ಚಿತ್ರ: ಶಿರಡಿ ಸಾಯಿಬಾಬಾಗೆ ಭಾರಿ ಚಿನ್ನದ ಹಾರ
ಬೆಂಗಳೂರು, ಜೂ.21 :ಭಾರತದ ಶ್ರೀಮಂತ ದೇಗುಲಗಳಲ್ಲಿ ಒಂದೆನಿಸಿರುವ ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಭಕ್ತಾದಿಗಳು ಕಾಲಕಾಲಕ್ಕೆ ಯಥೇಚ್ಛವಾಗಿ ದಾನ ನೀಡುತ್ತಿದ್ದಾರೆ.
ಶುಕ್ರವಾರ (ಜೂ.21) ದೆಹಲಿ ಮೂಲದ ಭಕ್ತರೊಬ್ಬರು 51 ಚಿನ್ನದ ನಾಣ್ಯವುಳ್ಳ ಸುಮಾರು 521 ಗ್ರಾಮ್ ತೂಗುವ ಹಾರವನ್ನು ಭಗವಾನ್ ಸಾಯಿಬಾಬಾಗೆ ಅರ್ಪಿಸಿ ಧನ್ಯತೆ ಅನುಭವಿಸಿದ್ದಾರೆ. ಚಿನ್ನದ ಹಾರ ಹೇಗಿದೆ ತಪ್ಪದೇ ನೋಡಿ..
ಬಾಲಿವುಡ್ ನಟಿ ಲೀಸಾ ರೇ ಅವರು ಬೆಂಗಳೂರಿಗೆ ಬಂದಿದ್ದಾರೆ. ಕ್ಯಾನ್ಸರ್ ಪೀಡಿತರಾಗಿದ್ದ ಲೀಸಾ ಅವರು ಈಗ ಮಾರಕ ರೋಗದಿಂದ ಮುಕ್ತರಾಗಿ ಮತ್ತೊಮ್ಮೆ ಜಾಹೀರಾತು ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಫ್ಯಾಷನ್ ಶೋವೊಂದರಲ್ಲಿ ಹೊಚ್ಚ ಹೊಸ ವಾಚು ಬಿಡುಗಡೆಗೊಳಿಸಿದ ಲೀಸಾ ಚಿತ್ರ ಇಲ್ಲಿದೆ.
ಜಮ್ಮು ಕಾಶ್ಮೀರದಲ್ಲಿ 240 ಮೆಗಾ ವ್ಯಾಟ್ ಹೈಡಲ್ ಯೋಜನೆಗೆ ವೇದಿಕೆ ಸಜ್ಜಾಗಿದೆ. ಅದರ ಚಿತ್ರವನ್ನು ನೋಡಿ.. ಕರ್ನಾಟಕದ ಕರಾವಳಿ ಭಾಗದಲ್ಲಿ ನಡೆಯುವ ಕಂಬಳವನ್ನು ನೆನಪಿಸುವ ಚಿತ್ರ ಇಲ್ಲಿದೆ ಆದರೆ ಇದು ದಕ್ಷಿಣ 24 ಪರಗಾಣದಲ್ಲಿ ಕಂಡ ಚಿತ್ರ
ಉಳಿದಂತೆ ಬ್ರೆಜಿಲ್ ನಲ್ಲಿ ನಡೆದಿರುವ ಕಾನ್ಫಿಡೆರೇಷನ್ ಫುಟ್ಬಾಲ್ ಟೂರ್ನಿ ಚಿತ್ರಗಳು, ಇಂಗ್ಲೆಂಡಿನ ಕಾರ್ಡಿಫ್ ನ ಪಂದ್ಯದ ಚಿತ್ರಗಳು ಸೇರಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ..

ಸಾಯಿಬಾಬಾಗೆ ಭಾರಿ ಹಾರ
ಶುಕ್ರವಾರ (ಜೂ.21) ದೆಹಲಿ ಮೂಲದ ಭಕ್ತರೊಬ್ಬರು 51 ಚಿನ್ನದ ನಾಣ್ಯವುಳ್ಳ ಸುಮಾರು 521 ಗ್ರಾಮ್ ತೂಗುವ ಸುಮಾರು 16.28 ಲಕ್ಷ ರು ಮೌಲ್ಯದ ಹಾರವನ್ನು ಭಗವಾನ್ ಸಾಯಿಬಾಬಾಗೆ ಅರ್ಪಿಸಿ ಧನ್ಯತೆ ಅನುಭವಿಸಿದ್ದಾರೆ.

ಲೀಸಾ ರೇ ಬ್ಯಾಕ್
ಬೆಂಗಳೂರು: ಹೇಗಿದೆ ನೋಡಿ ಹೊಸ ಲುಕ್.. ಹೊಸ ವಾಚು

ಕಂಬಳವೇ ಇದು !
ಪಶ್ಚಿಮ ಬಂಗಾಳ: 24 ಪರಾಗಣ ಜಿಲ್ಲೆಯಲ್ಲಿ ಕಂಬಳ ಮಾದರಿ ಜೋಡೆತ್ತಿನ ಓಟ ಸ್ಪರ್ಧೆ

ಏಂಜಲೀನಾ ಜೋಲಿ
United Nations High Commissioner for Refugees(UNHCR) ನ ಪರವಾಗಿ ಏಂಜಲೀನಾ ಜೋಲಿ ಅವರು ಜೋರ್ಡಾನ್ನಿನ ಮಿಲಿಟರಿ ಕ್ಯಾಂಪಿನಲ್ಲಿರುವ ಸಿರಿಯಾದ ನಿರಾಶ್ರಿತ ಮಕ್ಕಳ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯ

ಕಟ್ಟಡ ಕುಸಿತ
ಮುಂಬೈ: ಮೂರು ಅಂತಸ್ತಿನ ಕಟ್ಟಡ ಕುಸಿತದ ನಂತರ ಅವಶೇಷಗಳನ್ನು ಎತ್ತ್ತುವಾಗ ಕಂಡು ಬಂದ ಚಿತ್ರ

ಇದು ನಿಜವೇ?
ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಇಟ್ಟಿರುವ ಗಂಟಿನ ಮೊತ್ತವನ್ನು ಪಿಟಿಐ ಗ್ರಾಫಿಕ್ಸ್ ನಲ್ಲಿ ನೀಡಲಾಗಿದೆ.

ಫುಟ್ಬಾಲ್ ಹಬ್ಬ
ಮುಂಬರುವ ವಿಶ್ವಕಪ್ ಫುಟ್ಬಾಲ್ ಗೆ ಭರ್ಜರಿ ತಯಾರಿ ನಡೆಸಿರುವ ಬ್ರೆಜಿಲ್ ನ ನೆಮಾರ್(ಬಲ) ಆಟದ ಭಂಗಿ

ವಾಹ್ ಏನು ಡೈವ್
ಬ್ರೆಜಿಲ್ ನಲ್ಲಿ ನಡೆದಿರುವ ಕಾನ್ಫಿಡೆರೇಷನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಜಪಾನಿನ ಗೋಲ್ ಕೀಪರ್ ಡೈವ್ ಹೊಡೆದಿದ್ದು ಹೀಗೆ

ಯಾರಪ್ಪ ನೀನು
ಭಾರತ ಹಾಗೂ ಶ್ರೀಲಂಕಾ ನಡುವಿನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಂಗ್ ಮಾಡುವಾಗ ಓಡಿಬಂದ ಅಭಿಮಾನಿಯನ್ನು ಹಿಡಿಯಲು ಸಿಬ್ಬಂದಿ ಯತ್ನಿಸುತ್ತಿದ್ದಾರೆ.

ಜಮ್ಮು ಕಾಶ್ಮೀರ
ಜಮ್ಮು ಕಾಶ್ಮೀರದಲ್ಲಿ 240 ಮೆಗಾ ವ್ಯಾಟ್ ಹೈಡಲ್ ಯೋಜನೆಗೆ ವೇದಿಕೆ ಸಜ್ಜಾಗಿದೆ.












Click it and Unblock the Notifications