ಮತ್ತೆ ಜನಾರ್ದನ ರೆಡ್ಡಿ ಕೈಜಾರಿದ ಜಾಮೀನು

ಕರ್ನಾಟಕದ ಮಾಜಿ ಬಿಜೆಪಿ ಸಚಿವ ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಮೂನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿವಿ ಶ್ರೀನಿವಾಸ ರೆಡ್ಡಿ ಅವರು ಅಕ್ರಮ ಗಣಿಗಾಋಇಕೆ ಪ್ರಕರಣದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಆಂಧ್ರ ಹೈಕೋರ್ಟ್ ಇಂದು ಪುರಸ್ಕರಿಸಲಿಲ್ಲ.
ಕಳೆದ ವಾರವೇ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಕೆಜೆ ಶಂಕರ್ ಅವರು ತಮ್ಮ ತೀರ್ಪನ್ನು ಇಂದಿಗೆ ಕಾದಿರಿಸಿದ್ದರು. ಇಬ್ಬರನ್ನೂ ಜಾಮೀನಿನ ಮೇಲೆ ಹೊರಗೆ ಬಿಟ್ಟರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ರೆಡ್ಡಿ ದ್ವಯರಿಗೆ ಜಾಮೀನು ನೀಡಬಾರದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ವಾದವನ್ನು ಕೋರ್ಟ್ ಪುಸ್ಕರಿಸಿತು. ಹಾಗಾಗಿ ರೆಡ್ಡಿಗಳಿಗೆ ಜಾಮೀನು ಇನ್ನೂ ಕನ್ನಡಿಯ ಗಂಟಾಗಿದೆ.
ಜನಾರ್ದನ ರೆಡ್ಡಿ ಮತ್ತು ಅವರ ಸೋದರ ಸಂಬಂಧಿ ಶ್ರೀನಿವಾಸ ರೆಡ್ಡಿ ಪ್ರಭಾವಶಾಲಿಗಳು. ಅವರು ಜಾಮೀನಿನ ಮೇಲೆ ಹೊರಬಂದರೆ ಸಾಕ್ಷ್ಯಗಳನ್ನು ನಾಶಪಡಿಸಬಲ್ಲರು. ಹಾಗಾಗಿ ಅವರಿಗೆ ಜಾಮೀನು ಬೇಡ ಎಂದು ಸಿಬಿಐ ವಕೀಲರು ಕಳೆದ ವಾರ ಪ್ರತಿವಾದ ಮಂಡಿಸಿದ್ದರು. ಸಿಬಿಐ ಕೋರ್ಟ್ ಈ ಹಿಂದೆಯೇ ರೆಡ್ಡಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.
2011ರ ಸೆಪ್ಟೆಂಬರ್ 5ರಂದು ಅಂದಿನ ಸಿಬಿಐ ನಿರ್ದೇಶಕ ವಿ ಲಕ್ಷ್ಮಿನಾರಾಯಣ ಅವರು ರೆಡ್ಡಿ ದ್ವಯರನ್ನು ಬಳ್ಳಾರಿಯಲ್ಲಿ ಬಂಧಿಸಿದ್ದರು. ಜನಾರ್ದನ ರೆಡ್ಡಿ ಜಾಮೀನಿಗಾಗಿ ಲಂಚ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾರೆ. ರೆಡ್ಡಿ ವಿರುದ್ಧ ಬೆಂಗಲೂರು ಸಿಬಿಐ ಸಹ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿಕೊಂಡಿದೆ.












Click it and Unblock the Notifications