ಉತ್ತರ ಭಾರತ ಜಲ ಪ್ರಳಯಕ್ಕೆ ಕಾರಣವೇನು?

ಕೇದಾರನಾಥ, ಜೂ. 19 : ಕಳೆದ ಎಂಬತ್ತು ವರ್ಷಗಳಲ್ಲಿ ಕಂಡುಕೇಳರಿಯಥ ಭೀಕರ ವರ್ಷಧಾರೆ, ಉತ್ತರಾಖಂಡದಲ್ಲಿ ನೂರಕ್ಕೂ ಹೆಚ್ಚು ಜನರ ದುರ್ಮರಣ, ನೂರಾರು ಮನೆಗಳು ಬಿದ್ದು ಸೂರು ಕಳೆದುಕೊಂಡು ಅತಂತ್ರ ಸ್ಥತಿಯಲ್ಲಿ ಸಾವಿರಾರು ಸ್ಥಳೀಯರು, ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಎಪ್ಪತ್ತು ಸಾವಿರಕ್ಕೂ ಹೆಚ್ಚು ಯಾತ್ರಿಕರು. ಈ ಪ್ರಕೃತಿ ವಿಕೋಪಕ್ಕೆ ಕಾರಣವಾದರೂ ಏನು?

ಪರಿಸರ ತಜ್ಞರು ಹೇಳುವುದೇನೆಂದರೆ, ಈ ಪ್ರಕೃತಿ ವಿಕೋಪ ಕೂಡ ಮಾನವ ನಿರ್ಮಿತ. ಸಾವಿರಾರು ಎಕರೆಗಳಷ್ಟು ಅರಣ್ಯ ಸರ್ವನಾಶ, ಕಟ್ಟಬಾರದ ಸ್ಥಳದಲ್ಲೆಲ್ಲ ನಿರ್ಮಾಣವಾದ ಕಟ್ಟಡಗಳೇ ಈ ವಿಕೋಪಕ್ಕೆ ಕಾರಣ. ಭೂಮಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ಅತ್ಯಾಚಾರವೇ ಈ ಮಿತಿಮೀರಿದ ವರ್ಷಧಾರೆಗೆ ಮತ್ತು ವಿಕೋಪಕ್ಕೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು. ಇದು ನಿಜವೂ ಹೌದು.

ಗಂಗೆಯ ದಡದಲ್ಲಿ ನಿರ್ಮಾಣವಾಗಿದ್ದ ನೂರಾರು ಕಟ್ಟಡಗಳು ಇಸ್ಪೀಟ್ ಎಲೆಗಳಿಂದ ನಿರ್ಮಾಣ ಮಾಡಿದ ಸೌಧ ಕುಸಿದಂತೆ ಕುಸಿದುಬಿದ್ದಿವೆ. ಈ ಮನೆಗಳೆಲ್ಲ ಅಕ್ರಮವಾಗಿ ನಿರ್ಮಿಸಿದಂಥವು ಮತ್ತು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ನಿರ್ಮಿಸಿದಂಥವು. ಈ ಕುರಿತು ಸಾಕಷ್ಟು ಬಾರಿ ಎಚ್ಚರಿಸಿದ್ದರೂ ಅಕ್ರಮಗಳು ನಡೆಯುತ್ತಲೇ ಇದ್ದರಿಂದ ಪ್ರಕೃತಿಯೇ ಇವರಿಗೆ ಪಾಠ ಕಲಿಸಿದೆ ಅಂತಾರೆ ಪರಿಸರತಜ್ಞರು.

ಮಳೆಯ ಪ್ರಮಾಣ ತಗ್ಗಿದ್ದರೂ, ಹಲವಾರು ಕಡೆಗಳಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಸೇನೆ ಶ್ರಮವಹಿಸಿ ಗುಡ್ಡಗಾಡುಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಪಾರುಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಗುಡ್ಡಗಳು ಕುಸಿದಿರುವುದರಿಂದ, ಸೇತುವೆಗಳು ಕೊಚ್ಚಿಹೋಗಿರುವುದರಿಂದ ರಕ್ಷಣಾಕಾರ್ಯ ಭಾರೀ ಕಷ್ಟಕರವಾಗಿದೆ.

ಸೇನೆಯಿಂದ ಸಂತ್ರಸ್ತರ ರಕ್ಷಣಾಕಾರ್ಯ

ಸೇನೆಯಿಂದ ಸಂತ್ರಸ್ತರ ರಕ್ಷಣಾಕಾರ್ಯ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಗೋವಿಂದ ಘಾಟ್‌ದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಭಾರತೀಯ ಸೇನೆ ತೊಡಗಿರುವುದು.

ಗಂಗೆಯ ಪ್ರವಾಹಕ್ಕೆ ಕೊಚ್ಚಿಹೋದ ಮನೆಗಳು

ಗಂಗೆಯ ಪ್ರವಾಹಕ್ಕೆ ಕೊಚ್ಚಿಹೋದ ಮನೆಗಳು

ಗಂಗೆ ಸಿಡಿದೆದ್ದುಬಿಟ್ಟರೆ ತಡೆಯುವವರು ಯಾರು? ಭೂಮಿಯ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಗಂಗೆಯೇ ಮುನಿದು ಜನರ ಮೇಲೆ ಸೇಡು ತೀರಿಸಿಕೊಂಡಿದ್ದಾಳೆ. ಇನ್ನಾದರೂ ಮನುಜರು ಎಚ್ಚೆತ್ತುಕೊಳ್ಳುವರೆ?

ಸೇನೆಯಿಂದ ಸಂತ್ರಸ್ತರ ರಕ್ಷಣಾಕಾರ್ಯ

ಸೇನೆಯಿಂದ ಸಂತ್ರಸ್ತರ ರಕ್ಷಣಾಕಾರ್ಯ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಗೋವಿಂದ ಘಾಟ್‌ದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಭಾರತೀಯ ಸೇನೆ ತೊಡಗಿರುವುದು. ಈ ಚಿತ್ರ ನೋಡಿದರೇ ಗೊತ್ತಾಗುತ್ತದೆ ರಕ್ಷಣಾ ಕಾರ್ಯ ಎಷ್ಟು ಕ್ಲಿಷ್ಟಕರ ಕೆಲಸವೆಂದು. ಸೇನಾ ಸಿಬ್ಬಂದಿಗೆ ಒಂದು ಹ್ಯಾಟ್ಸಾಫ್.

ಆಯ ತಪ್ಪಿ ಬಿದ್ದರೆ ಗೋವಿಂದ ಗೋವಿಂದ

ಆಯ ತಪ್ಪಿ ಬಿದ್ದರೆ ಗೋವಿಂದ ಗೋವಿಂದ

ಚಮೋಲಿಯ ಗೋವಿಂದ ಘಾಟ್ ದಲ್ಲಿ ಸಿಲುಕಿಕೊಂಡಿದ್ದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸೇನಾ ಸಿಬ್ಬಂದಿ ಹರಸಾಹಸಪಡುತ್ತಿರುವುದು.

ಸೇನೆಯಿಂದ ಸಂತ್ರಸ್ತರ ರಕ್ಷಣಾಕಾರ್ಯ

ಸೇನೆಯಿಂದ ಸಂತ್ರಸ್ತರ ರಕ್ಷಣಾಕಾರ್ಯ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಗೋವಿಂದ ಘಾಟ್‌ದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಭಾರತೀಯ ಸೇನೆ ತೊಡಗಿರುವುದು.

ಉಳಿದಿರುವುದು ಇಷ್ಟೇ

ಉಳಿದಿರುವುದು ಇಷ್ಟೇ

ಮಳೆಯ ರುದ್ರನರ್ತನಕ್ಕೆ ಸಿಲುಕಿದ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಉಳಿದಿರುವುದು ಇಷ್ಟೇ.

ಹರೋಹರ

ಹರೋಹರ

ಶಿವನ ಜಟೆಯಿಂದ ಚಿಮ್ಮಿದಳೆನ್ನಳಾದ ಗಂಗೆ ಸಿಡಿದೆದ್ದರೆ ಮನೆಯೇನು, ಗುಡಿಯೇನು? ಹಾದಿಗೆ ಸಿಕ್ಕಿದ್ದೆಲ್ಲ ಧ್ವಂಸ ಮಾಡಿದ್ದಾಳೆ ಗಂಗೆ. ಶಿವ ಮಾತ್ರ ಮಂದಸ್ಮಿತನಾಗಿ ಎಲ್ಲವನ್ನೂ ನೋಡುತ್ತಿದ್ದಾನೆ.

ಸಾಲುಗಟ್ಟಿ ನಿಂತ ವಾಹನಗಳು

ಸಾಲುಗಟ್ಟಿ ನಿಂತ ವಾಹನಗಳು

ಉತ್ತರಾಖಂಡದ ಹಲವಾರು ಕಡೆಗಳಲ್ಲಿ ಮಳೆಯಿಂದಾಗಿ ಗುಡ್ಡ ಕುಸಿತ, ಭೂಕುಸಿತದಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ವಾಹನಗಳು ಸಲಿಸಲಾರದೆ ನಿಂತಲ್ಲಿಯೇ ನಿಂತಿವೆ. ಹಲವಾರು ಕಡೆ ಸೇತುವೆಗಳು ಕೂಡ ಕೊಚ್ಚಿಹೋಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+