ಮಣಿಪಾಲ್ ರೇಪ್: ಆರೋಪಿ ರೇಖಾ ಚಿತ್ರ ಬಿಡುಗಡೆ

Manipal University medical student gang-rape accused sketch released
ಉಡುಪಿ, ಜೂನ್ 24: ಕಸ್ತೂರಬಾ ಮೆಡಿಕಲ್ ಕಾಲೇಜಿನ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸರು ಒಬ್ಬ ಆರೋಪಿಯ ರೇಖಾಚಿತ್ರವನ್ನು (ಪಕ್ಕದ ಚಿತ್ರದಲ್ಲಿರುವಂತೆ) ಇಂದು ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ, ಘಟನೆಯನ್ನು ಖಂಡಿಸಿ ಎಬಿವಿಪಿ ಕರೆ ನೀಡಿದ್ದ ಬಂದ್ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಉಡುಪಿ ನಗರದಲ್ಲಿಂದು ಭಾರಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಘಟನೆಯ ಸಂಬಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ನಾಲ್ವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ರಾಜ್ಯ ಗೃಹ ಸಚಿವ ಕೆಜೆ ಜಾರ್ಜ್ ಅವರನ್ನು ಹೊರತುಪಡಿಸಿ, ಸ್ಥಳೀಯ ಪೊಲೀಸ್ ಅಧೀಕಾರಿಗಳೂ ಸೇರಿದಂತೆ ಬೇರೆ ಯಾರಿಗೂ ಬಾಧಿತ ಯುವತಿಯನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಲ್ಲ. ಯುವತಿಯ ಕುಟುಂಬಸ್ಥರು ಈ ನಿರ್ಬಂಧ ಹಾಕಿದ್ದಾರೆ.

ಗುರುವಾರ ರಾತ್ರಿ ತಿರುವನಂತಪುರ ಮೂಲದ 4ನೇ ವರ್ಷದ ಎಂಬಿಬಿಸ್ ವಿದ್ಯಾರ್ಥಿನಿಯನ್ನು ಆಟೋ ರಿಕ್ಷಾದಲ್ಲಿ ಅಪಹರಿಸಿದ ಮೂವರು ದುಷ್ಕರ್ಮಿಗಳು ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು. ಸುಮಾರು 3 ಗಂಟೆ ಕಾಲ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದರು.

ಯುವತಿಯನ್ನು ನೋಡಿಕೊಳ್ಳುತ್ತಿರುವ ಮಹಿಳಾ ಪೊಲೀಸರು ಯುವತಿ ನೀಡಿದ ಮಾಹಿತಿಯನ್ನಾಧರಿಸಿ ಒಬ್ಬ ಆರೋಪಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಮೇಲಿನ ರೇಖಾಚಿತ್ರದಲ್ಲಿರುವ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಸಾರ್ವಜನಿಕರು ಕೂಡಲೇ ಈ ಕೆಳಗಿನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವುದು.

Sadananda Tippannanavar, Manipal police inspector - 94808 05448

Udupi Special Cell - 97425 12100
0820 - 2521257

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+