ಚೆನ್ನೈ : ಅಗ್ಗದ ದರದಲ್ಲಿ ಅಮ್ಮಾ ನೀರು!

Jayalalitha,
ಚೆನ್ನೈ, ಜೂ.21: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರನ್ನು ಒಲಿಸಿಕೊಳ್ಳುವ ಕೆಲಸಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೈ ಹಾಕಿದ್ದಾರೆ. ಜನರಿಗೆ 10ರೂ.ಗೆ ಮಿನಿರಲ್ ವಾಟರ್ ನೀಡುವ ಯೋಜನೆ ಪ್ರಾರಂಭಿಸುವುದಾಗಿ ಅವರು ಘೋಷಿಸಿದ್ದಾರೆ.

ಒಂದು ರೂ.ಗೆ ಇಡ್ಲಿ ಸಾಂಬರ್, ಐದು ರೂ.ಗೆ ಅನ್ನ ಸಾಂಬರ್ ಕೊಡುವ ಯೋಜನೆ ಜಾರಿಗೆ ತಂದಿರುವ ಜಯಲಲಿತಾ ಈಗ ಜನರ ನೀರಿನ ಹಾಹ ತಣಿಸಲು ಮುಂದಾಗಿದ್ದಾರೆ. 10ರೂ.ಗೆ 1 ಲೀಟರ್ ಮಿನಿರಲ್ ವಾಟರ್ ನೀಡುವ ಯೋಜನೆ ಸೆಪ್ಟೆಂಬರ್ 15ರಿಂದ ಜಾರಿಗೆ ಬರಲಿದೆ.

ರಾಜ್ಯದ ಎಲ್ಲಾ ಜನರಿಗೂ ಶುದ್ಧ ಕುಡಿಯುವ ನೀರು ದೊರಕಬೇಕು ಎಂಬ ಉದ್ದೇಶದಿಂದ ಅಮ್ಮ ಮಿನಿರಲ್ ವಾಟರ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಜನರಿಗೆ ಹೇಗೆ ವಿತರಿಸಲಾಗುತ್ತದೆ. ನೀರು ಎಲ್ಲಿ ದೊರೆಯಲಿದೆ ಎಂಬುದು ಯೋಜನೆ ಆರಂಭವಾದ ನಂತರ ತಿಳಿಯಲಿದೆ.

ತರಕಾರಿಯಲ್ಲೂ ರಿಯಾಯಿತಿ : ಜನರಿಗೆ ಕಡಿಮೆ ದರದಲ್ಲಿ ತರಕಾರಿ ಒದಗಿಸುವ ಕಾರ್ಯಕ್ರಮವನ್ನು ಜಯಲಲಿತಾ ಪ್ರಾರಂಭಿಸಿದ್ದಾರೆ. ಗುರುವಾರ ಚೆನ್ನೈನಲ್ಲಿ 31 ಮಳಿಗೆಗಳನ್ನು ಉದ್ಘಾಟಿಸಿ, ಯೋಜನೆ ಜಾರಿಗೆ ತಂದಿದ್ದಾರೆ. ಇದರಿಂದಾಗಿ ರೈತರು ಬೆಳೆದ ತರಕಾರಿಗಳನ್ನು ಸರ್ಕಾರವೇ ಖರೀದಿಸಲಿದೆ.

ಸರ್ಕಾರ ಖರೀದಿಸಿದ ತರಕಾರಿಯನ್ನು ಮಳಿಗೆಗಳಲ್ಲಿ ಜನರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಒದಗಿಸುವುದು ಯೋಜನೆಯ ಪ್ರಮುಖ ಅಂಶ.ಟೊಮ್ಯಾಟೋ, ಬೀನ್ಸ್, ಮೆಣಸಿನಕಾಯಿ, ಕೋಸು, ಈರುಳ್ಳಿ, ಬದನೆಕಾಯಿಯನ್ನು ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ.

ವಿಧಾನಸಭೆ ಚುನಾವಣೆ ವೇಳೆ ಉಚಿತವಾಗಿ ಟಿವಿ, ಮಿಕ್ಸ್ರರ್ ವಿತರಿಸುವುದಾಗಿ ಜಯಲಿತಾ ಹೇಳಿದ್ದರು. ಅಧಿಕಾರ ಪಡೆದ ನಂತರ ಅದನ್ನು ಕಾರ್ಯರೂಪಕ್ಕೂ ತಂದರು. ನಂತರ ಒಂದು ರೂ.ಗೆ ಇಡ್ಲಿ, ಸಾಂಬರ್, 5 ರೂ.ಗೆ ಅನ್ನಸಾಂಬರ್ ಯೋಜನೆ ಜಾರಿಗೆ ತಂದು ಜನಪ್ರಿಯತೆ ಪಡೆದರು.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಮಿನರಲ್ ವಾಟರ್ ಮತ್ತು ತರಕಾರಿ ಯೋಜನೆ ಪ್ರಾರಂಭಿಸಿದ್ದಾರೆ. ಜನರು ನೀರು ಕುಡಿದು ಜಯಲಲಿತಾ ಅವರಿಗೆ ಮತ ನೀಡುತ್ತಾರಾ? ಎಂದು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+