಯಿದೆ (Maintenance of Internal Security Act) ಯಥೇಚ್ಛವಾಗಿ ದುರ್ಬಳಕೆಯಾಯಿತು.

ಪ್ರಧಾನಿ ಇಂದಿರಾ ಆಟಾಟೋಪ ತರಾಟೆಗೆ

ಪ್ರಧಾನಿ ಇಂದಿರಾ ಆಟಾಟೋಪ ತರಾಟೆಗೆ

ಪ್ರಧಾನಿ ಇಂದಿರಾ ಆಟಾಟೋಪದ ವಿರುದ್ಧ ಸುಪ್ರೀಂಕೋರ್ಟ್ ಕೆಂಡಕಾರಿತು. ಜಸ್ಟೀಸ್ ಖನ್ನಾ ಅವರು ಇಂದಿರಾರನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಅಧಿಕಾರಸ್ಥ ರಾಜಕಾರಣಿಗಳ ಅನುಕೂಲಕ್ಕೆ ತಕ್ಕಂತೆ ಕೇವಲ ಸಂಸತ್ತಿನ ಅನುಮೋದನೆ ಪಡೆದು ಕರಾಳ ಶಾಸನಗಳನ್ನು ರೂಪಿಸುವಂತಿಲ್ಲ ಅಥವಾ ತಿದ್ದುಪಡಿ ತರುವಂತಿಲ್ಲ ಎಂದು ಆದೇಶ ನೀಡಿದರು. ಮುಂದೆ ಜಸ್ಟೀಸ್ ಖನ್ನಾ ಅವರು ಇಂಧಿರಾ ವಿರುದ್ಧ ಸೊಲ್ಲೆತ್ತಿದ್ದಕ್ಕೆ ಭಾರಿ ದಂಡ ತೆರಬೇಕಾಯಿತು. ಸುಪ್ರೀಂಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿ ಅವರೇ ಆಗಬೇಕಿತ್ತು. ಆದರೆ ಇಂದಿರಾ ಜಸ್ಟೀಸ್ ಖನ್ನಾರ ಅವಕಾಶವನ್ನು ಕಸಿದುಕೊಂಡರು.

ಅರಿವುಗೇಡಿ ಸಂಜಯ್ ಗಾಂಧಿಯ 'ನಸ್ ಬಂಧಿ'

ಅರಿವುಗೇಡಿ ಸಂಜಯ್ ಗಾಂಧಿಯ 'ನಸ್ ಬಂಧಿ'

ಜನಸಂಖ್ಯೆ ಮಿತಿಮೀರುತ್ತಿದೆ ಎಂದು ಅರಿವುಗೇಡಿ ಸಂಜಯ್ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಟಾರ್ಗೆಟ್ ಗಳನ್ನು ನೀಡುತ್ತಾ ಕೈಗೆ ಸಿಕ್ಕಿದವರಿಗೆಲ್ಲಾ ಬಲವಂತದ sterilization, vasectomyಗಳನ್ನು (nasbandi) ಮಾಡಿಸಿದರು. ಈ ಮಧ್ಯೆ, ತುರ್ತು ಪರಿಸ್ಥಿತಿ ಘೋಷಣೆಗೆ ನೀಡಿದ್ದ ಕಾರಣಗಳನ್ನು ಸಮರ್ಥಿಸಿಕೊಂಡು ದೇಶದ ಅರ್ಥ ವ್ಯವಸ್ಥೆಯನ್ನು ಸರಿದೂಗಿಸಲು ಪ್ರಧಾನಿ ಇಂದಿರಾ 20 ಅಂಶ ಕಾರ್ಯಕ್ರಮಗಳನ್ನು ಜಾರಿಗೆ ತಂದರು.

ಚುನಾವಣೆ ರಣಕಹಳೆ ಘೋಷಣೆ

ಚುನಾವಣೆ ರಣಕಹಳೆ ಘೋಷಣೆ

ಜನವರಿ 23, 1977ದಂದು ಚುನಾವಣೆ ಪ್ರಸ್ತಾಪ ಮುಂದಿಟ್ಟ ಪ್ರಧಾನಿ ಇಂದಿರಾ ಮಾರ್ಚಿನಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದರು. ಅದೇ ವೇಳೆ ಬಂಧಿತ ನಾಯಕರನ್ನು ಬಿಡುಗಡೆಗೊಳಿಸಿದರು. March 23, 1977ರಂದು ತುರ್ತು ಪರಿಸ್ಥಿತಿ ಅಧಿಕೃತವಾಗಿ ಅಂತ್ಯವಾಯಿತು.

ಪ್ರಜಾಪ್ರಭುತ್ವ Vs ಸರ್ವಾಧಿಕಾರತ್ವ

ಪ್ರಜಾಪ್ರಭುತ್ವ Vs ಸರ್ವಾಧಿಕಾರತ್ವ

ಆಗಲೇ ಜನತಾಪಕ್ಷವು 'ಪ್ರಜಾಪ್ರಭುತ್ವ ಬೇಕೋ ಅಥವಾ ಸರ್ವಾಧಿಕಾರತ್ವ ಬೇಕೋ ಆಯ್ಕೆ ನಿಮ್ಮದೇ' ಎಂಬ ಏಕಮೇವ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಿತು. ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ, ಸಂಜಯ್ ಮುಂತಾದವರು ಚುನಾವಣೆಯಲ್ಲಿ ನೆಲಕಚ್ಚಿದರು. ಜನತಾ ಪಕ್ಷ 298 ಸ್ಥಾನ ಮತ್ತು ಮಿತ್ರಪಕ್ಷಗಳು 47 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಸಂಸತ್ತಿನಲ್ಲಿ ಚುಕ್ಕಾಣಿ ಹಿಡಿಯಿತು. ಮೊರಾರ್ಜಿ ದೇಸಾಯಿ ಅವರು ಮೊದಲು ಕಾಂಗ್ರೆಸ್ಸೇತರ ಪ್ರಧಾನಿಯಾದರು.

ತುರ್ತು ಪರಿಸ್ಥಿತಿಗೆ ಜೈ ಎಂದಿದ್ದವರು!

ತುರ್ತು ಪರಿಸ್ಥಿತಿಗೆ ಜೈ ಎಂದಿದ್ದವರು!

ವಿನೋಬಾ ಭಾವೆ, ಮದರ್ ಥೆರೆಸಾ, ಜೆಆರ್ ಡಿ ಟಾಟಾ, ಖುಷ್ವಂತ್ ಸಿಂಗ್, ಒರಿಸ್ಸಾ ಮುಖ್ಯಮಂತ್ರಿ ನಂದಿನಿ ಸತ್ಪತಿ ಮುಂತಾದ ಮಹಾಮಹಿಮರು ಇಂದಿರಾಗೆ ಬಹುಪರಾಕ್ ಹೇಳುತ್ತಾ ತುರ್ತು ಪರಿಸ್ಥಿತಿಗೆ ಜೈ ಎಂದಿದ್ದರು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
1975 Indian Emergency- A brief recall on 39th year anniversary the Emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more