ಧನಂಜಯ ಮಾತು ತಳ್ಳಿಹಾಕಿದ ಯಡಿಯೂರಪ್ಪ

'ಮೂರು ದಿನಗಳ ಮುಂಚೆ ಮೋದಿ ಮಧ್ಯಸ್ಥಿಕೆ ವಹಿಸಿದರೆ ತಮ್ಮ ಕೆಜೆಪಿ ಪಕ್ಷವು ಬಿಜೆಪಿಗೆ ವಾಪಸಾಗುವುದಂತೆ? ವಿ ಧನಂಜಯ ಕುಮಾರ್ ಅವರು ಹಾಗೆ ಹೇಳಿದ್ದಾರೆ? ನೀವು ಏನು ಹೇಳುತ್ತೀರಿ' ಎಂದು ಯಡಿಯೂರಪ್ಪ ಅವರನ್ನು ಇಂದು ಧರ್ಮಸ್ಥಳದಲ್ಲಿ ಸುದ್ದಿಗಾರರು ಕೇಳಿದ್ದಕ್ಕೆ ಯಡಿಯೂರಪ್ಪ ಅವರು ನಿರುತ್ಸಾಹದ ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ಅಂಥಾದ್ದೇನು ನಡೆದಿಲ್ಲ. ಕೆಜೆಪಿ ಮತ್ತು ಬಿಜೆಪಿ ಒಂದಾಗುವುದರ ಬಗ್ಗೆ ಯಾವುದೇ ಕಾಂಕ್ರಿಟ್ ಮಾತುಕತೆ ನಡೆದಿಲ್ಲ. ಸುಮ್ಮನೆ ಅಲ್ಲಲ್ಲಿ ಚರ್ಚೆಗೆ ಬರುತ್ತಿದೆ ಅಷ್ಟೇ. ಅದಕ್ಕಿಂತ ಹೆಚ್ಚಿಗೆ ಮುಂದುವರಿದಿಲ್ಲ' ಎಂದು ತಣ್ಣಗೆ ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಕೆಜೆಪಿ ನಾಯಕ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುವುದಕ್ಕೆ ಸಿದ್ಧ ಎಂದು ಕೆಜೆಪಿ ವಕ್ತಾರ ವಿ ಧನಂಜಯ ಕುಮಾರ್ ತಿಳಿಸಿದ್ದರು.












Click it and Unblock the Notifications