ಕೇದಾರನಾಥದಲ್ಲಿ ಮತ್ತೆ ಮಳೆ ಶುರು; ಪರಿಹಾರ ಸ್ಥಗಿತ

ಡೆಹ್ರಾಡೂನ್‌, ಜೂನ್ 24: ಹಿಮಾಲಯ ಸುನಾಮಿಯಿಂದ ತತ್ತರಿಸಿರುವ ಉತ್ತರಾಖಂಡ ರಾಜ್ಯದಲ್ಲಿ ಮತ್ತೆ ಮಳೆ ಕಾಟ ಶುರುವಾಗಿದೆ. ಕೆಟ್ಟ ಹವಾಮಾನದಿಂದಾಗಿ ಪರಿಹಾರ ಕಾರ್ಯಾಚರಣೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ. ಮಳೆ ಇನ್ನೂ ಮೂರು ದಿನ ಕಾಡಲಿದೆ.

ಹೆಚ್ಚು ಹಾನಿಗೊಳಗಾಗಿರುವ ಕೇದಾರನಾಥ ಧಾಮದಲ್ಲಿ ಇನ್ನೂ ಕನಿಷ್ಠ 15,000 ಮಂದಿ ಸಂತ್ರಸ್ತರಾಗಿದ್ದಾರೆ. ಅವರ ರಕ್ಷಣೆಗೆ ಭಾರತೀಯ ಸೈನಿಕರು, ವಾಯುಪಡೆ ಮತ್ತು ಸ್ಥಳೀಯ ಆಡಳಿತ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತಾದರೂ ಭಾನುವಾರ ರಾತ್ರಿಯಿಂದ ಮತ್ತೆ ಭೂಸ್ಖಲನವಾಗುತ್ತಿದೆ. ಜತೆಗೆ ಮಳೆಯೂ ಶುರುವಾಗಿದೆ.

ಇದರಿಂದ ಭೂ ಮತ್ತು ವಾಯು ಪಡೆ ರಕ್ಷಣಾಕಾರ್ಯಗಳಲ್ಲಿ ಅನಿವಾರ್ಯವಾಗಿ ನಿಲ್ಲಿಸಲಾಗಿದೆ. ರುದ್ರಪ್ರಯಾಗದಲ್ಲಿರುವ ಸೇನಾ ಬೇಸ್ ಕ್ಯಾಂಪಿನಿಂದ ಹೆಲಿಕಾಪ್ಟರುಗಳು ಮೇಲೇಳುತ್ತಿಲ್ಲ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ದುರಂತಕ್ಕೀಡಾದ ಸ್ಥಳಗಳಿಗೆ ಭೇಟಿ ನಿಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Uttarakhand Rain descends at Kedarnath rescue operations hit

ಇದುವರೆಗೆ ಸುಮಾರು 5,000 ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಜಲಪ್ರಳಯದಿಂದ ಸಂತ್ರಸ್ತಗೊಂಡಿರುವವರು ಅನ್ನಾಹಾರವಿಲ್ಲದೆ ದಿನದೂಡುತ್ತಿದ್ದಾರೆ. ಹವಾಮಾನ ಪ್ರತಿಕೂಲವಾಗಿರುವುದರಿಂದ ಯಾತ್ರಾರ್ಥಿಗಳ ಆರೋಗ್ಯವೂ ಹದಗೆಡುತ್ತಿದೆ.

ಉತ್ತರಕಾಶಿಯ ಹರಸಿಲ್ ಭಾಗದಲ್ಲಿ ಸಿಕ್ಕಿಹಾಕಿಕೊಂಡಿರುವ ಜನರ ಬಳಿ ತಲುಪಲು ರಕ್ಷಣಾ ಪಡೆಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ಬದರಿನಾಥ ಧಾಮದಲ್ಲೂ ಇದೇ ಪರಿಸ್ಥಿತಿ ಇದೆ.

ಸೋಂಕು ರೋಗಗಳು ಕಾಣಿಸಿಕೊಳ್ಳುವ ಭೀತಿಯಲ್ಲಿ ಹೆಣಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಅಂತಿಮಕ್ರಿಯೆಗಳನ್ನು ನೆರವೇರಿಸುವಂತೆ ಕೇದಾರನಾಥ ದೇವಾಲಯದ ಅರ್ಚಕರು ಕೋರಲಾಗಿದೆ ಎಂದು ಉತ್ತರಾಖಂಡ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+