ಚಿತ್ರ: ಕಿಡ್ನಾಪ್ ಕೇಸ್, ಕೋರ್ಟಿಗೆ ಬಂದ ಸನಾ ಖಾನ್
ನವದೆಹಲಿ, ಜೂ.20: ಅಪ್ರಾಪ್ತ ವಯಸ್ಕ ಯುವತಿಯೊಬ್ಬಳನ್ನು ಕಿಡ್ನಾಪ್ ಮಾಡಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸನಾ ಖಾನ್ ಅವರು ಥಾಣೆ ಕೋರ್ಟಿಗೆ ಗುರುವಾರ ಹಾಜರಾಗಿ ಹೊರ ಬಂದ ಚಿತ್ರ ಸಿಕ್ಕಿದೆ.
ಸನಾ ಅವರ ಕಸಿನ್ ಮದುವೆಯಾಗುವಂತೆ ಆ ಯುವತಿಯನ್ನು ಒತ್ತಾಯಿಸಲಾಗಿತ್ತು. ಆದರೆ, ಆಕೆ ಒಪ್ಪಿರಲಿಲ್ಲ ಹೀಗಾಗಿ ಆಕೆಯನ್ನು ಕಿಡ್ನಾಪ್ ಮಾಡಿ ಬೆದರಿಕೆ ಒಡ್ಡಲಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಈ ನಡುವೆ ಸಲ್ಮಾನ್ ಖಾನ್ ಅವರ ಆಪ್ತೆಯಾದ ಸನಾ ಖಾನ್ ಅವರು 'ಮೆಂಟಲ್' ಚಿತ್ರದ ಶೂಟಿಂಗ್ ಗೂ ಹಾಜರಾಗದೆ ನಾಪತ್ತೆಯಾಗಿದ್ದರು. ಅದರೆ, ನಂತರ ನಾನು ಎಲ್ಲೂ ಕಣ್ಮರೆಯಾಗಿಲ್ಲ, ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಇರಾಕಿನ ಉಗ್ರ ನಿಗ್ರಹ ದಳದ ಯೋಧರು ಕಣ್ಣಿಗೆ ಮಣ್ಣೆರಚುವ ದಿರಿಸಿನಲ್ಲಿ ವಿಮಾನ ಹೈಜಾಕ್ ಮಾಡುವ ಯತ್ನದಲ್ಲಿ ತೊಡಗಿದ್ದಾರೆ. ಬಾಗ್ದಾದ್ ನ ವಿಮಾನ ನಿಲ್ದಾಣದಲ್ಲಿ ಇರಾಕಿ ಯೋಧರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ನಾಗರಿಕ ವಿಮಾನಯಾನಕ್ಕೆ ಭಾರಿ ತೊಂದರೆ ಉಂಟು ಮಾಡಿರುವ ಉಗ್ರರನ್ನು ಮಟ್ಟ ಹಾಕಲು ಇರಾಕ್ ಪಡೆ ಸರ್ವ ಸನ್ನದ್ಧವಾಗುತ್ತಿದೆ.
ಬಾಲಿವುಡ್ ನಲ್ಲಿ ತಮ್ಮ ಲಕ್ ಪರೀಕ್ಷೆಯಲ್ಲಿ ತೊಡಗಿರುವ ರಜನಿಕಾಂತ್ ಅಳಿಯ ಧನುಷ್ ಅವರು ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಜೊತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದ 'ರಾನ್ ಝಾನಾ' ಚಿತ್ರದ ಪ್ರಚಾರಕ್ಕೆ ಬಂದ ಜೋಡಿಗಳ ಚಿತ್ರ ಇಲ್ಲಿದೆ
ಉಳಿದಂತೆ ತಮಿಳುನಾಡಿನ ಪುದುಕೋಟೈಯಲ್ಲಿನ ಭೀಕರ ಅಪಘಾತ, ಲತಾ ಮಂಗೇಷ್ಕರ್, ಚೋಕರ್ಸ್ ದಕ್ಷಿಣ ಆಫ್ರಿಕಾ ತಂದ ಇನ್ನಿತರ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ.

ನಟಿ ಸನಾ ಖಾನ್
ಬಾಲಿವುಡ್ ನಟಿ ಸನಾ ಖಾನ್ ಅವರು ಥಾಣೆ ಕೋರ್ಟಿಗೆ ಗುರುವಾರ ಹಾಜರಾಗಿ ಹೊರ ಬಂದ ಚಿತ್ರ ಸಿಕ್ಕಿದೆ.

ಇರಾಕ್ ಪಡೆ
ನಾಗರಿಕ ವಿಮಾನಯಾನಕ್ಕೆ ಭಾರಿ ತೊಂದರೆ ಉಂಟು ಮಾಡಿರುವ ಉಗ್ರರನ್ನು ಮಟ್ಟ ಹಾಕಲು ಇರಾಕ್ ಪಡೆ ಸರ್ವ ಸನ್ನದ್ಧವಾಗುತ್ತಿದೆ.

ಬಾಲಿವುಡ್ ನ ಹೊಸ ಜೋಡಿ
ಆನಂದ್ ಎಲ್ ರೈ ನಿರ್ದೇಶನದ 'ರಾನ್ ಝಾನಾ' ಚಿತ್ರದ ಪ್ರಚಾರಕ್ಕೆ ಬಂದ ಜೋಡಿ

ಚೋಕರ್ಸ್ ಚೋಕರ್ಸ್
ಇಂಗ್ಲೆಂಡಿನಲ್ಲಿ ನಡೆದಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ನಲ್ಲಿ ಸೋತು ಸುಣ್ಣುವಾಗಿ ಪೆವಿಲಿಯನ್ ಗೆ ಮರಳುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಸದಸ್ಯರು. ಪ್ರಮುಖ ಟೂರ್ನಿಯ ಪ್ರಮುಖ ಪಂದ್ಯಗಳಲ್ಲಿ ಸೋಲು ಕಾಣುವುದು ದಕ್ಷಿಣ ಆಫ್ರಿಕಾಕ್ಕೆ ಇದೇ ಮೊದಲಲ್ಲ.

ತಮಿಳುನಾಡಿನ ಅಪಘಾತ
ಪುದುಕೋಟೈ: ವಲ್ಲಾಥಿರಕ್ಕೊ ಎಂಬ ಗ್ರಾಮದಲ್ಲಿ ಮಿನಿ ವ್ಯಾನ್ ಹಾಗೂ ಬಸ್ ಡಿಕ್ಕಿಯಿಂದ ಸಂಭವಿಸಿತ್ತು. ಈ ದುರಂತದಲ್ಲಿ 9 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

ಘೋರ ಅಪಘಾತ
ಪುದುಕೋಟೈ: ವಲ್ಲಾಥಿರಕ್ಕೊ ಎಂಬ ಗ್ರಾಮದಲ್ಲಿ ಮಿನಿ ವ್ಯಾನ್ ಹಾಗೂ ಬಸ್ ಡಿಕ್ಕಿಯಿಂದ ಸಂಭವಿಸಿತ್ತು. ಈ ದುರಂತದಲ್ಲಿ 9 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಅಪಘಾತ ಸ್ಥಳದಲ್ಲಿ ಕಂಡು ಬಂದ ಜನಸಂದಣಿ

ಮಂಗೇಷ್ಕರ್ ಆತ್ಮಕಥೆ
ಮುಂಬೈ: ಸಂಗೀತ ನಿರ್ದೇಶಕ ಗಾಯಕ ಹೃದಯ ನಾಥ್ ಮಂಗೇಷ್ಕರ್ ಅವರು ತಮ್ಮ ಸೋದರಿ ಲತಾ ಮಂಗಷ್ಕೇರ್ ಅವರ ಆತ್ಮಕಥೆ ' ಅಕ್ಷಯ ಗಾನೆ' ಕೃತಿಯನ್ನು ಲೋಕಾರ್ಪಣೆ ಮಾಡಿದರು. ನಿರ್ದೇಶಕ ಆಶುತೋಷ್ ಗೌರಿಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗುವಾಹಟಿ ಚಿತ್ರ
ಗುವಾಹಟಿ: ಕಾಮಾಕ್ಯ ದೇಗುಲದ ಬಳಿ ಅಂಬುಬಾಚಿ ಮೇಳದ ಅಂಗವಾಗಿ ಭಜನೆ, ಕೀರ್ತನೆ ಸಾಗಿದೆ.












Click it and Unblock the Notifications