ಅನಾರೋಗ್ಯದ ನಡುವೆಯೂ ಅಡ್ವಾಣಿ-ಭಾಗವತ್‌ ಭೇಟಿ

advani-meets-rss-bhagwat-stresses-collective-leadership
ನವದೆಹಲಿ, ಜೂನ್ 20: ಅನಾರೋಗ್ಯದ ಮಧ್ಯೆಯೂ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರೊಂದಿಗೆ ಗುರುವಾರ ಮಹತ್ವದ ಮಾತುಕತೆ ನಡೆಸಿದರು.

ನರೇಂದ್ರ ಮೋದಿ ಅವರಿಗೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಮರುದಿನವೇ ಅಡ್ವಾಣಿ ಅವರು ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಈ ವೇಳೆ ಭಾಗವತ್‌ ಅವರು ಮಧ್ಯಪ್ರವೇಶಿಸಿ ಅಡ್ವಾಣಿ ಅವರ ರಾಜೀನಾಮೆ ಹಿಂಪಡೆಯುವಿಕೆಯಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಇಬ್ಬರ ಭೇಟಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಸಾಮೂಹಿಕ ನಾಯಕತ್ವಕ್ಕೆ ಒತ್ತು:
ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನರೆಂದ್ರ ಮೋದಿ ಅವರನ್ನು ನೇಮಕ ಮಾಡಿರುವುದಕ್ಕೆ ಕುತ್ತು ತರುವ ಧಾಟಿಯಲ್ಲಿ ಮಾತನಾಡಿರುವ ಅಡ್ವಾಣಿ ಅವರು 'ಸಾಮೂಹಿಕ ನಾಯಕತ್ವಕ್ಕೆ' ಒತ್ತು ನೀಡೋಣ ಎಂದು ಮೋಹನ್‌ ಭಾಗವತ್‌ ಅವರಿಗೆ ಸೂಚ್ಯವಾಗಿ ತಿಳಿಸಿದ್ದಾರೆ.

ಎನ್ ಡಿಎ ಮಿತ್ರ ಪಕ್ಷಗಳಿಂದ ಪ್ರತಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಾಮೂಹಿಕ ನಾಯಕತ್ವಕ್ಕೆ ಜೋತು ಬೀಳುವುದು ಒಳಿತು ಎಂದು ಭಾಗವತ್‌ ಅವರೆದುರು ಅಡ್ವಾಣಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಈ ಸಂದರ್ಭದಲ್ಲಿ ಅಡ್ವಾಣಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಆಳವಾಗಿ ಆಲೋಚಿಸುವುದಾಗಿ ಭಾಗವತ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಅಡ್ವಾಣಿ ಆಪ್ತ ಸುಧೀಂದ್ರ ವಿರೋಧ:
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಅಡ್ವಾಣಿ ಅವರ ಆಪ್ತ, ಅಥಣಿಯ ಸುಧೀಂದ್ರ ಕುಲಕರ್ಣಿ ಅವರು ಮೋದಿ ಮತ್ತು ರಾಜನಾಥ್ ವಿರುದ್ಧ ಕಿಡಿಕಾರಿದ್ದಾರೆ. ಮೋದಿ 'ನಿರಂಕುಶ ವ್ಯಕ್ತಿ'ಯಾಗಿದ್ದರೆ (autocrat) ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ 'ಗುಳ್ಳೆನರಿ' (foxy) ಎಂದು ಸುಧೀಂದ್ರ ಜರಿದಿದ್ದಾರೆ.

ನಿರಂಕುಶತ್ವದ ಮೋದಿ ಮತ್ತು 'ಗುಳ್ಳೆನರಿ' ರಾಜನಾಥ್ ಸಿಂಗ್ ಸೇರಿಕೊಂಡು ಸಮರ್ಥ ಪ್ರಜಾಪ್ರಭುತ್ವವಾದಿ (perfect democrat) ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಸುಧೀಂದ್ರ ವರ್ಣಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+