ಬೆಳಗಾವಿ : ಶಿಕ್ಷಕನ ಕೊಲೆಗೆ ಸಿನಿಮಾ ಸ್ಫೂರ್ತಿ!

Belgaum
ಬೆಳಗಾವಿ, ಜೂ.25 : ಸಿನಿಮಾ ನೋಡಿ ಅನ್ಯಾಯದ ವಿರುದ್ಧ ಸಿಡಿದೆದ್ದು, ಶಿಕ್ಷಕನಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬೆಳಗಾವಿ ಜಿಲ್ಲೆ ಕುಡಚಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಶಿಕ್ಷಕನ ಕೊಲೆ ಮತ್ತು ಮತ್ತೊಂದು ಕಳವು ಪ್ರಕರಣ ಬಗೆಹರಿದಿದೆ.

ರವಿ, ಯಲ್ಲಪ್ಪ, ಮಂಜು, ಸುಷ್ಮಾ, ಶ್ವೇತಾ ಬಂಧಿತ ಆರೋಪಿಗಳು. ರವಿ ಅವರ ಅಕ್ಕನ ಮಗಳು ಶ್ವೇತಾಗೆ ಮೃತ ಶಿಕ್ಷಕ ರಾಜೇಂದ್ರ ದೇವರೆಡ್ಡಿ ಕಿರುಕುಳ ನೀಡುತ್ತಿದ್ದ. ಆದ್ದರಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಸಿನಿಮಾ ಸ್ಪೂರ್ತಿ : ಕನ್ನಡದ ವಿಷ್ಣುಸೇನಾ ಚಿತ್ರ ನೋಡಿ ಸ್ಪೂರ್ತಿಗೊಂಡಿದ್ದ ಐವರು, ಅನ್ಯಾಯದ ವಿರುದ್ಧ ಸಿಡಿದು ನಿಲ್ಲಲು ಯೋಜನೆ ರೂಪಿಸಿದರು. ಬೆನಕಟ್ಟಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಂದ್ರ ದೇವರೆಡ್ಡಿ (42) ಬಂಧಿತೆ ಶ್ವೇತಾ ಅವರಿಗೆ ಕಿರುಕುಳ ನೀಡುತ್ತಿದ್ದ.

ಇದರಿಂದ ಶಿಕ್ಷಕರಿಗೆ ಬುದ್ಧಿ ಕಲಿಸಲು ನಿರ್ಧರಿಸಿದ ರವಿ, ಜೂ.15ರಂದು, ಸವದತ್ತಿ ತಾಲೂಕಿನ ಸೀತಾರಾಮ್ ಕ್ರಾಸ್ ಬಳಿ ಗುಂಡಿನ ರಾಜೇಂದ್ರ ಅವರ ಮೇಲೆ ದಾಳಿ ನಡೆಸಿದ್ದರು.

ಬೆನ್ನು ಮತ್ತು ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ರಾಜೇಂದ್ರ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸವದತ್ತಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಕುಡಚಿ ಠಾಣೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಮಂಗಳವಾರ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಒಂದು ಕಳವು ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+