ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಬಲ್ಡನ್: ಮೊದಲ ದಿನವೇ ಫೆಡರರ್ ಆಟ!

By Mahesh
|
Google Oneindia Kannada News

ಲಂಡನ್, ಜೂ.24: ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ ಟೂರ್ನಿ ಮುಗಿಯುತ್ತಿದ್ದಂತೆ ಟೆನಿಸ್ ಹಬ್ಬ ಆರಂಭವಾಗುತ್ತಿದೆ. ಸೋಮವಾರ ಸಂಜೆ(ಭಾರತೀಯ ಕಾಲಮಾನ) ಆರಂಭವಾಗಲಿರುವ ಹಸಿರು ಹಾಸಿನ ಟೆನಿಸ್ ಟೂರ್ನಿಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ವರ್ಷದ ಮೂರನೆ ಪ್ರತಿಷ್ಠಿತ ಗ್ರಾನ್ ಸ್ಲಾಮ್ ಟೆನಿಸ್ ಟೂರ್ನಿ 127ನೇ ಆವೃತ್ತಿ ವಿಂಬಲ್ಡನ್ ಚಾಂಪಿಯನ್ ಶಿಪ್ ಸೋಮವಾರ(ಜೂ.24) ಆರಂಭವಾಗಲಿದ್ದು, ಜು.7 ರ ತನಕ ನಡೆಯಲಿದೆ. ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಸಿಂಗಲ್ಸ್, ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಪಂದ್ಯಗಳು ನಡೆಯುತ್ತವೆ. ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ನಲ್ಲಿ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಹಾಗೂ ಸೆರೆನಾ ವಿಲಿಯಮ್ಸ್ ಹಾಲಿ ಚಾಂಪಿಯನ್ ಗಳಾಗಿದ್ದಾರೆ.

8ನೆ ಪ್ರಶಸ್ತಿಯ ಮೇಲೆ ಫೆಡರರ್ ಕಣ್ಣು: ಫ್ರೆಂಚ್ ಓಪನ್ ವರೆಗೆ ಯಾವೊಬ್ಬ ಆಟಗಾರನೂ ಒಂದೇ ಗ್ರಾನ್ ಸ್ಲಾಮ್ ಟೂರ್ನಿಯಲ್ಲಿ 8 ಪ್ರಶಸ್ತಿಗಳನ್ನು ಜಯಿಸಿಲ್ಲ. ರಫೆಲ್ ನಡಾಲ್ ಫ್ರೆಂಚ್ ಓಪನ್ ನಲ್ಲಿ ಈ ಸಾಧನೆಯನ್ನು ಮಾಡಿದ್ದರು. ಹಾಲಿ ಚಾಂಪಿಯನ್ ಫೆಡರರ್ 8ನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಜರ್ಮನಿಯ ಹ್ಯಾಲೆಯಲ್ಲಿ ಪ್ರಶಸ್ತಿಯನ್ನು ಜಯಿಸಿರುವ ಫೆಡರರ್ 10 ತಿಂಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದ್ದರು. ದಾಖಲೆ 17 ಗ್ರಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ಫೆಡರರ್ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Wimbledon Tennis fever, Mega Monday: Murray And Federer

ಲೋಕಲ್ ಹೀರೊ ಆಂಡಿ ಮುರ್ರೆ: ಕಳೆದ ವರ್ಷ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಫೆಡರರ್ ಗೆ ನಾಲ್ಕು ಸೆಟ್ ಗಳಿಂದ ಶರಣಾಗಿದ್ದ ಇಂಗ್ಲೆಂಡಿನ ಆಟಗಾರ ಆಂಡಿ ಮುರ್ರೆ ಈ ವರ್ಷ ಕೂಡ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಲಂಡನ್ ಒಲಿಂಪಿಕ್ಸ್ ನಲ್ಲಿ ಫೆಡರರ್ ರನ್ನು ಮಣಿಸಿ ಮುರ್ರೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.

2012ರ ಸೆಪ್ಟಂಬರ್ ನಲ್ಲಿ 76 ವರ್ಷಗಳ ಬಳಿಕ ಅಮೆರಿಕನ್ ಓಪನ್ ಗ್ರಾನ್ ಸ್ಲಾಮ್ ಟೂರ್ನಿಯನ್ನು ಜಯಿಸಿ ಇತಿಹಾಸ ಬರೆದಿದ್ದರು. ಬೆನ್ನು ನೋವಿನಿಂದಾಗಿ ಫ್ರೆಂಚ್ ಓಪನ್ ನಿಂದ ಹೊರಗುಳಿದಿದ್ದ ಮುರ್ರೆ ಕ್ವೀನ್ಸ್ ಕ್ಲಬ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದ್ದರು. ಈಗ 1936ರ ನಂತರ ಮತ್ತೊಮ್ಮೆ ವಿಂಬಲ್ಡನ್ ಕಿರೀಟ ಧರಿಸಲು ಸಜ್ಜಾಗಿದ್ದಾರೆ.

ಸೆರೆನಾ ಫೇವರಿಟ್: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆಲ್ಲಬಲ್ಲ ಫೇವರಿಟ್ ಆಟಗಾರ್ತಿಯಾಗಿದ್ದಾರೆ. ಇದೀಗ ಸತತ 31 ಪಂದ್ಯಗಳನ್ನು ಜಯಿಸಿರುವ ಸೆರನಾ ಕಳೆದ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಮೂರರಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಸೆರೆನಾ ಒಟ್ಟು 16 ಗ್ರಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸೆರೆನಾಗೆ 2004ರ ವಿಂಬಲ್ಡನ್ ಚಾಂಪಿಯನ್ ರಷ್ಯಾದ ಮರಿಯಾ ಶರಪೋವಾ ಸವಾಲು ಒಡ್ಡುವ ಸಾಧ್ಯತೆಯಿದೆ.

ಈ ವರ್ಷದ ಫ್ರೆಂಚ್ ಓಪನ್ ಫೈನಲ್ ನಲ್ಲಿ ಸೆರೆನಾರನ್ನು ಎದುರಿಸಿರುವ ಶರಪೋವಾ ಸೋಲನುಭವಿಸಿದ್ದರು. ಸೆರನಾ ವಿರುದ್ಧ ಆಡಿರುವ 13 ಪಂದ್ಯಗಳಲ್ಲಿ ಸೋತಿರುವ ಶರಪೋವಾ ದಾಖಲೆ ಉತ್ತಮವಾಗಿಲ್ಲ. 2011ರ ಚಾಂಪಿಯನ್ ಪೆಟ್ರಾ ಕ್ವಿಟೋವಾ, ಎರಡು ಬಾರಿ ಸೆಮಿಫೈನಲ್ ಗೆ ತಲುಪಿರುವ ವಿಶ್ವದ ಎರಡನೆ ಸ್ಥಾನದಲ್ಲಿರುವ ವಿಕ್ಟೋರಿಯ ಅಝರಿಂಕಾ, ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿರುವ ಅಗ್ನೆಸ್ಕಾ ರಾಂಡ್ವಾಸ್ಕ, ಮರಿಯೊನ್ ಬಾರ್ಟೊಲಿ ಕೂಡ ವಿಂಬಲ್ಡನ್ ಚಾಂಪಿಯನ್ ಶಿಪ್ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರಶಸ್ತಿ ಮೊತ್ತ ಹೆಚ್ಚಳ: 2012ರ ವಿಂಬಲ್ಡನ್ ಪ್ರಶಸ್ತಿ ಮೊತ್ತವನ್ನು ಈ ವರ್ಷ ಶೇ.40 ರಷ್ಟು ಹೆಚ್ಚಳಗೊಳಿಸಲಾಗಿದೆ. 2012ರಲ್ಲಿದ್ದ 16.1 ಮಿಲಿಯನ್ ಪೌಂಡ್ ಬಹುಮಾನ ಮೊತ್ತವನ್ನು ಈ ವರ್ಷ 22.6 ಮಿಲಿಯನ್ ಪೌಂಡ್ ಗೆ ಏರಿಸಲಾಗಿದೆ. ಪುರುಷ ಹಾಗೂ ಮಹಿಳಾ ಚಾಂಪಿಯನ್ ಗಳು ಕ್ರಮವಾಗಿ 1.6 ಮಿಲಿಯನ್ ಪೌಂಡ್ ಹಾಗೂ 1.15 ಮಿಲಿಯನ್ ಪೌಂಡ್ ನ್ನು ಬಹುಮಾನವಾಗಿ ಪಡೆಯಲಿದ್ದಾರೆ.

English summary
Tennis fever arrives at the All England club as Andy Murray prepares to make a fresh bid for Wimbledon victory. the first day of Wimbledon gets under way today(Jun.24) later with Roger Federer, Rafa Nadal, Andy Murray and Maria Sharapova in action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X